ದ್ರಾವಿಡ್- ಗಂಗೂಲಿ ದಾಖಲೆ ಮುರಿದ ಕೊಹ್ಲಿ-ರಹಾನೆ!
ಪುಣೆ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸೆಂಚುರಿ, ಅಜಿಂಕ್ಯ ರಹಾನೆ ಹಾಫ್ ಸೆಂಚುರಿ ಸಿಡಿಸಸಿ ದಾಖಲೆ ಬರೆದಿದ್ದಾರೆ. ಇವರಿಬ್ಬರ ಜೊತೆಯಾಟಕ್ಕೆ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ದಾಖಲೆ ಪುಡಿ ಪುಡಿಯಾಗಿದೆ.
ಪುಣೆ(ಅ.11): ಸೌತ್ ಆಫ್ರಿಕಾ ವಿರುದ್ಧದ ಪುಣೆ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ದಾಖಲೆಯ ಜೊತೆಯಾಟ ನೀಡಿದ್ದಾರೆ. ಕೊಹ್ಲಿ ಸೆಂಚುರಿ ದಾಖಲಿಸಿದ್ದರೆ, ರಹಾನೆ ಹಾಫ್ ಸೆಂಚುರಿ ಸಿಡಿಸಿ ಮುನ್ನಗ್ಗುತ್ತಿದ್ದಾರೆ. ಇವರಿಬ್ಬರ ಜೊತೆಯಾದಿಂದ ಹಳೇ ದಾಖಲೆ ಪುಡಿ ಪುಡಿಯಾಗಿದೆ.
ಇದನ್ನೂ ಓದಿ: ಸೆಂಚುರಿ ಸಿಡಿಸಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!
ಸೌತ್ ಆಫ್ರಿಕಾ ವಿರುದ್ದ 4ನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಗರಿಷ್ಠ ಜೊತೆಯಾಟ ನೀಡಿದ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ 4ನೇ ವಿಕೆಟ್‌ಗೆ 145 ರನ್ ಸಿಡಿಸಿದ್ದರು. ಇದೀಗ ಕೊಹ್ಲಿ ಹಾಗೂ ರಹಾನೆ 147* ರನ್ ಸಿಡಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಇದನ್ನೂ ಓದಿ INDvSA ಪಣೆ ಟೆಸ್ಟ್; ಹಾಫ್ ಸೆಂಚುರಿ ಸಿಡಿಸಿದ ಅಜಿಂಕ್ಯ ರಹಾನೆ!
INDvSA: 4ನೇ ವಿಕೆಟ್ ಗರಿಷ್ಠ ಜೊತೆಯಾಟ
147*; ಕೊಹ್ಲಿ -ರಹಾನೆ, ಪುಣೆ, 2019
145; ದ್ರಾವಿಡ್- ಗಂಗೂಲಿ, ಜೋಹಾನ್ಸ್‌ಬರ್ಗ್, 1996
136; ಸೆಹ್ವಾಗ್- ಬದ್ರಿನಾಥ್, ನಾಗ್ಪುರ, 2009
108; ದ್ರಾವಿಡ್- ಗಂಗೂಲಿ, ಜೋಹಾನ್ಸ್‌ಬರ್ಗ್ 1996
ಇದನ್ನೂ ಓದಿ ರಬಾಡ ಸ್ಲೆಡ್ಜ್‌ಗೆ ತಾಳ್ಮೆ ಕಳೆದುಕೊಳ್ಳದ ಪೂಜಾರ
ಪುಣೆ ಟೆಸ್ಟ್ ಪಂದ್ಯದ 2ನೇ ದಿನದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಟೀಂ ಇಂಡಿಯಾ ಲಂಚ್ ಬ್ರೇಕ್ ವೇಳೆ 3 ವಿಕೆಟ್ ನಷ್ಟಕ್ಕೆ 356 ರನ್ ಸಿಡಿಸಿದೆ. ವಿರಾಟ್ ಕೊಹ್ಲಿ ಅಜೇಯ 104 ರನ್ ಹಾಗೂ ಅಜಿಂಕ್ಯ ರಹಾನೆ ಅಜೇಯ 58 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.