ಪಿಂಕ್ ಬಾಲ್ ಟೆಸ್ಟ್ ಪಂದ್ಯ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಅಡಿಲೇಡ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಘಾತಕಾರಿ ಸೋಲು ಅನುಭವಿಸಿದೆ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಟೀಂ ಇಂಡಿಯಾಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ.

ಹೌದು, ಟೀಂ ಇಂಡಿಯಾ ಹಿರಿಯ ವೇಗಿ ಮೊಹಮದ್‌ ಶಮಿ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಗೆ ತೆರಳುವುದು ಮತ್ತಷ್ಟು ಅನುಮಾನವೆನಿಸಿದೆ. ಫಿಟ್ನೆಸ್‌ ಸಾಬೀತಿಗಾಗಿ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಆಡುತ್ತಿರುವ ಶಮಿ ಅವರ ಮಂಡಿ ಗಾಯ ಉಲ್ಭಣಿಸಿದೆ ಎಂದು ನಾಯಕ ರೋಹಿತ್‌ ಶರ್ಮಾ ತಿಳಿಸಿದ್ದಾರೆ. 

ಭಾನುವಾರ ಸುದ್ದಿಗೋಷ್ಠಿಯಲ್ಲಿ ಶಮಿ ವಾಪಸಾತಿ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್‌, ‘ಶಮಿಗೆ ಭಾರತ ತಂಡದ ಬಾಗಿಲು ತೆರೆದಿದೆ. ಆದರೆ, ಮುಷ್ತಾಕ್‌ ಅಲಿ ಟಿ20ಯಲ್ಲಿ ಆಡುತ್ತಿರುವ ಶಮಿ ಅವರ ಮಂಡಿಯಲ್ಲಿ ಊತ ಕಾಣಿಸಿಕೊಂಡಿದ್ದು, ಬಿಸಿಸಿಐ ವೈದ್ಯಕೀಯ ತಂಡ ತೀವ್ರ ನಿಗಾ ವಹಿಸುತ್ತಿದೆ. ಅವರ ವಿಚಾರದಲ್ಲಿ ನಾವು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದರು.

ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌: 3ನೇ ಸ್ಥಾನಕ್ಕೆ ಕುಸಿದ ಭಾರತ, ಅಗ್ರಸ್ಥಾನಕ್ಕೇರಿದ ಆಸೀಸ್‌

2ನೇ ಸಲ ಪಿಂಕ್‌ ಟೆಸ್ಟಲ್ಲಿ ಭಾರತದ ಪ್ಲಾಫ್‌ ಶೋ!

ಭಾರತ ತಂಡ ಸತತ 2ನೇ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲೂ ಹಗಲು-ರಾತ್ರಿ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಅವಮಾನಕರ ಸೋಲನುಭವಿಸಿದೆ. 2020ರ ಡಿಸೆಂಬರ್‌ನಲ್ಲಿ ಭಾರತ ತಂಡ ಅಡಿಲೇಡ್‌ನಲ್ಲಿ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗೆ ಆಲೌಟಾಗಿತ್ತು. ಅದರ ಕಹಿ ನೆನಪು ಮರೆಯುವ ಮುನ್ನ, 10 ವಿಕೆಟ್‌ ಸೋಲು ಎದುರಾಗಿದೆ. ಇನ್ನು, 2020ರ ಅಡಿಲೇಡ್‌ ಸೋಲಿನ ಬಳಿಕ ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೆಸ್ಟ್‌ ಪಂದ್ಯ ಸೋತಿದೆ.

ಜಯ: ಡೇ-ನೈಟ್‌ ಟೆಸ್ಟಲ್ಲಿ ಆಸ್ಟ್ರೇಲಿಯಾಗಿಲ್ಲ ಸರಿಸಾಟಿ!

ಪಿಂಕ್‌ ಬಾಲ್‌ ಅಂದರೆ ಹಗಲು-ರಾತ್ರಿ ನಡೆಯುವ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಮತ್ತೊಮ್ಮೆ ಪರಾಕ್ರಮ ಮೆರೆದಿದೆ. ತಂಡ ಈ ವರೆಗೂ 13 ಹಗಲು-ರಾತ್ರಿ ಟೆಸ್ಟ್‌ ಆಡಿದ್ದು, 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಪೈಕಿ ಅಡಿಲೇಡ್‌ನಲ್ಲಿ ಆಡಿರುವ 8 ಪಂದ್ಯಗಳಲ್ಲೂ ತಂಡಕ್ಕೆ ಗೆಲುವು ಲಭಿಸಿದೆ. ಈ ವರ್ಷದ ಆರಂಭದಲ್ಲಿ ಬ್ರಿಸ್ಬೇನ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಸೋತಿದ್ದು, ಆಸೀಸ್‌ಗೆ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಎದುರಾದ ಏಕೈಕ ಸೋಲು.

ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ಅನ್ಯಾಯ! ಕಾಂಗರೂ ನೆಲದಲ್ಲಿ ಮಹಾ ಮೋಸ!

19ನೇ ಬಾರಿ: ಭಾರತ ಟೆಸ್ಟ್‌ನಲ್ಲಿ 19ನೇ ಬಾರಿ 10 ವಿಕೆಟ್‌ ಸೋಲನುಭವಿಸಿದೆ. ಇದು 2ನೇ ಗರಿಷ್ಠ. ಇಂಗ್ಲೆಂಡ್‌(25) ಅತಿ ಹೆಚ್ಚು ಬಾರಿ ಈ ರೀತಿ ಸೋಲು ಕಂಡಿವೆ.

32ನೇ ಸಲ: ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 32ನೇ ಬಾರಿ 10 ವಿಕೆಟ್‌ ಜಯಗಳಿಸಿದೆ. ಇದು ಗರಿಷ್ಠ. ವಿಂಡೀಸ್‌ 28 ಬಾರಿ ಈ ಸಾಧನೆ ಮಾಡಿದೆ.

12ನೇ ಬಾರಿ: ಕಮಿನ್ಸ್‌ 2018ರ ಬಳಿಕ 12ನೇ ಬಾರಿ 5 ವಿಕೆಟ್‌ ಗೊಂಚಲು ಪಡೆದರು. ಇದು ಯಾವುದೇ ಆಟಗಾರನ ಪೈಕಿ ಗರಿಷ್ಠ.

02ನೇ ಸೋಲು: ಭಾರತ ಹಗಲು-ರಾತ್ರಿ ಟೆಸ್ಟ್‌ನಲ್ಲಿ 2ನೇ ಸೋಲನುಭವಿಸಿತು. ತಂಡ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದೆ.