ಟೀಂ ಇಂಡಿಯಾದಿಂದ ದೀಪಾವಳಿ ಮತ್ತಷ್ಟು ವಿಶೇಷವಾಗಿದೆ, ರೋಹಿತ್ ಸೈನ್ಯಕ್ಕೆ ಮೋದಿ ಅಭಿನಂದನೆ!
ನೆದರ್ಲೆಂಡ್ ವಿರುದ್ಧದ ಭಾರತದ ಭರ್ಜರಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಅಭೂತಪೂರ್ವ ಗೆಲುವಿನಿಂದ ಭಾರತ ದೀಪಾವಳಿ ಮತ್ತಷ್ಟು ವಿಶೇಷವಾಗಿದೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಸಮಿಫೈನಲ್ ಪಂದ್ಯಕ್ಕೆ ಶುಭಕೋರಿದ್ದಾರೆ.
ನವದೆಹಲಿ(ನ.12) ಐಸಿಸಿ ವಿಶ್ವಕಪ್ 2023 ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ ನೆದರ್ಲೆಂಡ್ ವಿರುದ್ಧ 160 ರನ್ ಗೆಲುವು ದಾಖಲಿಸಿದೆ. ಈ ಮೂಲಕ 9 ಲೀಗ್ ಪಂದ್ಯ ಗೆದ್ದು ಸೆಮಿಫೈನಲ್ ಪಂದ್ಯಕ್ಕೆ ಸಜ್ಜಾಗಿದೆ. ನೆದರ್ಲೆಂಡ್ ವಿರುದ್ಧ ಭಾರತದ ಗೆಲುವಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ದೀಪಾವಳಿ ಮತ್ತಷ್ಟು ವಿಶೇಷವಾಗಿದೆ ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಮೋದಿ ಶುಭಕೋರಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟ್ ತಂಡದಿಂದ ಈ ಬಾರಿಯ ದೀಪಾವಳಿ ಹಬ್ಬ ಮತ್ತಷ್ಟು ವಿಶೇಷವಾಗಿದೆ. ನೆದರ್ಲೆಂಡ್ ವಿರುದ್ಧ ಸಾಧಿಸಿದ ಅಭೂತಪೂರ್ವ ಗೆಲುವಿಗೆ ಭಾರತ ತಂಡಕ್ಕೆ ಅಭಿನಂದನೆಗಳು. ಪ್ರತಿಭೆ ಹಾಗೂ ಕೌಶಲ್ಯ, ಟೀಂ ವರ್ಕ್ ಹಾಗೂ ಪ್ರಭಾವಶಾಲಿ ಪ್ರದರ್ಶನಕ್ಕೆ ಸಿಕ್ಕ ಗೆಲುವು. ಸೆಮಿಫೈನಲ್ ಪಂದ್ಯಕ್ಕೆ ಶುಭಾಶಯಗಳು. ಭಾರತದ ಪ್ರದರ್ಶವನ್ನು ದೇಶ ಸಂಭ್ರಮಿಸಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕೀಪರ್, ಅಯ್ಯರ್ ಹೊರತುಪಡಿಸಿ 9 ಮಂದಿ ಬೌಲಿಂಗ್ ದಾಖಲೆ, ರೋಹಿತ್-ಕೊಹ್ಲಿಗೆ ವಿಕೆಟ್!
ನೆದರ್ಲೆಂಡ್ ವಿರುದ್ಧದ ಗೆಲುವಿನಿಂದ ಭಾರತ ಲೀಗ್ ಹಂತದ ಎಲ್ಲಾ 9 ಪಂದ್ಯ ಗೆದ್ದುಕೊಂಡಿದೆ. ಈ ಮೂಲಕ 18 ಅಂಕ ಸಂಪಾದಿಸಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ 7 ಗೆಲುವಿನ ಮೂಲಕ 14 ಅಂಕ ಪಡೆದುಕೊಂಡಿದೆ. 7 ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ 14 ಅಂಕದೊಂದಿಗೆ 3ನೇ ಸ್ಥಾನದಲ್ಲಿದ್ದರೆ, 5 ಗೆಲುವಿನ ಮೂಲಕ 10 ಅಂಕ ಪಡೆದಿರುವ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ.
ನವೆಂಬರ್ 15 ರಿಂದ ಸೆಮಿಫೈನಲ್ ಪಂದ್ಯಗಳು ಆರಂಭಗೊಳ್ಳುತ್ತಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡ ಹೋರಾಟ ನಡೆಸಲಿದೆ. ಈ ಪಂದ್ಯ ಮುಂಬೈನ ವಾಂಖೆಡೆಯಲ್ಲಿ ನಡೆಯಲಿದೆ. ಇನ್ನು ಎರಡನೇ ಸೆಮಿಫೈನಲ್ ಪಂದ್ಯ ನವೆಂಬರ್ 16ರಂದು ನಡೆಯಲಿದೆ. ಈ ಪಂದ್ಯ ಕೋಲ್ಕತಾದಲ್ಲಿ ನಡೆಯಲಿದೆ. ನವೆಂಬರ್ 19 ರಂದು ಅಹಮ್ಮದಾಬಾದ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
INDVNED ಕೊಹ್ಲಿ ಬೌಲಿಂಗ್‌ನಲ್ಲಿ ಬಿತ್ತು ವಿಕೆಟ್, ಅನುಷ್ಕಾ ಶರ್ಮಾ ರಿಯಾಕ್ಷನ್ ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಭಾರತ, ಆಸ್ಟೇಲಿಯಾ ವಿರುದ್ಧ 6 ವಿಕೆಟ್ ಗೆಲುವು ಕಂಡಿತ್ತು. ಆಫ್ಘಾನಿಸ್ತಾನ ವಿರುದ್ದ 8 ವಿಕೆಟ್ ಗೆಲುವು, ಪಾಕಿಸ್ತಾನ ವಿರುದ್ದ 7 ವಿಕೆಟ್ ಗೆಲುವು, ಬಾಂಗ್ಲಾದೇಶ ವಿರುದ್ದ 7 ವಿಕೆಟ್ ಗೆಲುವು, ನ್ಯೂಜಿಲೆಂಡ್ ವಿರುದ್ದ 4 ವಿಕೆಟ್ ಗೆಲುವು, ಇಂಗ್ಲೆಂಡ್ ವಿರುದ್ದ 100 ರನ್ ಗೆಲುವು, ಶ್ರೀಲಂಕಾ ವಿರುದ್ಧ 302 ರನ್ ಗೆಲುವು, ಸೌತ್ ಆಫ್ರಿಕಾ ವಿರುದ್ದ 243 ರನ್ ಗೆಲುವು ಹಾಗೂ ನೆದರ್ಲೆಂಡ್ ವಿರುದ್ದ 160 ರನ್ ಗೆಲುವು ದಾಖಲಿಸಿ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದೆ.