Asianet Suvarna News Asianet Suvarna News

ICC Media Rights ಡಿಸ್ನಿ ಸ್ಟಾರ್‌ ತೆಕ್ಕೆಗೆ ಐಸಿಸಿ ಪಂದ್ಯಗಳ ಪ್ರಸಾರ ಹಕ್ಕು..!

ಐಸಿಸಿ ಕ್ರಿಕೆಟ್‌ ಟೂರ್ನಿ ಮಾಧ್ಯಮ ಹಕ್ಕು ಪಡೆದುಕೊಂಡ ಸ್ಟಾರ್ ಸ್ಪೋರ್ಟ್ಸ್‌
2024-2027ರ ಅವಧಿಯಲ್ಲಿ ಟಿ.ವಿ. ಹಾಗೂ ಡಿಜಿಟಲ್‌ ಹಕ್ಕು ಡಿಸ್ನಿ ಸ್ಟಾರ್‌
ಪ್ರಸಾರ ಹಕ್ಕಿನ ಮೌಲ್ಯವನ್ನು ಬಹಿರಂಗಪಡಿಸಿಲ್ಲ

Disney Star Wins ICC Media Rights for Indian Market From 2024 to 2027 kvn
Author
First Published Aug 28, 2022, 1:24 PM IST

ನವದೆಹಲಿ(ಆ.28): ಭಾರತದಲ್ಲಿ ಮುಂದಿನ 4 ವರ್ಷಗಳ ಜಾಗತಿಕ ಮಟ್ಟದ ಐಸಿಸಿ ಕ್ರಿಕೆಟ್‌ ಪಂದ್ಯಗಳ ಪ್ರಸಾರ ಹಕ್ಕನ್ನು ಸ್ಟಾರ್‌ ಸ್ಪೋರ್ಟ್ಸ್‌ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಇದನ್ನು ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಮೂಲಗಳು ಖಚಿತಪಡಿಸಿದ್ದು, ಡಿಸ್ನಿ ಸ್ಟಾರ್‌ 2024-2027ರ ಅವಧಿಯಲ್ಲಿ ಟಿ.ವಿ. ಹಾಗೂ ಡಿಜಿಟಲ್‌ನಲ್ಲಿ ಐಸಿಸಿ ಪುರುಷ ಹಾಗೂ ಮಹಿಳಾ ಪಂದ್ಯಗಳನ್ನು ಪ್ರಸಾರ ಮಾಡಲಿದೆ ಎಂದು ತಿಳಿಸಿದೆ. ಆದರೆ ಪ್ರಸಾರ ಹಕ್ಕಿನ ಮೌಲ್ಯವನ್ನು ಬಹಿರಂಗಪಡಿಸಿಲ್ಲ. 

ವರದಿಗಳ ಪ್ರಕಾರ ಪ್ರಸಾರ ಹಕ್ಕಿಗೆ ಸ್ಟಾರ್‌ ಸಂಸ್ಥೆಯು 3 ಬಿಲಿಯನ್‌ ಯುಎಸ್‌ ಡಾಲರ್‌(ಸುಮಾರು 24,000 ಕೋಟಿ ರುಪಾಯಿ) ಪಾವತಿಸಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು 2015-23ರ ಅವಧಿಗೆ ಸ್ಟಾರ್‌ ಸಂಸ್ಥೆಯು 2.1 ಬಿಲಿಯನ್‌ ಡಾಲರ್‌(ಸುಮಾರು 16,700 ಕೋಟಿ ರು.)ಗೆ ಪ್ರಸಾರ ಹಕ್ಕನ್ನು ಪಡೆದಿತ್ತು. ಈ ಬಾರಿ ಸ್ಟಾರ್‌ ಜೊತೆ ಹರಾಜಿನಲ್ಲಿ ವಯಾಕಾಂ 18, ಸೋನಿ ಸ್ಪೋರ್ಟ್ಸ್‌, ಝೀ ಸಮೂಹ ಸ್ಪರ್ಧೆಯಲ್ಲಿದ್ದವು.

ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 20ರ ಗಡುವು

ನವದೆಹಲಿ: 2022ರ ಸಾಲಿನ ಕ್ರೀಡಾ ಪ್ರಶಸ್ತಿಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅರ್ಜಿ ಅಹ್ವಾನಿಸಿದ್ದು, ಸೆ.20ರೊಳಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಂತೆ ಕೋರಿದೆ. ಈ ಬಗ್ಗೆ www.yas.nic.in ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ‘ಕ್ರೀಡಾಪಟುಗಳು ತಮ್ಮ ಅರ್ಜಿಗಳನ್ನು ಸೆಪ್ಟೆಂಬರ್ 20ರ ಮೊದಲು  dbtyas-sports.gov.in ವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕು. ನಿಗದಿತ ದಿನದ ಬಳಿಕ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಕ್ರೀಡಾಪಟುಗಳು ಯಾವುದೇ ವ್ಯಕ್ತಿ/ಸಂಸ್ಥೆಗಳ ನಾಮನಿರ್ದೇಶನವಿಲ್ಲದೇ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಬೇಕು’ ಎಂದು ಸೂಚಿಸಿದೆ.

2ನೇ ಟೆಸ್ಟ್‌: ಇನಿಂಗ್ಸ್‌ ಜಯ ಸಾಧಿಸಿದ ಇಂಗ್ಲೆಂಡ್

ಮ್ಯಾಂಚೆಸ್ಟರ್‌: ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಇನಿಂಗ್ಸ್‌ ಹಾಗೂ 85 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ. 264 ರನ್‌ಗಳ ಇನಿಂಗ್ಸ್‌ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ಕೇವಲ 179 ರನ್‌ಗಳಿಗೆ ಸರ್ವಪತನ ಕಂಡಿದೆ. 

Asia Cup 2022: ಇಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಫೈಟ್‌..!

ಇಂಗ್ಲೆಂಡ್ ಪರ ವೇಗಿ ಓಲಿ ರಾಬಿಸನ್‌4, ಜೇಮ್ಸ್‌ ಆಂಡರ್‌ಸನ್ 3 ವಿಕೆಟ್‌ ಕಬಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ151 ರನ್‌ಗಳಿಗೆ ಸರ್ವಪತನ ಕಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ 9 ವಿಕೆಟ್ ಕಳೆದುಕೊಂಡು 415 ರನ್‌ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಇನಿಂಗ್ಸ್‌ ಜಯ ದಾಖಲಿಸಿತ್ತು.

Follow Us:
Download App:
  • android
  • ios