Asianet Suvarna News Asianet Suvarna News

BCCI ಬಳಿ 130 ಕೋಟಿ ರುಪಾಯಿ ಡಿಸ್ಕೌಂಟ್‌ ಕೇಳಿದ ಸ್ಟಾರ್‌ ಸಂಸ್ಥೆ! ಬೈಜುಸ್‌ನಿಂದ್ಲೂ ಹೊಸ ಪ್ರಸ್ತಾಪ..!

ಚಾಲ್ತಿಯಲ್ಲಿರುವ ಒಪ್ಪಂದದಲ್ಲಿ 130 ಕೋಟಿ ರುಪಾಯಿ ರಿಯಾಯಿತಿ ಸ್ಟಾರ್‌ ಇಂಡಿಯಾ ಸಂಸ್ಥೆ 
ಬಿಸಿಸಿಐ ಬಳಿ ಹೊಸ ಪ್ರಸ್ತಾಪವಿರಿಸಿದ ಸ್ಟಾರ್ ಇಂಡಿಯಾ ಸಂಸ್ಥೆ
ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ಮಹತ್ವದ ಚರ್ಚೆ

Disney Star want a discount Byjus ask BCCI to encash bank guarantee kvn
Author
First Published Jan 10, 2023, 11:48 AM IST

ನವದೆಹಲಿ(ಜ.10): ಭಾರತ ಕ್ರಿಕೆಟ್‌ನ ತವರಿನ ಪಂದ್ಯಗಳ ಮಾಧ್ಯಮ ಹಕ್ಕು ಹೊಂದಿರುವ ಸ್ಟಾರ್‌ ಇಂಡಿಯಾ ಸಂಸ್ಥೆ ಸದ್ಯ ಚಾಲ್ತಿಯಲ್ಲಿರುವ ಒಪ್ಪಂದದಲ್ಲಿ 130 ಕೋಟಿ ರು. ರಿಯಾಯಿತಿ ನೀಡುವಂತೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಕೋರಿದೆ. ಜೊತೆಗೆ ಜೆರ್ಸಿ ಪ್ರಾಯೋಜಕತ್ವ ಹೊಂದಿರುವ ಬೈಜುಸ್‌ ಸಂಸ್ಥೆ ಪ್ರಾಯೋಜಕತ್ವ ಒಪ್ಪಂದ ಕೈಬಿಡಲು ನಿರ್ಧರಿಸಿದ್ದು, ಬಿಸಿಸಿಐಗೆ ನೀಡಬೇಕಿರುವ ಹಣಕ್ಕೆ 140 ಕೋಟಿ ರು. ಬ್ಯಾಂಕ್‌ ಗ್ಯಾರಂಟಿ ಬಳಸಲು ಪ್ರಸ್ತಾಪವಿರಿಸಿದೆ.

ಸೋಮವಾರ ನಡೆದ ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ಈ ಎರಡು ಪ್ರಮುಖ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು. 2018-23ರ ಮಾಧ್ಯಮ ಹಕ್ಕನ್ನು ಸ್ಟಾರ್‌ ಸಂಸ್ಥೆ 6138.1 ಕೋಟಿ ರು.ಗೆ ಖರೀದಿಸಿತ್ತು. ಈ ಒಪ್ಪಂದ ಮಾರ್ಗೆಚ್‌ಗೆ ಮುಕ್ತಾಯಗೊಳ್ಳಲಿದ್ದು, ಬಾಕಿ ಇರುವ ಕಂತಿನಲ್ಲಿ 130 ಕೋಟಿ ರು. ರಿಯಾಯಿತಿ ನೀಡಬೇಕೆಂದು ಸ್ಟಾರ್‌ ಇಂಡಿಯಾ ಕೋರಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಬೈಜುಸ್‌ 2023ರ ವರೆಗೂ ಪ್ರಾಯೋಜಕತ್ವ ಒಪ್ಪಂದ ಹೊಂದಿದ್ದರೂ, ಮುಂದುವರಿಯದಿರಲು ನಿರ್ಧರಿಸಿದೆ. ಆದರೆ ಬಿಸಿಸಿಐ ಈ ವರ್ಷ ಮಾರ್ಚ್‌ ವರೆಗೂ ಪ್ರಾಯೋಜಕತ್ವ ಮುಂದುವರಿಸುವಂತೆ ಕೇಳಿದೆ. ಬ್ಯಾಂಕ್‌ ಗ್ಯಾರಂಟಿ ಇಟ್ಟಿರುವ 140 ಕೋಟಿ ರುಪಾಯಿ ಜೊತೆ ಬಾಕಿ 160 ಕೋಟಿ ರು.ಗಳನ್ನು ಕಂತುಗಳಲ್ಲಿ ಪಾವತಿಸುವುದಾಗಿ ಸಂಸ್ಥೆ ತಿಳಿಸಿದೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ಲಂಕಾ ಏಕದಿನಕ್ಕಿಲ್ಲ ಬುಮ್ರಾ, ಆಸೀಸ್‌ ಟೆಸ್ಟ್‌ಗೂ ಅಲಭ್ಯ?

ಗುವಾಹಟಿ: ವಾರದ ಹಿಂದಷ್ಟೇ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಫಿಟ್‌ ಎಂದು ಘೋಷಿಸಿದೆ ಎಂದು ಪ್ರಕಟಣೆ ಹೊರಡಿಸಿ ವೇಗಿ ಜಸ್‌ಪ್ರೀತ್‌ ಬುಮ್ರಾರನ್ನು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡಕ್ಕೆ ಆಯ್ಕೆ ಮಾಡಿದ್ದ ಬಿಸಿಸಿಐ, ಸೋಮವಾರ ಬುಮ್ರಾ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ಮಾಹಿತಿ ನೀಡಿದೆ. 

ವಿರಾಟ್ ಕೊಹ್ಲಿ ಮತ್ತದೇ ಸಿಕ್ಸರ್‌ ಬಾರಿಸ್ತಾರೆ ಎಂದು ನನಗನಿಸೊಲ್ಲ: ಪಾಕ್ ವೇಗಿ ಹ್ಯಾರಿಸ್ ರೌಫ್

ಬೆನ್ನು ನೋವಿನಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಅವರು ಬೌಲ್‌ ಮಾಡಲು ಫಿಟ್‌ ಇಲ್ಲ ಎಂದು ಬಿಸಿಸಿಐ ತಿಳಿಸಿದೆ. ನ್ಯೂಜಿಲೆಂಡ್‌ ವಿರುದ್ಧದ ಸರಣಿ ಜೊತೆ ಆಸ್ಪ್ರೇಲಿಯಾ ವಿರುದ್ಧದ ನಿರ್ಣಾಯಕ ಟೆಸ್ಟ್‌ ಸರಣಿಯನ್ನೂ ತಪ್ಪಿಸಿಕೊಂಡರೂ ಅಚ್ಚರಿ ಇಲ್ಲ ಎಂದು ಪ್ರತಿಷ್ಠಿತ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಭಾರತ ವಿರುದ್ಧ ಮೊದಲ ಟೆಸ್ಟ್‌ಗೆ ಸ್ಟಾರ್ಕ್ ಗೈರು?

ಸಿಡ್ನಿ: ಆಸ್ಪ್ರೇಲಿಯಾದ ತಾರಾ ವೇಗಿ ಮಿಚೆಲ್‌ ಸ್ಟಾರ್ಕ್ ಭಾರತ ವಿರುದ್ಧ ಫೆ.9ರಿಂದ ನಾಗ್ಪುರದಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌ಗೆ ಅಲಭ್ಯರಾಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಸ್ಟಾರ್ಕ್ ಸುಳಿವು ನೀಡಿದ್ದು, ‘ಮೊದಲ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆಯೇ ಹೆಚ್ಚು. ಗಾಯದಿಂದ ಚೇತರಿಸಿಕೊಂಡರೆ 2ನೇ ಟೆಸ್ಟ್‌ನಲ್ಲಿ ಆಡುವ ನಿರೀಕ್ಷೆ ಇದೆ’ ಎಂದಿದ್ದಾರೆ. ದ.ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ ವೇಳೆ ಕೈ ಬೆರಳ ಗಾಯಕ್ಕೆ ತುತ್ತಾಗಿದ್ದ 32 ವರ್ಷದ ಸ್ಟಾರ್ಕ್ 3ನೇ ಟೆಸ್ಟ್‌ನಿಂದ ಹೊರಗುಳಿದಿದ್ದರು.

ಭಾರತ ಸರಣಿ: ಕಿವೀಸ್‌ಗೆ ಹೆನ್ರಿ ಬದಲು ಬ್ರೇಸ್‌ವೆಲ್‌

ಆಕ್ಲಂಡ್‌: ಭಾರತ, ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ಗಾಯಾಳು ವೇಗಿ ಮ್ಯಾಟ್‌ ಹೆನ್ರಿ ಬದಲು ನ್ಯೂಜಿಲೆಂಡ್‌ ತಂಡಕ್ಕೆ ಡಗ್‌ ಬ್ರೇಸ್‌ವೆಲ್‌ ಆಯ್ಕೆಯಾಗಿದ್ದಾರೆ. ಪಾಕ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದ ವೇಳೆ ಕಿಬ್ಬೊಟ್ಟೆಯ ಸೆಳೆತದಿಂದಾಗಿ ಹೆನ್ರಿ ಟೂರ್ನಿಯಿಂದ ಹೊರಬಿದ್ದಿದ್ದು, 2-4 ವಾರ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ 68 ಪಂದ್ಯಗಳನ್ನಾಡಿದ ಅನುಭವ ಹೊಂದಿರುವ ಬ್ರೇಸ್‌ವೆಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 

ಇನ್ನು ಭಾರತ ವಿರುದ್ಧದ ಸರಣಿಗೆ ಟಿಮ್‌ ಸೌಥಿ ಬದಲು ಜೇಕಬ್‌ ಡಫ್ಫಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತ-ಕಿವೀಸ್‌ ಏಕದಿನ ಸರಣಿ ಜನವರಿ 18ಕ್ಕೆ ಆರಂಭವಾಗಲಿದೆ.

Follow Us:
Download App:
  • android
  • ios