Asianet Suvarna News Asianet Suvarna News

ದಿನೇಶ್ ಕಾರ್ತಿಕ್‌ಗೆ ಟೀಂ ಇಂಡಿಯಾ ಸ್ಥಾನ ಕೊಡಲ್ಲ, ಕಮೆಂಟೇಟರ್ ಸೀಟ್ ಒಕೆ ಎಂದ ಜಡೇಜಾ!

ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಇದೇ ತಂಡ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುತ್ತಾ? ಯಾರು ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಇದರ ನಡುವೆ ಜಡೇಜಾ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
 

Dinesh karthik suit for commentator seat not for Team India t20 world cup says ajay jadeja ckm
Author
Bengaluru, First Published Aug 9, 2022, 11:22 AM IST

ಬೆಂಗಳೂರು(ಆ.09) ಎಂಎಸ್ ಧೋನಿ ಬಳಿಕ ಭಾರತ ತಂಡದ ಫಿನೀಶಿಂಗ್ ಜವಾಬ್ದಾರಿ ಹೊತ್ತ ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್ ತಂಡದಲ್ಲಿರಬೇಕು ಅನ್ನೋ ಕೂಗು ಹೆಚ್ಚಾಗುತ್ತಿದೆ. ಆದರೆ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಅಜಯ್ ಜಡೇಜಾ ತದ್ವಿರುದ್ದ ಹೇಳಿಕೆ ನೀಡಿದ್ದಾರೆ. ನಾನು ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ‌ನನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡುವುದಿಲ್ಲ. ಬದಲಾಗಿ ಕಾರ್ತಿಕ್‌ಗೆ ನನ್ನ ಜೊತೆ ವೀಕ್ಷಕ ವಿವರಣೆಗಾರನಾಗಲು ಒಂದು ಸೀಟು ಖಾಲಿ ಇಡುತ್ತೇನೆ ಎಂದು ಅಜಯ್ ಜಡೇಜಾ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ಅಜಯ್ ಜಡೇಜಾ ಕಾರಣರಾಗಿದ್ದಾರೆ. ದಿನೇಶ್ ಕಾರ್ತಿಕ್ ತಮ್ಮ ಕರಿಯರ್‌ನ ಅತ್ಯುತ್ತಮ ವೇಳೆಯಲ್ಲಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಮಹತ್ವದ ಗೆಲುವಿನಲ್ಲಿ ಪಾತ್ರವಹಿಸಿದ್ದಾರೆ. ಹೀಗಾಗಿ ದಿನೇಶ್ ಕಾರ್ತಿಕ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಬೇಕು ಅನ್ನೋ ಆಗ್ರಹವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಅಜಯ್ ಜಡೇಜಾ ಹೇಳಿಕೆ ಹೊಸ ಚರ್ಚೆ ಹುಟ್ಟು ಹಾಕಿದೆ.

ಟಿ20 ವಿಶ್ವಕಪ್ ಟೂರ್ನಿಗೆ ನಾನು ಆಯ್ಕೆ ಮಾಡುವ ಟೀಂ ಇಂಡಿಯಾದಲ್ಲಿ ಮೊದಲ ಬೌಲರ್‌ಗಳನ್ನು ಆಯ್ಕೆ ಮಾಡುತ್ತೇನೆ. ವೇಗಿ ಮೊಹಮ್ಮದ್ ಶಮಿ ನನ್ನ ಮೊದಲ ಆಯ್ಕೆ. ಇನ್ನು ಜಸ್ಪ್ರೀತ್ ಬುಮ್ರಾ ಅರ್ಶದೀಪ್ ಸಿಂಗ್ ಹಾಗೂ ಯಜುವೇಂದ್ರ ಚಹಾಲ್ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಜಡೇಜಾ ಹೇಳಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಹಾಗೂ ದೀಪಕ್ ಹೂಡ ಸರಿಯಾದ ಆಯ್ಕೆ ಎಂದಿದ್ದಾರೆ. 

Asia Cup T20 ಏಷ್ಯಾಕಪ್‌ ಟೂರ್ನಿಗೆ ಭಾರತ ತಂಡ ಪ್ರಕಟ, ಬುಮ್ರಾ ಔಟ್‌, ರಾಹುಲ್‌ ಉಪನಾಯಕ

ಅಜಯ್ ಜಡೇಜಾ ತಂಡದಲ್ಲಿ ನಾಯಕ ರೋಹಿತ್ ಶರ್ಮಾ ಆಯ್ಕೆಕೆ ನಿರಾಸಕ್ತಿ ತೋರಿಸಿದ್ದಾರೆ. ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಆಯ್ಕೆ ಮಾಡುವುದುದಾದರೆ ದಿನೇಶ್ ಕಾರ್ತಿಕ್ ಕೂಡ ಆಯ್ಕೆ ಮಾಡಬೇಕು. 2007ರಲ್ಲಿ ಎಂಸ್ ಧೋನಿ ಮುನ್ನಡೆಸಿದ ತಂಡದ ರೀತಿ ಇರಬೇಕು. ಹೀಗಾಗಿ ಯುವ ಪಡೆಗೆ ಹೆಚ್ಚಿನ ಅವಕಾಶ ನೀಡುವುದು ಸೂಕ್ತ. ಇದರಿಂದ ಭಾರತ ಮತ್ತೆ ಟಿ20 ವಿಶ್ವಕಪ್ ಟೂರ್ನಿ ಗೆಲ್ಲಲು ಸಾಧ್ಯ. ಇದಕ್ಕಾಗಿ ಟೀಂ ಇಂಡಿಯಾ ಆಯ್ಕೆಯಲ್ಲಿ ಮಹತ್ವದ ಬದಲಾವಣೆಯಾಗಬೇಕಿದೆ.

ಐಪಿಎಲ್ 2022ರ ಟೂರ್ನಿಯಿಂದ ದಿನೇಶ್ ಕಾರ್ತಿಕ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಹಲವು ಪಂದ್ಯಗಳನ್ನು ಫಿನೀಶ್ ಮಾಡುವ ದಿನೇಶ್ ಕಾರ್ತಿಕ್ ಅಭಿಮಾನಿಗಳ ಭರವಸೆಯ ಕ್ರಿಕೆಟಿಗನಾಗಿದ್ದಾರೆ. ಐಪಿಎಲ್ 2022ರ ಟೂರ್ನಿ ಮೂಲಕ ದಿನೇಶ್ ಕಾರ್ತಿಕ್ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಅಂತಿಮ 5 ಓವರ್‌ಗಳಲ್ಲಿ ಪಂದ್ಯದ ಚಿತ್ರಣವನ್ನೇ ಬದಲಿಸುವ ದಿನೇಶ್ ಕಾರ್ತಿಕ್ ರೋಚಕ ಗೆಲುವಿನ ರೂವಾರಿಯಾಗಿದ್ದಾರೆ.

WI vs IND ಸ್ಪಿನ್ ದಾಳಿಗೆ ತತ್ತರಿಸಿದ ವಿಂಡೀಸ್, 4-1 ಅಂತರದಲ್ಲಿ ಭಾರತಕ್ಕೆ ಟಿ20 ಸರಣಿ!

ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಲ್ಲಿ ಭಾರತ ಶುಭಾರಂಭ ಮಾಡಲು ದಿನೇಶ್ ಕಾರ್ತಿಕ್ ಕಾಣಿಕೆ ಪ್ರಮುಖವಾಗಿತ್ತು. ಮೊದಲ ಟಿ20 ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಕೇವಲ 19 ಎಸೆತದಲ್ಲಿ 41 ರನ್ ಸಿಡಿಸಿದ್ದರು. ಇದರಿಂದ ಟೀಂ ಇಂಡಿಯಾ 191 ರನ್ ಪೇರಿಸಿತ್ತು. ಇಷ್ಟೇ ಅಲ್ಲ ಭಾರತ ಗೆಲುವಿನ ಸಿಹಿ ಕಂಡಿತ್ತು. 
 

Follow Us:
Download App:
  • android
  • ios