WI vs IND ಸ್ಪಿನ್ ದಾಳಿಗೆ ತತ್ತರಿಸಿದ ವಿಂಡೀಸ್, 4-1 ಅಂತರದಲ್ಲಿ ಭಾರತಕ್ಕೆ ಟಿ20 ಸರಣಿ!

ವೆಸ್ಟ್ ಇಂಡೀಸ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಭಾರತ ರನ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟಿ20 ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡಿದೆ. 

WI vs IND Spinners helps team India to beat west indies by 88 runs in 5th t20 and clinch series by 4 1 ckm

ಫ್ಲೋರಿಡಾ(ಆ.07):   ವೆಸ್ಟ್ ಇಂಡೀಸ್ ವಿರುದ್ದದ 5ನೇ ಹಾಗೂ ಅಂತಿಮ ಟಿ20  ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಬಳಿಕ ಸ್ಪಿನ್ ಮೂಲಕ ಮಿಂಚಿನ ದಾಳಿ ಸಂಘಟಿಸಿತು. ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ರವಿ ಬಿಶ್ನೋಯ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ 100 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ 88 ರನ್ ಭರ್ಜರಿ ಗೆಲುವು ದಾಖಲಿಸಿದೆ.  ಇದರೊಂದಿಗೆ ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಏಕದಿನ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡ ಟೀಂ ಇಂಡಿಯಾ, ಇದೀಗ ಟಿ20 ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡಿದೆ.  

ಅಂತಿಮ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಟೀಂ ಇಂಡಿಯಾ 189 ರನ್ ಟಾರ್ಗೆಟ್ ನೀಡಿತ್ತು. ಬೃಹತ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ಆರಂಭದಲ್ಲೇ ಅಕ್ಸರ್ ಪಟೇಲ್ ದಾಳಿಗೆ ತತ್ತರಿಸಿತು. ಖಾತೆ ತೆರೆಯುವ ಮುನ್ನವೇ ಜೇಸನ್ ಹೋಲ್ಡರ್ ವಿಕೆಟ್ ಕೈಚೆಲ್ಲಿದರು. ಶಮ್ರ ಬ್ರೂಕ್ಸ್ 13 ರನ್ ಸಿಡಿಸಿ ಔಟಾದರು. ಡೇವೋನ್ ಥಾಮಸ್ 10 ರನ್ ಸಿಡಿಸಿ ನಿರ್ಗಮಿಸಿದರು. ಪ್ರಮುಖ ಮೂರು ವಿಕೆಟ್ ಕಬಳಿಸಿಗ ಅಕ್ಸರ್ ಪಟೇಲ್ ಟೀಂ ಇಂಡಿಯಾಗೆ ಭರ್ಜರಿ ಮುನ್ನಡೆ ತಂದುಕೊಟ್ಟರು.

Commonwealth Games 2022: ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಕ್ರಿಕೆಟ್‌ ತಂಡ!

ಶಿಮ್ರೊನ್ ಹೆಟ್ಮೆಯರ್ ಏಕಾಂಗಿ ಹೋರಾಟ ಆರಂಭಿಸಿದರು. ಹೆಟ್ಮೆಯರ್‌ಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ಅಕ್ಸರ್ ಪಟೇಲ್ ಬೆನ್ನಲ್ಲೇ ರವಿ ಬಿಶ್ನೋಯ್ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ ದಾಳಿಗೆ ವಿಂಡೀಸ್ ತತ್ತರಿಸಿತು. ನಾಯಕ ನಿಕೋಲಸ್ ಪೂರನ್, ರೋವ್ಮನ್ ಪೊವೆಲ್, ಕೀಮೋ ಪೌಲ್, ಡೋಮ್ನಿಕ್ ಡ್ರೇಕ್ಸ್, ಒಡೆನ್ ಸ್ಮಿತ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. 

ತೀವ್ರ ಹೋರಾಟ ನಡೆಸಿದ ಶಿಮ್ರೊನ್ ಹೆಟ್ಮೆಯರ್ ಹಾಫ್ ಸೆಂಚುರಿ ಸಿಡಿಸಿ ಆಸೆರೆಯಾದರು. ಹೆಟ್ಮೆಯರ್ 35 ಎಸೆತದಲ್ಲಿ 56 ರನ್ ಸಿಡಿಸಿ ಔಟಾದರು. ಒಬೆಡೆ ಮೆಕಾಯ್ ವಿಕೆಟ್ ಪತನದೊಂದಿಗೆ ವೆಸ್ಟ್ ಇಂಡೀಸ್ 15.4 ಓವರ್‌ಗಳಲ್ಲಿ 100 ರನ್‌ಗೆ ಆಲೌಟ್ ಆಯಿತು. ಟೀಂ ಇಂಡಿಯಾ 88 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. 

ಭಾರತದ ಪರ ರವಿ ಬಿಶ್ನೋಯ್ 4, ಅಕ್ಸರ್ ಪಟೇಲ್ 3 ಹಾಗೂ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು. ವಿಂಡೀಸ್ ತಂಡದ ಎಲ್ಲಾ 10 ವಿಕೆಟ್‌ಗಳನ್ನು ಭಾರತೀಯ ಸ್ಪಿನ್ನರ್‌ಗಳೇ ಕಬಳಿಸಿದರು. 

ಮಹಾರಾಜ ಟಿ20 ಟ್ರೋಫಿ ಅನಾವರಣ ಮಾಡಿದ ಕಿಚ್ಚ ಸುದೀಪ್

ಭಾರತ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 188 ರನ್ ಸಿಡಿಸಿತ್ತು.  ಶ್ರೇಯಸ್ ಅಯ್ಯರ್ 64 ರನ್ ಸಿಡಿಸಿದ್ದರೆ, ದೀಪಕ್ ಹೂಡ 38 ರನ್ ಸಿಡಿಸಿದರು. ಸಂಜು ಸ್ಯಾಮ್ಸನ್ 15, ನಾಯಕ ಹಾರ್ದಿಕ್ ಪಾಂಡ್ಯ 28, ದಿನೇಶ್ ಕಾರ್ತಿಕ್ 12  ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 188 ರನ್ ಸಿಡಿಸಿತು.
 

Latest Videos
Follow Us:
Download App:
  • android
  • ios