Asianet Suvarna News Asianet Suvarna News

ಹಾರ್ದಿಕ್ ಜೊತೆಗೂಡಿ ಜಾಕೆಟ್ ಕಿತ್ತೆಸೆದು ಕುಣಿದ ಧೋನಿ... ಕ್ರಿಕೆಟಿಗರ ಜಬರ್‌ದಸ್ತ್ ಡಾನ್ಸ್ ವೈರಲ್

ಮೈದಾನಕ್ಕಿಳಿದರೆ ತಮ್ಮ ರೋಚಕ ಆಟದಿಂದ ಮನಸೆಳೆಯುವ ಮೈದಾನದಲ್ಲಿ ತಮ್ಮ ಕಲಾತ್ಮಕ ಆಟದ ಮೂಲಕ ವೀಕ್ಷಕರಿಗೆ ಭರ್ಜರಿ ಮನೋರಂಜನೆ ನೀಡುವ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ಮಹೇಂದ್ರ ಸಿಂಗ್ ಧೋನಿ ಈಗ ಡಾನ್ಸ್ ಫ್ಲೋರ್‌ನಲ್ಲಿಯೂ ತಮ್ಮ ಭರ್ಜರಿ ಕುಣಿತದಿಂದ ಮಿಂಚು ಹರಿಸಿದ್ದು, ಇವರಿಬ್ಬರ ಟಪ್ಪಾಂಗುಚ್ಚಿ ಡಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Dhoni took off his jacket and danced with Hardik in birthday party at dubai Cricketer's jabardast dance goes viral akb
Author
First Published Nov 29, 2022, 4:19 PM IST

ಮೈದಾನಕ್ಕಿಳಿದರೆ ತಮ್ಮ ರೋಚಕ ಆಟದಿಂದ ಮನಸೆಳೆಯುವ ಮೈದಾನದಲ್ಲಿ ತಮ್ಮ ಕಲಾತ್ಮಕ ಆಟದ ಮೂಲಕ ವೀಕ್ಷಕರಿಗೆ ಭರ್ಜರಿ ಮನೋರಂಜನೆ ನೀಡುವ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ಮಹೇಂದ್ರ ಸಿಂಗ್ ಧೋನಿ ಈಗ ಡಾನ್ಸ್ ಫ್ಲೋರ್‌ನಲ್ಲಿಯೂ ತಮ್ಮ ಭರ್ಜರಿ ಕುಣಿತದಿಂದ ಮಿಂಚು ಹರಿಸಿದ್ದು, ಇವರಿಬ್ಬರ ಟಪ್ಪಾಂಗುಚ್ಚಿ ಡಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇವರಿಬ್ಬರು ಸಖತ್ ಡಾನ್ಸ್ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೋಡುಗರು ಮನಸೋತಿದ್ದಾರೆ.  ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟರ್ ಮಹೇಂದ್ರ ಸಿಂಗ್ ಮತ್ತೊಮ್ಮೆ ಇಂಟರ್‌ನೆಟ್‌ನಲ್ಲಿ ಸುಂಟರಗಾಳಿ ಎಬ್ಬಿಸಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿರುವುದು ಕ್ರಿಕೆಟ್ ಕಾರಣಕ್ಕೆ ಅಲ್ಲ, ಬದಲಾಗಿ ಬಿಂದಾಸ್ ಡಾನ್ಸ್‌ಗೆ, ತನ್ನ ಕ್ರಿಕೆಟರ್ ಸ್ನೇಹಿತರೊಡಗೂಡಿ ಧೋನಿ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿದ್ದು ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. 

ಧೋನಿ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ(Hardik Pandya), ಇಶಾನ್ ಕಿಶನ್ (Ishan Kishan) ಮತ್ತು ಕೃನಾಲ್ ಪಾಂಡ್ಯ (Krunal Pandya) ಹಾಗೂ ಇತರರೊಂದಿಗೆ ಕುಣಿದು ಕುಪ್ಪಳಿಸುತ್ತ ಎಂಜಾಯ್ ಮಾಡುತ್ತಿದ್ದಾರೆ. ದುಬೈನಲ್ಲಿ ನಡೆದ ಬರ್ತ್‌ಡೇ ಪಾರ್ಟಿಯೊಂದರಲ್ಲಿ ಈ ಕ್ರಿಕೆಟಿಗರು ಸಖತ್ ಆಗಿ ಜಾಲಿ ಮಾಡಿದ್ದು, ಧೋನಿ ಜೊತೆ ಪತ್ನಿ ಸಾಕ್ಷಿ ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕ್ರಿಕೆಟಿಗರು ಜೊತೆಯಾಗಿ ಡಾನ್ಸ್ ಮಾಡಿ ಫ್ಲೋರ್ ಚಿಂದಿ ಮಾಡುತ್ತಿರುವ ಹಲವು ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ. ಖ್ಯಾತ ರಾಪರ್‌ನ ಬಾದ್‌ಶಾ (rapper Badshah) ಅವರೊಂದಿಗೆ ವೃತ್ತಕಾರದಲ್ಲಿ ಒಬ್ಬರ ಹೆಗಲಮೇಲೊಬ್ಬರು ಕೈಗಳನ್ನು ಇರಿಸಿಕೊಂಡು ಕಾಲು ಕುಣಿಸುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. ಅಲ್ಲದೇ ಮತ್ತೊಂದು ವಿಡಿಯೋದಲ್ಲಿ ಧೋನಿ ಜಾಕೆಟ್ ಕಳಚಿಟ್ಟು ಡಾನ್ಸ್ ಮಾಡುತ್ತಿರುವ ವಿಡಿಯೋ ಕೂಡ ಇದೆ. 

ರಾಪರ್ ಬಾದ್‌ಶಾ ತಮ್ಮ ಎಂದಿನ ಕಪ್ಪು ಬಣ್ಣದ ಜಾಕೆಟ್ ಧರಿಸಿ ಈ ಪಾರ್ಟಿಯಲ್ಲಿ ಭಾಗವಹಿಸಿದ್ದು, ಇತ್ತ ಕ್ರಿಕೆಟಿಗ ಹಾರ್ದಿಕ್ ರೇಷ್ಮೆ ಶರ್ಟ್‌ ಮತ್ತು ಪ್ಯಾಂಟ್‌ನಲ್ಲಿ ಮಿಂಚಿದ್ದಾರೆ. ಹಾಗೆಯೇ ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್‌ನಲ್ಲಿ ಧೋನಿ ಮಿಂಚಿದ್ದಾರೆ. ಕ್ಯಾಪ್ಟನ್ ಕೂಲ್ ಎಂದು ಕರೆಯಲ್ಪಡುವ ಧೋನಿ ಈ ಮಧ್ಯೆ ಸಿನಿಮಾ ರಂಗಕ್ಕೂ (film industry) ಕಾಲಿಡಲು ಸಿದ್ಧರಾಗಿದ್ದು, ಈ ಹಿನ್ನೆಲೆಯಲ್ಲಿ ಈ ಡಾನ್ಸ್‌ಗೆ ಮತ್ತಷ್ಟು ಮಹತ್ವ ಬಂದಿದೆ. ದೀಪಾವಳಿ ಸಂದರ್ಭದಲ್ಲಿ ಧೋನಿ ಅವರು ಧೋನಿ ಎಂಟರ್‌ಟೈನ್‌ಮೆಂಟ್ (Dhoni Entertainments) ಎಂಬ ಸ್ಥಂಸ್ಥೆಯನ್ನು ಹುಟ್ಟುಹಾಕಿದ್ದರು. ಈ ಮೂಲಕ ಆಟಗಾರನಿಂದ ಪ್ರೊಡ್ಯೂಸರ್‌ (producer) ಆಗಿ ಬದಲಾಗಿದ್ದರು. ಅಲ್ಲದೇ ಅವರು ತಮಿಳು ಸಿನಿಮಾ ರಂಗದ ಮೂಲಕ ತಮ್ಮ ಚೊಚ್ಚಲ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ವಿಚಾರ ಸುದ್ದಿಯಲ್ಲಿದ್ದು, ಆದರೆ ಸಿನಿಮಾಗಿನ್ನು ಹೆಸರಿಟ್ಟಿಲ್ಲ. ಧೋನಿಗಾಗಿ ಮಾಡುತ್ತಿರುವ ಹೆಸರಿಡದ ಸಿನಿಮಾವನ್ನು ತಮಿಳಿನ ನಿರ್ದೇಶಕ ರಮೇಶ್ ತಮಿಳ್ಮಣಿ (Ramesh Thamilmani) ನಿರ್ದೇಶಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಧೋನಿ ಪತ್ನಿ ಸಾಕ್ಷಿ (Sakshi Singh Dhoni) ಅವರು ಧೋನಿ ಎಂಟರ್‌ಟೈನ್‌ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

 

ಎನ್ ಜಗದೀಶನ್ ವಿಶ್ವದಾಖಲೆ 277ರನ್ ಹಿಂದೆ ಧೋನಿ ಟಿಪ್ಸ್, ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ exclusive ಮಾತು!

ಇತ್ತೀಚೆಗೆ ಧೋನಿ ಸಕಲಕಲಾ ವಲ್ಲಭ ಎನಿಸಿದ್ದು, ಕ್ರಿಕೆಟ್ ಹೊರತಾಗಿ ಸ್ಥಳೀಯ ಟೆನಿಸ್ ಪಂದ್ಯಾವಳಿಗಳಲ್ಲೂ (tennis tournaments) ಆಡಿದ್ದಾರೆ. ಗಾಲ್ಫ್ ಆಟವನ್ನು ಆಡಿದ್ದಾರೆ. ಮುಂದಿನ ಬಾರಿಯ ಐಪಿಎಲ್‌ನಲ್ಲಿ ಮತ್ತೆ ಅವರು ಚೆನ್ನೈ ಸೂಪರ್ ಕಿಂಗ್ಸ್‌ನ್ನು (Chennai Super Kings) ಮುನ್ನಡೆಸಲಿದ್ದಾರೆ.


MS Dhoni Team India: ವಿಶ್ವಕಪ್‌ನಲ್ಲಿ ಕೆಟ್ಟ ನಿರ್ವಹಣೆ, ಎಂಎಸ್‌ ಧೋನಿಗೆ ಬಿಸಿಸಿಐ ಬುಲಾವ್‌?

T20 World Cup: ಧೋನಿ ದಾಖಲೆ ಸರಿಗಟ್ಟಿದ ಬಟ್ಲರ್‌, ಟ್ರೋಫಿಯೊಂದಿಗೆ ಸಂಭ್ರಮಿಸಿದ ಇಂಗ್ಲೆಂಡ್‌!

Follow Us:
Download App:
  • android
  • ios