ಆರ್‌ಸಿಬಿ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಮತ್ತು ನಟಿ ಧನ್ಯಾ ರಾಮ್‌ಕುಮಾರ್ ನಡುವಿನ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಧನ್ಯಾ, ದೇವದತ್ ಅವರ ಜೆರ್ಸಿ ಧರಿಸಿ ಫೋಟೋ ತೆಗೆಸಿಕೊಂಡಿದ್ದು ಈ ವದಂತಿಗಳಿಗೆ ಕಾರಣವಾಗಿದೆ. ಆದರೆ, ಇದು ಕೇವಲ ಗಾಸಿಪ್ ಎಂಬ ಮಾತುಗಳು ಕೇಳಿಬಂದಿವೆ.
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿಯೇ ಸಾಗುತ್ತಿದೆ. ಇನ್ನು ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗ್ರೂಪ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನು ಆರ್‌ಸಿಬಿ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಲೋಕಲ್ ಬಾಯ್ ದೇವದತ್ ಪಡಿಕ್ಕಲ್ ಇದೀಗ ಕ್ರಿಕೆಟ್ ಹೊರತಾದ ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಹೌದು, ಆರ್‌ಸಿಬಿ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಅವರ ಹೆಸರು ಸ್ಯಾಂಡಲ್‌ವುಡ್ ನಟಿ ಹಾಗೂ ಮಾಡೆಲ್ ಆಗಿರುವ ಧನ್ಯಾ ರಾಮ್‌ಕುಮಾರ್ ಅವರೊಂದಿಗೆ ಥಳುಕು ಹಾಕಿಕೊಂಡಿದೆ. ನಿನ್ನ ಸನಿಹಕೆ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಧನ್ಯ ರಾಮ್‌ಕುಮಾರ್, ಚೊಚ್ಚಲ ಸಿನಿಮಾದಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಇದಷ್ಟೇ ಅಲ್ಲದೇ ಕಣ್ಣಾಮುಚ್ಚಾಲೆ ತೀರ್ಪು, ಪುಡಿ ಹಾಗೂ ಕಾಲಪತ್ತರ್ ಸಿನಿಮಾಗಳಲ್ಲೂ ಧನ್ಯ ರಾಮ್‌ಕುಮಾರ್ ನಟಿಸಿದ್ದಾರೆ.
ಮಗನನ್ನು ಕ್ರಿಕೆಟರ್ ಮಾಡಲು ಇದ್ದ ಜಮೀನು ಮಾರಿದ ವೈಭವ್ ತಂದೆ! ಅವರ ತ್ಯಾಗಕ್ಕೆ ಸೆಲ್ಯೂಟ್
ಇತ್ತೀಚೆಗೆ ಧನ್ಯ ರಾಮ್‌ಕುಮಾರ್, ಆರ್‌ಸಿಬಿ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಜೆರ್ಸಿ ತೊಟ್ಟು ಫೋಸ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಇವರಿಬ್ಬರ ನಡುವೆ ಏನೋ ನಡೀತಿದೆ ಎನ್ನುವಂತಹ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಆದರೆ ದೇವದತ್ ಪಡಿಕ್ಕಲ್, ಇನ್‌ಸ್ಟಾಗ್ರಾಂನಲ್ಲಿ ಧನ್ಯ ರಾಮ್‌ಕುಮಾರ್ ಅವರನ್ನು ಫಾಲೋ ಮಾಡುತ್ತಿಲ್ಲ. ಇನ್ನು ಇವೆಲ್ಲಾ ಗಾಸಿಪ್‌ಗಷ್ಟೇ ಸೀಮಿತ ಎನ್ನುವಂತಹ ಮಾತುಗಳು ಕೇಳಿ ಬಂದಿವೆ.
ಇನ್ನು ಐಪಿಎಲ್‌ನಲ್ಲಿ ದೇವದತ್ ಪಡಿಕ್ಕಲ್ ವಿಚಾರಕ್ಕೆ ಬರುವುದಾದರೇ, ಸದ್ಯ ಆರ್‌ಸಿಬಿ ಪರ ಕಣಕ್ಕಿಳಿಯುತ್ತಿದ್ದು ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. 9 ಪಂದ್ಯಗಳನ್ನಾಡಿರುವ ದೇವದತ್ ಪಡಿಕ್ಕಲ್ ಎರಡು ಅರ್ಧಶತಕ ಸಹಿತ 230 ರನ್ ಸಿಡಿಸಿದ್ದಾರೆ. ಆರ್‌ಸಿಬಿ ಪರ ಇಂಪ್ಯಾಕ್ಟ್ ಆಟಗಾರನಾಗಿಯೂ ಪಡಿಕ್ಕಲ್ ಸೈ ಎನಿಸಿಕೊಂಡಿದ್ದಾರೆ. 2020ರಲ್ಲಿ ಆರ್‌ಸಿಬಿ ಮೂಲಕವೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಪಡಿಕ್ಕಲ್, ಇದೀಗ ಆರ್‌ಸಿಬಿ ಪರ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ವೈಭವ್ ಸೂರ್ಯವಂಶಿ 35 ಎಸೆತದ ಶತಕ, ಇನ್ನೂ 25 ಎಸೆತ ಬಾಕಿ ಇರುವಂತೆ 212 ಚಚ್ಚಿದ ರಾಜಸ್ಥಾನ!
ಸದ್ಯ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ 10 ಪಂದ್ಯಗಳ ಪೈಕಿ 7 ಗೆಲುವು ಹಾಗೂ ಮೂರು ಸೋಲು ಸಹಿತ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನುಳಿದ 4 ಪಂದ್ಯಗಳ ಪೈಕಿ ಇನ್ನೊಂದು ಪಂದ್ಯ ಜಯಿಸಿದರೆ ಆರ್‌ಸಿಬಿ ಅನಾಯಾಸವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.
