ಧನಶ್ರೀ ವರ್ಮಾ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಡ್ಯಾನ್‌ ಮಾಡುವ ವೇಳೆ ಜಾರಿಬಿದ್ದು ಮೊಣಕಾಲು ಗಾಯ ಮಾಡಿಕೊಂಡಿದ್ದ ಯುಜುವೇಂದ್ರ ಚಹಲ್ ಪತ್ನಿಪತ್ನಿ ಆದಷ್ಟು ಬೇಗ ಗುಣಮುಖರಾಗಲು ಶುಭ ಹಾರೈಸಿದ ಯುಜುವೇಂದ್ರ ಚಹಲ್‌

ನವದೆಹಲಿ(ಸೆ.04): ಕೆಲ ದಿನಗಳ ಹಿಂದಷ್ಟೇ ಧನಶ್ರೀ ವರ್ಮಾ ಹಾಗೂ ಯುಜುವೇಂದ್ರ ಚಹಲ್ ವೈಯುಕ್ತಿಕ ಜೀವನದ ಕುರಿತಂತೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಇದಾದ ನಂತರ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಇಬ್ಬರು ಈ ಗಾಳಿ ಸುದ್ದಿಗೆ ತೆರೆ ಎಳೆದಿದ್ದರು. ಇದೀಗ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಧನಶ್ರೀ ವರ್ಮಾ ತಾವು ಆಸ್ಪತ್ರೆಗೆ ದಾಖಲಾಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಧನಶ್ರೀ ವರ್ಮಾ ಆದಷ್ಟು ಬೇಗ ಗುಣಮುಖವಾಗಿ ಎಂದು ಪತಿ ಚಹಲ್ ಶುಭ ಹಾರೈಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಧನಶ್ರೀ ವರ್ಮಾ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದು, ಸರ್ಜರಿ ಯಶಸ್ವಿಯಾಗಿದೆ. ಜೀವನದಲ್ಲಿ ಕೆಲವು ಹೊಡೆತಗಳು ಕಮ್‌ಬ್ಯಾಕ್‌ ಮಾಡಲು ಉತ್ತಮ ವೇದಿಕೆಯಾಗಿದೆ. ಇದೆಲ್ಲವೂ ದೇವರ ಇಚ್ಛೆ, ಈ ಹಿಂದಿಗಿಂತಲೂ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಲಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಪ್ರಾರ್ಥನೆಗಳಿಗೆ ಧನ್ಯವಾದಗಳು ಎಂದು ಧನಶ್ರೀ ವರ್ಮಾ ಬರೆದುಕೊಂಡಿದ್ದಾರೆ.

View post on Instagram

ಧನಶ್ರೀ ವರ್ಮಾ ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಅಧಿಕ ಲೈಕ್‌ಗಳು ಸಿಕ್ಕಿವೆ. ಧನಶ್ರೀ ವರ್ಮಾ ಅವರ ಪೋಸ್ಟ್‌ಗೆ ಹಲವಾರು ಅಭಿಮಾನಿಗಳು ಶುಭ ಹಾರೈಸಿದ್ದು, ಆದಷ್ಟು ಬೇಗ ಗುಣಮುಖರಾಗಿ ಎಂದು ಸಂದೇಶ ರವಾನಿಸಿದ್ದಾರೆ.

ದಂತವೈದ್ಯ, ಕೊರಿಯೋಗ್ರಾಫರ್ ಹಾಗೂ ಯೂಟೂಬರ್ ಆಗಿರುವ ಧನಶ್ರೀ ವರ್ಮಾ, ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಕೆಲದಿನಗಳ ಹಿಂದಷ್ಟೇ ಡ್ಯಾನ್ಸ್‌ ಮಾಡುವ ವೇಳೆ ಧನಶ್ರೀ ವರ್ಮಾ ಜಾರಿ ಬಿದ್ದ ಪರಿಣಾಮ ಮೊಣಕಾಲಿಗೆ ಗಂಭೀರ ಗಾಯವಾಗಿತ್ತು. ಅಸ್ಥಿರಜ್ಜಿಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಶಸ್ತ್ರ ಚಿಕಿತ್ಸೆಗೆ ಸೂಚನೆ ನೀಡಿದ್ದರು. ಅದರಂತೆ ಇದೀಗ ಮೊಣಕಾಲಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಇನ್ನು ಧನಶ್ರೀ ವರ್ಮಾ ಅವರ ಪೋಸ್ಟ್‌ಗೆ ಪತಿ ಯುಜುವೇಂದ್ರ ಚಹಲ್ ಕೂಡಾ ಕಮೆಂಟ್ ಮಾಡಿ ಶುಭಹಾರೈಸಿದ್ದಾರೆ. ಯುಜುವೇಂದ್ರ ಚಹಲ್‌ ಬೇಗ ಗುಣಮುಖರಾಗಿ ಎಂದು ಹಾರ್ಟ್‌ ಎಮೋಜಿಯೊಂದಿಗೆ ಕಮೆಂಟ್‌ ಮಾಡಿದ್ದಾರೆ. ಇದಷ್ಟೇ ಅಲ್ಲದೇ ರಾಜಸ್ಥಾನ ರಾಯಲ್ಸ್‌ ತಂಡದ ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್, ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ ಕೂಡಾ ಕಮೆಂಟ್ ಮಾಡಿ ಶುಭ ಹಾರೈಸಿದೆ.

One word Trend ವೈರಲ್ ಆಯ್ತು ದಿನೇಶ್ ಕಾರ್ತಿಕ್ ದೀಪಿಕಾ ಪಲ್ಲಿಕಲ್ ಜೋಡಿಯ ಒಂದೇ ಶಬ್ದದ ಟ್ವೀಟ್!

ಸದ್ಯ ಯುಜುವೇಂದ್ರ ಚಹಲ್‌, ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಭಾರತ ತಂಡವು ಈಗಾಗಲೇ ತಾನಾಡಿದ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿದೆ. ಇದೀಗ ಸೂಪರ್ 4 ಹಂತದಲ್ಲಿ ಟೀಂ ಇಂಡಿಯಾ, ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಕಾದಾಡಲು ರೆಡಿಯಾಗಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಇನ್ನು ಅನುಭವಿ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಏಷ್ಯಾಕಪ್ ಟೂರ್ನಿಯಲ್ಲಿ ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕುವುದಕ್ಕೆ ಯಶಸ್ವಿಯಾಗಿದ್ದಾರೆ. ಆದರೆ ವಿಕೆಟ್ ಕಬಳಿಸಲು ಮೊದಲೆರಡು ಪಂದ್ಯಗಳಲ್ಲಿ ವಿಫಲವಾಗಿದ್ದು, ಇಂದು ವಿಕೆಟ್‌ ಕಬಳಿಸಲು ರಣತಂತ್ರ ಹೆಣೆಯುತ್ತಿದ್ದಾರೆ.