Asianet Suvarna News Asianet Suvarna News

One word Trend ವೈರಲ್ ಆಯ್ತು ದಿನೇಶ್ ಕಾರ್ತಿಕ್ ದೀಪಿಕಾ ಪಲ್ಲಿಕಲ್ ಜೋಡಿಯ ಒಂದೇ ಶಬ್ದದ ಟ್ವೀಟ್!

ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹಾಗೂ ಪತ್ನಿ ದೀಪಿಕಾ ಪಲ್ಲಿಕಲ್ ಇಬ್ಬರು ಒಂದೊಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿರುವುದು ಒಂದೇ ಶಬ್ದ. ಆದರೆ ಈ ಶಬ್ದದ ಅರ್ಥ ಪದಗಳಿಗೆ ನಿಲುಕುತ್ತಿಲ್ಲ.ಈ ಒಂದು ಟ್ವೀಟ್‌ನ ಕತೆ ಇಲ್ಲಿದೆ.

Dinesh Karthik and Dipika Pallikal join Twitter one word trend with Each other names to show how adorable they are together ckm
Author
First Published Sep 2, 2022, 8:36 PM IST

ದುಬೈ(ಸೆ.02): ಟೀಂ ಇಂಡಿಯಾ ಕ್ರಿಕೆಟಿಗ ಸದ್ಯ ಏಷ್ಯಾಕಪ್ ಟೂರ್ನಿ ಆಡುತ್ತಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ.  ದಿನೇಶ್ ಕಾರ್ತಿಕ್ ಹಾಗೂ  ಕಾರ್ತಿಕ್ ಪತ್ನಿ, ಸ್ವ್ಕ್ಯಾಶ್ ಕ್ರೀಡಾಪಟು ದೀಪಿಕಾ ಪಲ್ಲಿಕಲ್ ಕ್ರೀಡಾಪಟುಗಳು ಮಾತ್ರವಲ್ಲ, ಪ್ರೀತಿಯ, ಹಾಗೂ ಅತ್ಯತ್ತಮ ಕಪಲ್ ಎಂದೇ ಗುರುತಿಸಿಕೊಂಡಿದ್ದಾರೆ. ಇದೀಗ ಈ ಜೋಡಿ ಟ್ವಿಟರ್‌ನಲ್ಲಿನ ಒಂದು ಪದದ ಟ್ರೆಂಡಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಟ್ವಿಟರ್‌ನಲ್ಲಿ ಒನ್ ವರ್ಡ್ ಟ್ರೆಂಡ್ ಹೆಚ್ಚಾಗುತ್ತಿದೆ. ತಮಗೆ ಇಷ್ಟವಿರುವ, ಹೇಳಬೇಕೆನ್ನಿಸುವ, ಅತೀಯಾಗಿ ಪ್ರೀತಿಸುವ ಅಥವಾ ಪ್ರೀತಿಸುವವರ ಕುರಿತು ಒಂದೇ ಶಬ್ದವನ್ನು ಟ್ವೀಟ್ ಮಾಡುವ ಟ್ರೆಂಡ್ ಇದು. ಈ ಟ್ರೆಡಿಂಗ್‌ನಲ್ಲಿ ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್ ಜಾಯಿನ್ ಆಗಿದ್ದಾರೆ. ಇವರಿಬ್ಬರು ಮಾಡಿದ ಟ್ವೀಟ್ ಮಾತ್ರ ಭಾರಿ ವೈರಲ್ ಆಗಿದೆ. ದಿನೇಶ್ ಕಾರ್ತಿಕ್ ಒನ್ ವರ್ಡ್ ಟ್ರೆಂಡಿಂಗ್ ಟ್ವೀಟ್‌ನಲ್ಲಿ ದೀಪಿಕಾ ಎಂದು ಟ್ವೀಟ್ ಮಾಡಿದ್ದರೆ, ದೀಪಿಕಾ ಪಲ್ಲಿಕಲ್ ದಿನೇಶ್  ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಒಬ್ಬರಿಗೊಬ್ಬರು ಅತೀಯಾಗಿ ಪ್ರೀತಿಸುತ್ತಿರುವುದನ್ನು ಹಾಗೂ ಅತ್ಯುತ್ತಮ ಸಂಬಂಧವನ್ನು ಒಂದೇ ಶಬ್ದದಲ್ಲಿ ವಿವರಿಸಿದ್ದಾರೆ.

ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್(Dinesh Karthik and Dipika Pallikal ) ಕ್ಯೂಟ್ ಹಾಗೂ ಬೆಸ್ಟ್ ಕಪಲ್(loving couple). ದಾಂಪತ್ಯ ಜೀವನದಲ್ಲಿ  ನೋವನ್ನೇ ಅನುಭವಿಸಿದ್ದ ದಿನೇಶ್ ಕಾರ್ತಿಕ್‌ಗೆ ಜೊತೆಯಾದ ದೀಪಿಕಾ ಪಲ್ಲಿಕಲ್, ಕಾರ್ತಿಕ್ ಕಮ್‌ಬ್ಯಾಕ್‌ನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.  ವೈಯುಕ್ತಿಕ ಜೀವನದಿಂದ ಕ್ರಿಕೆಟ್‌ನಿಂದ(Cricket) ದೂರವಾಗಿದ್ದ ದಿನೇಶ್ ಕಾರ್ತಿಕ್ ಇದೀಗ ಟೀಂ ಇಂಡಿಯಾ ಫಿನೀಶರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ದಿನೇಶ್ ಕಾರ್ತಿಕ್ ಜೀವನದಲ್ಲಿ ದೀಪಿಕಾ ಪಲ್ಲಿಕಲ್ ಪಾತ್ರ ಪ್ರಮುಖವಾಗಿದೆ. ಇತ್ತ ದೀಪಿಕಾಗೂ ಅಷ್ಟೇ ಪ್ರೋತ್ಸಾಹ ನೀಡುತ್ತಿರುವ ಕಾರ್ತಿಕ್ ಎಲ್ಲರ ಅಚ್ಚುಮೆಚ್ಚಿನ ಕ್ರಿಕೆಟಿಗನಾಗಿದ್ದಾರೆ. ಇದೀಗ ಇವರಿಬ್ಬರ ಟ್ವೀಟ್(Twitter One word Trend) ಭಾರಿ  ಸಂಚಲನ ಸೃಷ್ಟಿಸಿದೆ.

ಹಿಂದೆಂದೂ ನೋಡಿರದ ದಿನೇಶ್ ಕಾರ್ತಿಕ್‌ ಜತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ದೀಪಿಕಾ ಪಲ್ಲಿಕಲ್..!

ಟ್ವಿಟರ್ ಒನ್ ವರ್ಡ್ ಟ್ರೆಂಡ್‌ನಲ್ಲಿ ಈಗಾಗಲೇ ಹಲವು ದಿಗ್ಗಜರು ಪಾಲ್ಗೊಂಡಿದ್ದಾರೆ. ಟ್ವಿಟರ್ ಟ್ರೆಂಡಿಂಗ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕೂಡ ಸೇರಿಕೊಂಡಿತ್ತು. ಐಸಿಸಿ ಕ್ರಿಕೆಟ್ ಎಂದು ಟ್ವೀಟ್ ಮಾಡಿತ್ತು. ಇನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್(Sachin Tendulkar) ಕೂಡ ಕ್ರಿಕೆಟ್ ಎಂದು ಟ್ವೀಟ್ ಮಾಡಿದ್ದರು. 

 

 

ಏಷ್ಯಾಕಪ್ ಟೂರ್ನಿಯ(Asia Cup 2022) ಆರಂಭಿಕ ಎರಡೂ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದರು. ಮೊದಲ ಪಂದ್ಯದಲ್ಲಿ ಅಂದರೆ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ರಿಷಬ್ ಪಂತ್ ಬದಲು ದಿನೇಶ್ ಕಾರ್ತಿಕ್‌ಗೆ ಸ್ಥಾನ ನೀಡಲಾಗಿತ್ತು. ಆದರೆ ಎರಡೂ ಪಂದ್ಯದಲ್ಲಿ ದಿನೇಶ್ ಕಾರ್ತಿಕ್‌ಗೆ ಸರಿಯಾಗಿ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ.  37 ವರ್ಷದ ದಿನೇಶ್ ಕಾರ್ತಿಕ್ 2004ರಲ್ಲಿ ಟೀಂಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ಆದರೆ ಸದ್ಯ ಕಾರ್ತಿಕ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇಷ್ಟೇ ಅಲ್ಲ ಹೊಸ ಜವಾಬ್ದಾರಿಯೊಂದಿಗೆ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯು ಎಲ್ಲಾ ಸಾಧ್ಯತೆಗಳಿವೆ.

ಹೆಂಡತಿ ಇನ್ನೊಬ್ಬ ಕ್ರಿಕೆಟಿಗನ ಕೈ ಹಿಡಿದಾಗ ಖಿನ್ನತೆಗೊಳಗಾಗಿದ್ದರು Dinesh Karthik

Follow Us:
Download App:
  • android
  • ios