ನವದೆಹಲಿ(ಮಾ.25): ಭುಜದ ನೋವಿನಿಂದ ಬಳಲುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಇದೀಗ ಐಪಿಎಲ್ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ಶೋಲ್ಡರ್ ಡಿಸ್‌ಲೊಕೇಟ್ ಆಗಿರುವ ಶ್ರೇಯಸ್ ಅಯ್ಯರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಐಪಿಎಲ್ ಟೂರ್ನಿಯಿಂದಲೂ ಹೊರಗುಳಿಯುತ್ತಿದ್ದಾರೆ.

IND vs ENG: ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾಗೆ ಇಂಜುರಿ; ಆಸ್ಪತ್ರೆಗೆ ದಾಖಲು!

ಶ್ರೇಯಸ್ ಅಯ್ಯರ್‌ಗೆ ಸರ್ಜರಿ ಅವಶ್ಯಕತೆ ಇದೆ ಎಂದು ಬಿಸಿಸಿಐ ಹೇಳಿದೆ. ಈಗಾಗಲೇ ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯಿಂದ ಹೊರಗುಳಿದಿರುವ ಶ್ರೇಯಸ್ ಅಯ್ಯರ್ ಇದೀಗ ಐಪಿಎಲ್ ಟೂರ್ನಿಯಿಂದಲೂ ಹೊರಗುಳಯಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್  ಸಹ ಮಾಲೀಕ ಪಾರ್ಥ ಜಿಂದಾಲ್ ಸ್ಪಷ್ಟನೆ ನೀಡಿದ್ದಾರೆ.

 

ಶ್ರೇಯಸ್ ಅಯ್ಯರ್‌ಗೆ ಸರ್ಜರಿ ಅವಶ್ಯಕತೆ ಇರುವುದರಿಂದ ಕನಿಷ್ಠ 4 ತಿಂಗಳ ಅವಶ್ಯಕತೆ ಇದೆ. ಹೀಗಾಗಿ ಶ್ರೇಯಸ್ ಅಯ್ಯರ್ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಜಿಂದಾಲ್ ಖಚಿತಪಡಿಸಿದ್ದಾರೆ.  ಡೆಲ್ಲಿ ಕ್ಯಾಪಿಟಲ್ಸ್ ತಂಡ ಶ್ರೇಯರ್ ಅಯ್ಯರ್ ನಾಯಕತ್ವದಲ್ಲಿ ಅದ್ಬುತ ಪ್ರದರ್ಶನ ನೀಡಿದೆ. ಇದೀಗ ಡೆಲ್ಲಿ ತಂಡ ಟೂರ್ನಿ ಆರಂಭಕ್ಕೂ ಮುನ್ನವೇ ನಾಯಕನ ಸೇವೆ ಕಳೆದುಕೊಂಡಿದೆ.