ಒಂದು ಪಂದ್ಯ ಸೋತಿದ್ದಕ್ಕೆ ಆಕಾಶ ಕಳಚಿ ಬೀಳಲ್ಲ: ಕೊಹ್ಲಿ!
ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಟೆಸ್ಟ್ ಪಂದ್ಯದ ಸೋಲಿನ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತುಟಿ ಬಿಚ್ಚಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ
ವೆಲ್ಲಿಂಗ್ಟನ್(ಫೆ.25): ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 10 ವಿಕೆಟ್‌ಗಳಿಂದ ಸೋತಿದ್ದು, ಆಟದ ಒಂದು ಭಾಗವಷ್ಟೇ. ಒಂದು ಪಂದ್ಯ ಸೋತಿದ್ದರಿಂದ ಆಕಾಶ ಕಳಚಿ ಬೀಳುವುದಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸೋಮವಾರ ಹೇಳಿದರು.
ಟೀಂ ಇಂಡಿಯಾಗೆ 10 ವಿಕೆಟ್‌ಗಳ ಹೀನಾಯ ಸೋಲು, ಕಿವೀಸ್‌ಗೆ 100ನೇ ಐತಿಹಾಸಿಕ ಟೆಸ್ಟ್ ಗೆಲುವು
ಸೋಲಿನ ಬಳಿಕ ಮಾತನಾಡಿದ ಅವರು, ‘ನಾವು ಸರಿಯಾಗಿ ಆಡಲಿಲ್ಲ ಎಂದು ನಮಗೆ ಗೊತ್ತಿದೆ. ಆದರೆ ಇದನ್ನೇ ದೊಡ್ಡ ವಿಷಯವನ್ನಾಗಿಸಿಕೊಂಡು ಹಲವರು ಟೀಕಿಸುತ್ತಿದ್ದಾರೆ. ಅದಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ. ಒಂದು ಪಂದ್ಯ ಸೋತರೆ ಆಕಾಶ ಕಳಚಿ ಬೀಳುವುದಿಲ್ಲ. ಕೆಲವರಿಗೆ ಇದೇ ಕೊನೆ ಎನಿಸಿರುತ್ತದೆ. ಆದರೆ ನಮಗಲ್ಲ. ಒಂದು ಪಂದ್ಯವನ್ನು ಸೋತಿದ್ದೇವೆ ಅಷ್ಟೇ. ಸೋಲನ್ನು ಒಪ್ಪಿಕೊಂಡು ತಲೆ ಎತ್ತಿ ಮುನ್ನಡೆಯಬೇಕು’ ಎಂದರು. ‘ಎಲ್ಲೇ ಆಡಿದರೂ ಗೆಲ್ಲಬೇಕು ಎಂದರೆ ಉತ್ತಮ ಆಟವಾಡಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೂ ಸುಲಭವಲ್ಲ. ಪ್ರತಿ ತಂಡವೂ ಎದುರಾಳಿಯನ್ನು ಸೋಲಿಸಲೆಂದೇ ಆಡುತ್ತದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು’ ಎಂದು ಕೊಹ್ಲಿ ಹೇಳಿದರು.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾದಾಗಿನಿಂದ ಟೀಂ ಇಂಡಿಯಾ ಸತತ 7 ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಟೀಂ ಇಂಡಿಯಾಗೆ, ಕೇನ್ ವಿಲಿಯಮ್ಸನ್ ಪಡೆ ಶಾಕ್ ನೀಡಿತ್ತು. ಇದೀಗ ಸರಣಿ ಸಮಬಲ ಸಾಧಿಸಬೇಕಿದ್ದರೆ, ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಎರಡನೇ ಪಂದ್ಯ ಫೆಬ್ರವರಿ 29ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ.