ನವದೆಹಲಿ[ನ.21]: ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದ ಸ್ಟ್ಯಾಂಡ್‌ವೊಂದಕ್ಕೆ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಹೆಸರನ್ನಿಡಲು ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ನಿರ್ಧರಿಸಿದೆ. 

ಕೋಟ್ಲಾ ಈಗ ಜೇಟ್ಲಿ ಕ್ರೀಡಾಂಗಣ; ಸಮಾರಂಭದಲ್ಲಿ ಕೊಹ್ಲಿ, ಅಮಿತ್ ಶಾ!

ಮುಂದಿನ ರಣಜಿ ಋುತುವಿನ ಆರಂಭಕ್ಕೆ ಮುನ್ನ ಗಂಭೀರ್‌ ಗೌರವಿಸಲಾಗುವುದು. ಜೂನ್‌ನಲ್ಲಿ ಗಂಭೀರ್‌ ಸ್ಟ್ಯಾಂಡ್‌ ಪ್ರಸ್ತಾಪ ಮಾಡಲಾಗಿತ್ತು. ಡಿಡಿಸಿಎ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯದ ಕಾರಣದಿಂದ ತಡವಾಯಿತು. ಸೆಪ್ಟೆಂಬರ್‌ನಲ್ಲಿ ಭಾರತ ನಾಯಕ ವಿರಾಟ್‌ ಕೊಹ್ಲಿ ಹೆಸರಿನ ಸ್ಟ್ಯಾಂಡನ್ನು ಉದ್ಘಾಟಿಸಿದ್ದು, ಫಿರೋಜ್‌ ಷಾ ಕೋಟ್ಲಾ ಮೈದಾನದ ಹೆಸರನ್ನೂ ಅರುಣ್ ಜೇಟ್ಲಿ ಮೈದಾನವೆಂದು ಬದಲಿಸಲಾಗಿತ್ತು. 

ಸಕ್ಸಸ್ ಅಂದ್ರೆ ಇದೇ ಅಲ್ವಾ..? 2001ರಲ್ಲಿ ಕನ್ನಡಿಗನ ಆಟೋಗ್ರಾಫ್ ಕೇಳಿದ್ದ ಕೊಹ್ಲಿ..!

‘ಭಾರತ ತಂಡಕ್ಕೆ ಗೌತಮ್ ಗಂಭೀರ್ ನೀಡಿದ ಕೊಡುಗೆಯನ್ನು ಗುರುತಿಸಿ ಗೌರವಿಸಲು ನಾವು ವಿಫಲರಾಗಿದ್ದು ದುರಾದೃಷ್ಟಕರ. ಶೀಘ್ರ ಗಂಭೀರ್‌ ಸ್ಟ್ಯಾಂಡ್‌ ಅನಾವರಣಗೊಳಿಸಿ ಗಂಭೀರ್‌ ಸನ್ಮಾನಿಸುತ್ತೇವೆ’ ಎಂದು ಡಿಡಿಸಿಎ ಜಂಟಿ ಕಾರ‍್ಯದರ್ಶಿ ರಾಜನ್‌ ಮನ್‌ಚಂದಾ ತಿಳಿಸಿದರು.

ಗೌತಮ್ ಗಂಭೀರ್ ಭಾರತ ಪರ 58 ಟೆಸ್ಟ್ ಹಾಗೂ 147 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 4157 ಹಾಗೂ 5238 ರನ್ ಬಾರಿಸಿದ್ದಾರೆ. ಇನ್ನು 37 ಟಿ20 ಪಂದ್ಯಗಳನ್ನಾಡಿ 932 ರನ್ ಬಾರಿಸಿದ್ದಾರೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಭಾರತ ಪರ ಮಹತ್ವದ ಪಾತ್ರ ನಿಭಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

ಈಗಾಗಲೇ ಅರುಣ್ ಜೇಟ್ಲಿ ಮೈದಾನದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಬಿಷನ್ ಸಿಂಗ್ ಬೇಡಿ, ಮೊಹಿಂದರ್ ಅಮರ್ ನಾಥ್ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿನ ಸ್ಟ್ಯಾಂಡ್ ನಿರ್ಮಾಣವಾಗಿದೆ. ಈ ಪಟ್ಟಿಗೆ ಗೌತಮ್ ಗಂಭೀರ್ ಸೇರ್ಪಡೆಯಾಗಲಿದ್ದಾರೆ.