ವುಮೆನ್ಸ್‌ ಪ್ರೀಮಿಯರ್ ಲೀಗ್‌ ಹರಾಜು ಮುಕ್ತಾಯಬಲಿಷ್ಠ ತಂಡವನ್ನು ಕಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಡೆಲ್ಲಿ ತಂಡಕ್ಕೆ ಬಲ ತುಂಬಲಿರುವ ಜೆಮಿಮಾ ರೋಡ್ರಿಗ್ಸ್‌, ಶಫಾಲಿ ವರ್ಮಾ

ಬೆಂಗಳೂರು(ಫೆ.13): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಕನವರಿಕೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಇದೀಗ, ವುಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿಯು ಸಾಕಷ್ಟು ಟಿ20 ಸ್ಪೆಷಲಿಸ್ಟ್ ಆಟಗಾರ್ತಿಯರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಬಾರಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಆರು ವಿದೇಶಿ ಆಟಗಾರ್ತಿಯರು ಸೇರಿದಂತೆ ಒಟ್ಟು 18 ಆಟಗಾರ್ತಿಯರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. 18 ಆಟಗಾರ್ತಿಯರನ್ನು ಖರೀದಿಸಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿಯ ಪರ್ಸ್‌ನಲ್ಲಿ ಇನ್ನೂ 35 ಲಕ್ಷ ರುಪಾಯಿಗಳನ್ನು ಉಳಿಸಿಕೊಂಡಿದೆ. 

WPL Auction: ಸ್ಮೃತಿ ಮಂಧನಾ, ರಿಚಾ ಘೋಷ್ ಸೇರಿದಂತೆ ಬಲಿಷ್ಠ ಮಹಿಳಾ ತಂಡವನ್ನು ಕಟ್ಟಿದ RCB..!

ವುಮೆನ್ಸ್‌ ಪ್ರೀಮಿಯರ್ ಲೀಗ್ ಹರಾಜಿನ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿಯು ಕಾದು ನೋಡುವ ತಂತ್ರವನ್ನು ಅನುಸರಿಸಿತು. ಇದರ ಜತೆಗೆ ಯಾವುದೇ ಆಟಗಾರ್ತಿಗೆ 2.20 ಕೋಟಿಗೂ ಅಧಿಕ ಹಣ ವ್ಯಯಿಸಲು ಹೋಗಲಿಲ್ಲ. ಡೆಲ್ಲಿ ಫ್ರಾಂಚೈಸಿಯು ಮೊದಲಿಗೆ ಭಾರತ ತಂಡದ ನಂಬಿಗಸ್ಥ ಬ್ಯಾಟರ್ ಜೆಮಿಮಾ ರೋಡ್ರಿಗ್ಸ್‌ ಅವರಿಗೆ 2.20 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸ್ವಾಗತಿಸಿತು. ಇದಾದ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್‌ ಲ್ಯಾನಿಂಗ್ ಅವರಿಗೆ 1.10 ಕೋಟಿ ನೀಡಿ ತನ್ನತ್ತ ಸೆಳೆದುಕೊಂಡಿತು. 

ಇನ್ನುಳಿದಂತೆ ಸ್ಪೋಟಕ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಅವರನ್ನು 2 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇದಷ್ಟೇ ಅಲ್ಲದೇ ಆಲ್ರೌಂಡರ್‌ಗಳಾದ ರಾಧಾ ಯಾದವ್, ಶಿಖಾ ಪಾಂಡೆ ಅವರನ್ನು ತನ್ನ ತೆಕ್ಕೆಗೆ ಖರೀದಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ.

WPL ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಹೀಗಿದೆ ನೋಡಿ:

1. ಜೆಮಿಮಾ ರೋಡ್ರಿಗಸ್‌: 2.20 ಕೋಟಿ ರುಪಾಯಿ
2. ಮೆಗ್‌ ಲ್ಯಾನಿಂಗ್‌: 1.10 ಕೋಟಿ ರುಪಾಯಿ
3. ಶಫಾಲಿ ವರ್ಮಾ: 2 ಕೋಟಿ ರುಪಾಯಿ
4. ರಾಧಾ ಯಾದವ್: 40 ಲಕ್ಷ ರುಪಾಯಿ
5. ಶಿಖಾ ಪಾಂಡೆ: 60 ಲಕ್ಷ ರುಪಾಯಿ
6. ಮಾರಿಜೆನ್ನೆ ಕ್ಯಾಪ್‌: 1.50 ಕೋಟಿ ರುಪಾಯಿ
7. ತಿತಾಸ್ ಸಧು: 25 ಲಕ್ಷ ರುಪಾಯಿ
8. ಎಲಿಸ್‌ ಕ್ಯಾಪ್ಸಿ: 75 ಲಕ್ಷ ರುಪಾಯಿ
9. ತಾರಾ ನಾರಿಸ್: 10 ಲಕ್ಷ ರುಪಾಯಿ
10. ಲೌರಾ ಹ್ಯಾರಿಸ್: 45 ಲಕ್ಷ ರುಪಾಯಿ
11. ಜೆಸಿಯಾ ಅಖ್ತರ್: 20 ಲಕ್ಷ ರುಪಾಯಿ
12. ಮಿನ್ನು ಮಣಿ: 30 ಲಕ್ಷ ರುಪಾಯಿ
13. ಜೆಸ್‌ ಜಾನ್ನೆಸನ್‌: 50 ಲಕ್ಷ ರುಪಾಯಿ
14. ತಾನಿ ಭಾಟಿಯಾ: 30 ಲಕ್ಷ ರುಪಾಯಿ
15. ಪೂನಂ ಯಾದವ್: 30 ಲಕ್ಷ ರುಪಾಯಿ
16. ಸ್ನೆಹಾ ದೀಪ್ತಿ: 30 ಲಕ್ಷ ರುಪಾಯಿ
17. ಅರುಂದತಿ ರೆಡ್ಡಿ: 30 ಲಕ್ಷ ರುಪಾಯಿ
18. ಅಪರ್ಣ ಮಂಡಲ್‌: 10 ಲಕ್ಷ ರುಪಾಯಿ