ಭಾರತ-ಬಾಂಗ್ಲಾದೇಶ ನಡುವಿನ ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಕೆಲವೇ ದಿನಗಳು ಬಾಕೀ ಉಳಿದಿವೆ. ಹೀಗಿರುವಾಗಲೇ ಈ ಕುರಿತಾಗಿ ಭರ್ಜರಿ ಪ್ರಚಾರ ಆರಂಭವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಕೋಲ್ಕತಾ(18): ನ.22ರಿಂದ 26ರ ವರೆಗೆ ಇಲ್ಲಿನ ನಡೆಯಲಿರುವ ಭಾರತದ ಚೊಚ್ಚಲ ಹಗಲು-ರಾತ್ರಿ ಟೆಸ್ಟ್‌ಗೆ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಭಾರೀ ಸಿದ್ಧತೆ ನಡೆಸಿದೆ. ಭಾನುವಾರ ಈಡನ್ ಗಾರ್ಡನ್ಸ್‌ನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಿಂಕ್ ಬಾಲ್ ಟೆಸ್ಟ್‌ನ ಅಧಿಕೃತ ಮ್ಯಾಸ್ಕಟ್‌ಗಳಾದ ‘ಪಿಂಕು-ಟಿಂಕು’ಗಳನ್ನು ಅನಾವರಣಗೊಳಿಸಿದರು. ಜತೆಗೆ ಮ್ಯಾಚ್ ಟಿಕೆಟ್ ಅನ್ನು ಸಹ ಪ್ರದರ್ಶಿಸಿದರು.
ಪಿಂಕ್ ಬಾಲ್ ಟೆಸ್ಟ್‌ಗೆ ಇಂದೋರ್‌ನಲ್ಲೇ ಅಭ್ಯಾಸ
ಪಂದ್ಯವನ್ನು ಅವಿಸ್ಮರಣೀಯಗೊಳಿಸಲು ಹಾಗೂ ಪ್ರಚಾರಕ್ಕಾಗಿ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಪಿಂಕ್ ಬಾಲ್ ಟೆಸ್ಟ್ ಆರಂಭದಿಂದ ಮುಕ್ತಾಯದ ವರೆಗೂ ಗುಲಾಬಿ ಬಣ್ಣದ ಬಲೂನ್ ಒಂದನ್ನು ಮೈದಾನದ ಮೇಲೆ ಹಾರಿಸಲಾಗುತ್ತದೆ. ನಗರದ ಅತಿ ಎತ್ತರದ ಶಾಹಿದ್ ಮಿನಾರ್, ‘42’ ಕಟ್ಟಡ ಹಾಗೂ ವಿವಿಧ ಪಾರ್ಕ್’ಗಳಲ್ಲಿ ಗುಲಾಬಿ ಬಣ್ಣದ ಲೈಟ್ಗಳನ್ನು ಹಾಕಲಾಗಿದೆ. ನ.20ರಿಂದ ಟಾಟಾ ಸ್ಟೀಲ್ ಕಟ್ಟಡದಲ್ಲಿ 3ಡಿ ಮ್ಯಾಪಿಂಗ್ ವ್ಯವಸ್ಥೆ ಮಾಡಲಾಗಿದೆ. ಮೈದಾನ, ರಸ್ತೆ ಬದಿ ಗೋಡೆಗಳ ಮೇಲೆ ಚಿತ್ತಾರ ಮಾಡಲಾಗಿದೆ. ಹೂಗ್ಲಿ ನದಿಯಲ್ಲಿ ಪಿಂಕ್ ಲೈಟಿಂಗ್‌ವುಳ್ಳ ದೋಣಿ ಓಡಿಸಲಾಗುತ್ತಿದೆ.
ಪಿಂಕ್ ಬಾಲ್‌ನಲ್ಲಿ ಟೀಂ ಇಂಡಿಯಾ ಪ್ರಾಕ್ಟೀಸ್!
ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನಾಡಲು ರೆಡಿಯಾಗಿದ್ದು, ಈ ಪಂದ್ಯವನ್ನು ಗೆಲ್ಲುವುದರೊಂದಿಗೆ ಬಾಂಗ್ಲಾದೇಶ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಲು ರೆಡಿಯಾಗಿದೆ. ಈಗಾಗಲೇ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಆಡಿದ 6 ಪಂದ್ಯಗಳಲ್ಲೂ ಗೆಲುವಿನ ನಗೆ ಬೀರಿರುವ ವಿರಾಟ್ ಪಡೆ, ಇದೀಗ ಮತ್ತೊಂದು ಗೆಲುವಿನ ಕನವರಿಕೆಯಲ್ಲಿದೆ.
Last Updated 18, Nov 2019, 1:37 PM IST