ಇಂದೋರ್‌[ನ.17]: 3ನೇ ದಿನದಲ್ಲಿ ಮೊದಲ ಪಂದ್ಯ ಗೆದ್ದ ಭಾರತ, ನ.22ರಿಂದ ಕೋಲ್ಕ​ತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆ​ಯ​ಲಿ​ರುವ 2ನೇ ಟೆಸ್ಟ್‌ನತ್ತ ದೃಷ್ಟಿನೆಟ್ಟಿದೆ. ಈ ಪಂದ್ಯ​ಕ್ಕಾಗಿ 2 ದಿನ ಇಂದೋರ್‌ನಲ್ಲೇ ಅಭ್ಯಾಸ ನಡೆ​ಸಲು ಎರ​ಡೂ ತಂಡ​ಗ​ಳು ನಿರ್ಧ​ರಿ​ಸಿವೆ. 

ಭಾರತದ ದಾಳಿಗೆ ಬಾಂಗ್ಲಾ ಖಲ್ಲಾಸ್; ಮೂರೇ ದಿನಕ್ಕೆ ಪಂದ್ಯ ಕ್ಲೋಸ್!

ಸೂರ್ಯ ಮುಳು​ಗುವ ಸಮ​ಯ​ದಲ್ಲಿ ಪಿಂಕ್‌ ಬಾಲ್‌ ಎದು​ರಿ​ಸು​ವುದು ಬಹಳ ಕಷ್ಟ ಎನ್ನುವ ಅಭಿ​ಪ್ರಾಯ ಈಗಾ​ಗಲೇ ಚೆಂಡನ್ನು ಬಳಕೆ ಮಾಡಿ​ರುವ ಆಟ​ಗಾ​ರ​ರಿಂದ ವ್ಯಕ್ತ​ವಾ​ಗಿದೆ. ಹೀಗಾಗಿ ಅಭ್ಯಾ​ಸದ ವೇಳೆ ಅದರತ್ತ ಹೆಚ್ಚಿನ ಗಮನ ಹರಿ​ಸಲು ಭಾರತ ತಂಡ ನಿರ್ಧ​ರಿ​ಸಿದೆ ಎನ್ನ​ಲಾ​ಗಿದೆ.

ಪಿಂಕ್ ಬಾಲ್‌ನಲ್ಲಿ ಟೀಂ ಇಂಡಿಯಾ ಪ್ರಾಕ್ಟೀಸ್!

ಐತಿ​ಹಾ​ಸಿಕ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಗೆದ್ದು ತವ​ರಿ​ನಲ್ಲಿ ಸತತ 12ನೇ ಸರಣಿ ಗೆಲ್ಲುವ ಗುರಿ​ಯನ್ನು ವಿರಾಟ್‌ ಕೊಹ್ಲಿ ಪಡೆ ಹೊಂದಿದೆ. ಬಾಂಗ್ಲಾ​ದೇ​ಶಕ್ಕೂ ಇದು ಮೊದಲ ಪಿಂಕ್‌ ಬಾಲ್‌ ಟೆಸ್ಟ್‌ ಆಗಿದ್ದು, ಉಭಯ ತಂಡ​ಗಳ ನಡುವೆ ಏರ್ಪ​ಡುವ ಪೈಪೋಟಿ ಕುತೂ​ಹಲ ಮೂಡಿಸಿದೆ. ಪಂದ್ಯ ಮಧ್ಯಾಹ್ನ 1ಕ್ಕೆ ಆರಂಭ​ಗೊಂಡು, ರಾತ್ರಿ 8ಕ್ಕೆ ಮುಕ್ತಾ​ಯ​ಗೊ​ಳ್ಳ​ಲಿದೆ.

ಬೆಂಗಳೂರು ಎನ್‌ಸಿಎನಲ್ಲಿ ಪಿಂಕ್ ಬಾಲ್ ಅಭ್ಯಾಸ!

2ನೇ ಟೆಸ್ಟ್‌ ಬಗ್ಗೆ ಮಾತ​ನಾ​ಡಿ​ದ ವಿರಾಟ್‌, ‘ಪಿಂಕ್‌ ಬಾಲ್‌ ಪಂದ್ಯವನ್ನಾ​ಡಲು ಉತ್ಸು​ಕ​ರಾ​ಗಿ​ದ್ದೇವೆ. ಭಾರತ ತಂಡವಾಡಿದ ಮೊದಲ ಪಿಂಕ್‌ ಬಾಲ್‌ ಟೆಸ್ಟ್‌ನ ಸದ​ಸ್ಯರಾಗ​ಲಿ​ದ್ದೇವೆ ಎನ್ನುವ ಬಗ್ಗೆ ಹೆಮ್ಮೆ ಇದೆ. ದಾಖಲೆಗಳ ಬಗ್ಗೆ ನಾವು ಗಮನ ಹರಿ​ಸು​ವು​ದಿಲ್ಲ. ಪ್ರತಿ ಪಂದ್ಯವನ್ನು ಗೆಲ್ಲು​ವುದು ನಮ್ಮ ಗುರಿ’ ಎಂದರು.

ಪ್ಯಾರಾ ಟ್ರೂಪ​ರ್ಸ್’ನಿಂದ ಚೆಂಡು!

ಹಗ​ಲು-ರಾತ್ರಿ ಟೆಸ್ಟ್‌ಗೆ ಸೇನೆಯ ಪ್ಯಾರಾ ಟ್ರೂಪರ್‌ಗಳು ಮೈದಾ​ನಕ್ಕೆ ಚೆಂಡನ್ನು ತರ​ಲಿ​ದ್ದಾರೆ. ಪಿಚ್‌ ಬಳಿ ಇಳಿ​ಯ​ಲಿ​ರುವ ಪ್ಯಾರಾ ಟ್ರೂಪರ್‌ಗಳು ಚೆಂಡನ್ನು ನಾಯ​ಕರಿಗೆ ಹಸ್ತಾಂತ​ರಿ​ಸ​ಲಿ​ದ್ದಾರೆ ಎಂದು ಬಂಗಾಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಅಭಿ​ಷೇಕ್‌ ದಾಲ್ವಿಯಾ ಹೇಳಿ​ದ್ದಾರೆ. ಪಂದ್ಯದ ವೇಳೆ ಹಲವು ಕಾರ್ಯ​ಕ್ರಮಗಳನ್ನು ಹಮ್ಮಿ​ಕೊಂಡಿ​ರು​ವು​ದಾಗಿ ಅವರು ತಿಳಿ​ಸಿ​ದ್ದಾರೆ.