ರಾಂಚಿ(ಏ.04): ಕೊರೋನಾ ವೈರಸ್‌ ಹರಡುತ್ತಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭ್ಯಾಸ ಶಿಬಿರ ರದ್ದುಗೊಳಿಸಿತು. ಇದರ ಬೆನ್ನಲ್ಲೇ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ರಾಂಚಿಗೆ ವಾಪಾಸ್ಸಾಗಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಭಾರತ ಲಾಕ್‌ಡೌನ್ ಘೋಷಣೆ ಮಾಡಿದರು. ಸದ್ಯ ಮನೆಯಲ್ಲಿ ಧೋನಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ವೇಳೆ  ಪುತ್ರಿ ಝಿವಾ, ಧೋನಿಗೆ ಮೇಕಪ್ ಮಾಡಿದ್ದಾರೆ. ಬ್ಯೂಟಿಷಿನ್ ರೀತಿಯಲ್ಲಿ ಮೇಕಪ್ ಮಾಡಿರುವ ವಿಡಿಯೋ ಭಾರಿ ಮೆಚ್ಚುಗೆ ಪಡೆದಿದೆ.

ವಯಸ್ಸು 4, ಫ್ಯಾನ್ ಫಾಲೋವರ್ಸ್ 15 ಲಕ್ಷ; ದಾಖಲೆ ಬರೆದ ಝಿವಾ ಧೋನಿ!.

ಧೋನಿ ಪುತ್ರಿಯ ಅವತಾರ ನೋಡಿದ ಧೋನಿಯ ಹೇರ್‌ಸ್ಟೈಲ್ ಡಿಸೈನರ್ , ಮುಂಬೈನ ಖ್ಯಾತ ಸಪ್ನಾ ಭವ್ನಾನಿಗೆ ತಲೆನೋವು ಹೆಚ್ಚಾಗಿದೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಧೋನಿಗೆ ಹೇರ್‌ಸ್ಟೈಲ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇದೀಗ  ನನ್ನ ಕೆಲಸ ಕಳೆದುಕೊಂಡ ಎಂದು ಅನಿಸುತ್ತಿದೆ ಎಂದು ಭವ್ನಾನಿ  ಹಳೇ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. 

 

ಕಾರು ತೊಳೆದು ಸುಸ್ತಾದ ಧೋನಿಗೆ ಪುತ್ರಿ ಝಿವಾ ಮಸಾಜ್!.

2020ರ ಐಪಿಎಲ್ ಟೂರ್ನಿಯಲ್ಲಿ ಧೋನಿ ಪ್ರದರ್ಶನ ಆಧರಿಸಿ ಟೀಂ ಇಂಡಿಯಾಗೆ ಆಯ್ಕೆ ಮಾಡಲಿದ್ದೇವೆ ಎಂದು ಆಯ್ಕೆ ಸಮಿತಿ ಹೇಳಿತ್ತು. ಆದರೆ ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿ ರದ್ದಾಗಿದೆ. ಇನ್ನು ಐಪಿಎಲ್ ಆಯೋಜನೆ ಸದ್ಯಕ್ಕೆ ಅಸಾಧ್ಯ. ಇತ್ತ 2019ರ ವಿಶ್ವಕಪ್ ಟೂರ್ನಿ ಬಳಿಕ ಅಂದೆ ಬರೋಬ್ಬರಿ 8 ತಿಂಗಳಿನಿಂದ ಧೋನಿ ಯಾವುದೇ ಕ್ರಿಕೆಟ್ ಆಡಿಲ್ಲ. ಅಂತಾರಾಷ್ಟ್ರೀಯ ಮಾತ್ರವಲ್ಲ, ದೇಸಿ ಕ್ರಿಕೆಟ್‌ನಿಂದಲೂ ದೂರ ಉಳಿದಿದ್ದಾರೆ.

ಐಪಿಎಲ್ ರದ್ದಾಗೋ ಮೂಲಕ ಇದೀಗ ಧೋನಿ ಕಮ್‌ಬ್ಯಾಕ್ ಕೂಡ ಸ್ಪಷ್ಟತೆ ಇಲ್ಲದಾಗಿದೆ. ಭಾರತದ ದಿಗ್ಗಜ ಕ್ರಿಕೆಟಿಗ, ಯಶಸ್ವಿ ನಾಯಕ, ಐಸಿಸಿಯ 3 ಟ್ರೋಫಿ ತಂದುಕೊಟ್ಟ ಧೋನಿ ವಿದಾಯದ ಪಂದ್ಯ ಆಡದೇ ಗುಡ್ ಬೈ ಹೇಳುತ್ತಾರಾ ಅನ್ನೋ ಆತಂಕ ಅಭಿಮಾನಿಗಳಿಗೆ ಕಾಡುತ್ತಿದೆ.