ಶ್ರೀಲಂಕಾ ವಿರುದ್ದದ ಏಕದಿನ ಸರಣಿಯನ್ನು ವೆಸ್ಟ್ ಇಂಡೀಸ್ ಕ್ಲೀನ್ ಸ್ವೀಪ್ ಮಾಡಿದೆ. 3 ಪಂದ್ಯಗಳಲ್ಲೂ ಗೆದ್ದು ಬೀಗಿದ ಪೊಲ್ಲಾರ್ಡ್ ಪಡೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನಾರ್ಥ್ ಸೌಂಡ್(ಮಾ.16): ಡೇರೆನ್ ಬ್ರಾವೋ ಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್ ಗೆಲುವು ಸಾಧಿಸಿದ ವೆಸ್ಟ್‌ಇಂಡೀಸ್, 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
ಮೊದಲು ಬ್ಯಾಟ್ ಮಾಡಿದ ಲಂಕಾ 6 ವಿಕೆಟ್‌ಗೆ 274 ರನ್ ಗಳಿಸಿತು. 39ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್‌ಗೆ 3ನೇ ವಿಕೆಟ್‌ಗೆ ಬ್ರಾವೋ ಹಾಗೂ ಶಾಯ್ ಹೋಪ್ ನಡುವೆ ದಾಖಲಾದ 109 ರನ್ ಜೊತೆಯಾಟ ಚೇತರಿಕೆ ನೀಡಿತು. ಬಳಿಕ ಬ್ರಾವೋ ಹಾಗೂ ಪೊಲ್ಲಾರ್ಡ್ 80 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
3-0
— ICC (@ICC) March 15, 2021
Yep, that’s the scoreline! 😁@KieronPollard55 | #WIvSL pic.twitter.com/rPk9UOxIin
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶಾಯ್ ಹೋಪ್ 64 ರನ್ ಬಾರಿಸಿದರೆ, ಡೇರನ್ ಬ್ರಾವೋ 132 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 102 ರನ್ ಬಾರಿಸಿದರು. ಇನ್ನು ಕೊನೆಯಲ್ಲಿ ನಾಯಕನ ಆಟವಾಡಿದ ಪೊಲ್ಲಾರ್ಡ್ ಕೇವಲ 42 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 53 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಎವಿನ್ ಲೆವಿಸ್ ಶತಕ, ಲಂಕಾ ಎದುರು ವಿಂಡೀಸ್‌ಗೆ ರೋಚಕ ಜಯ
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ಆಶನ್ ಬಂಡಾರ(55*) ಹಾಗೂ ವಹಿಂದು ಹಸರಂಗಾ(80*) ಏಳನೇ ವಿಕೆಟ್‌ಗೆ ಮುರಿಯದ 123 ರನ್‌ಗಳ ಜತೆಯಾಟದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 274 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು.
ಲಂಕಾ ತಂಡವು ಈ ಮೊದಲು ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈಚೆಲ್ಲಿತ್ತು, ಅದಾದ ಬಳಿಕ ಇದೀಗ 3-0 ಅಂತರದಲ್ಲಿ ಏಕದಿನ ಸರಣಿಯಲ್ಲೂ ಮುಖಭಂಗ ಅನುಭವಿಸಿದೆ. ಇನ್ನು ಮಾರ್ಚ್ 21ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಾದರೂ ಕೆರಿಬಿಯನ್ನರಿಗೆ ಲಂಕಾ ತಿರುಗೇಟು ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಸ್ಕೋರ್:
ಲಂಕಾ 50 ಓವರಲ್ಲಿ 274/6 (ಸಿಲ್ವಾ 80, ಹೊಸೆನ್ 3-33)
ವಿಂಡೀಸ್ 48.3 ಓವರಲ್ಲಿ 276/5(ಬ್ರಾವೋ 102, ಲಕ್ಮಾಲ್ 2-56)
Last Updated Mar 16, 2021, 8:43 AM IST