Asianet Suvarna News Asianet Suvarna News

3 ಸಾವಿರ ಕೋಟಿ ರೂಪಾಯಿ ಮೌಲ್ಯದ ಐಪಿಎಲ್‌ನಲ್ಲಿ ಪಾಲು ಖರೀದಿಸಲು ಮುಂದಾದ ಸೌದಿ ಅರೇಬಿಯಾ!

Saudi Arabia eyes stake in Indian Premier League: ಸೌದಿ ಅರೇಬಿಯಾ ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ಮೌಲ್ಯದ ಐಪಿಎಲ್‌ನಲ್ಲಿ ಪಾಲು ಖರೀದಿಸಲು ಮುಂದಾಗಿದೆ. ಐಪಿಎಲ್‌ಅನ್ನು ಕಂಪನಿ ರೀತಿಯಲ್ಲಿ ಮಾಡಿ ಅದರಲ್ಲಿ 3 ಸಾವಿರ ಕೋಟಿಯನ್ನು ಹೂಡಿಕೆ ಮಾಡಲು ಸೌದಿ ಅರೇಬಿಯಾ ಮುಂದೆ ಬಂದಿದೆ ಎಂದು ವರದಿಯಾಗಿದೆ.

Reports says  Saudi Arabia eyes stake in 30 billion USD Indian Premier League san
Author
First Published Nov 3, 2023, 4:42 PM IST

ಮುಂಬೈ (ನ.3):  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸೌದಿ ಅರೇಬಿಯಾ ಬಹುಕೋಟಿ ಡಾಲರ್ ಪಾಲನ್ನು ಖರೀದಿಸಲು ಆಸಕ್ತಿಯನ್ನು ವ್ಯಕ್ತಪಡಿಸಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಶುಕ್ರವಾರ ವರದಿ ಮಾಡಿದೆ. ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಸಲಹೆಗಾರರು ಐಪಿಎಲ್‌ಅನ್ನು 3 ಸಾವಿರ ಕೋಟಿ ರೂಪಾಯಿ ಮೌಲ್ಯದ ಹೋಲ್ಡಿಂಗ್‌ ಕಂಪನಿಯನ್ನಾಗಿ ಬದಲಾಯಿಸುವ ಬಗ್ಗೆ ಭಾರತ ಸರ್ಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಹಾಗೇನಾದರೂ ಆದಲ್ಲಿ ಈ ಕಂಪನಿಯ ಪಾಲನ್ನು ತಾವೂ ಪಡೆದುಕೊಳ್ಳುವುದಾಗಿ ತಿಳಿಸಿದೆ ಎಂದು ವರದಿಯಲ್ಲಿ ಬರೆಯಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ ಇದಾಗಿದೆ. ಇನ್ನೊಂದೆಡೆ, ಸೌದಿ ಅರೇಬಿಯಾ ಕೂಡ ನಿರಂತರವಾಗಿ ವಿಶ್ವದ ಹಲವು ವೃತ್ತಿಪರ ಕ್ರೀಡೆಗಳಲ್ಲಿ ತನ್ನ ಹೂಡಿಕೆಗಳನ್ನು ಮಾಡಿದೆ. ಗಾಲ್ಫ್‌ ಹಾಗೂ ಫುಟ್‌ಬಾಲ್‌ನಲ್ಲಿ ಸೌದಿ ಅರೇಬಿಯಾ ಸರ್ಕಾರದ ಹೂಡಿಕೆಗಳು ಈಗಾಗಲೇ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದೆ. ಹಾಗೇನಾದರೂ ಐಪಿಎಲ್‌ಅನ್ನು ಹೋಲ್ಡಿಂಗ್‌ ಕಂಪನಿಯನ್ನಾಗಿ ಮಾಡಿದಲ್ಲಿ ಅದರಲ್ಲಿ ದೊಡ್ಡ ಪ್ರಮಾಣದ ಪಾಲನ್ನು ತಾನು ಖರೀದಿ ಮಾಡಲಿದ್ದೇನೆ ಎಂದು ಸೌದಿ ಅರೇಬಿಯಾ ತಿಳಿಸಿದೆ ಎಂದು ಆಪ್ತ ಮೂಲಗಳು ವರದಿ ಮಾಡಿದೆ. 

ಕಳೆದ ಸೆಪ್ಟೆಂಬರ್‌ನಲ್ಲಿ ಸೌದಿ ಅರೇಬಿಯಾದ ರಾಜ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಈ ಕುರಿತಾಗಿ ಮಾತುಕತೆ ನಡೆಸಲಾಗಿದೆ. ಆ ಸಮಯದಲ್ಲಿ ಚರ್ಚಿಸಲಾದ ಯೋಜನೆಗಳ ಅಡಿಯಲ್ಲಿ, ಸೌದಿ ಕಿಂಗ್‌ಡಮ್‌ ಐಪಿಎಲ್‌ನಲ್ಲಿ 500 ಕೋಟಿ ರೂಪಾಯಿ ಅಂದರೆ 5 ಶತಕೋಟಿ ಯುಎಸ್‌ ಡಾಲರ್‌ನಷ್ಟು ಹೂಡಿಕೆ ಮಾಡಲು ಪ್ರಸ್ತಾಪ ಮಾಡಿದೆ. ಆ ಮೂಲಕ ಐಪಿಎಲ್‌ಅನ್ನು ಇನ್ನಷ್ಟು ದೇಶಗಳಿಗೆ ವಿಸ್ತರಣೆ ಮಾಡುವ ಕೆಲಸವನ್ನು ತಾವು ಹೊತ್ತುಕೊಳ್ಳುವುದಾಗಿ ಸೌದಿ ಅರೇಬಿಯಾ ಹೇಳಿದೆ. ಈಗಾಗಲೇ ಸೌದಿ ಅರೇಬಿಯಾ ಇಂಗ್ಲೀಷ್‌ ಪ್ರೀಮಿಯರ್‌ ಲೀಗ್‌ ಹಾಗೂ ಯುರೋಪಿಯನ್‌ ಚಾಂಪಿಯನ್ಸ್‌ ಲೀಗ್‌ನಲ್ಲಿ ದೊಡ್ಡ ಪ್ರಮಾಣದ ಪಾಲನ್ನು ಹೊಂದಿದ್ದು, ಸೌದಿಯ ಸಹಾಯದಿಂದಾಗಿ ಲೀಗ್‌ ಕೂಡ ದೊಡ್ಡ ಮಟ್ಟದಲ್ಲಿ ವಿಸ್ತರಣೆಯಾಗಿದೆ.

ಐಪಿಎಲ್‌ ವಿಚಾರದಲ್ಲಿ ಸೌದಿ ಸರ್ಕಾರ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಉತ್ಸುಕವಾಗಿದೆ. ಆದರೆ, ಭಾರತ ಸರ್ಕಾರ ಮತ್ತು ದೇಶದ ಪ್ರಬಲ ಕ್ರೀಡಾ ಮಂಡಳಿ ಹಾಗೂ ತನ್ನ ಕಾರ್ಯಕಲಾಪಗಳನ್ನು ಮುಚ್ಚಿದ ಗೋಡೆಗಳ ನಡುವೆಯೇ ಮಾಡುವ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದು ಕತೂಹಲವಾಗಿದೆ. ಮೂಲಗಳ ಪ್ರಕಾರ ಬಿಸಿಸಿಐ ಮುಂದಿನ ವರ್ಷದ ಲೋಕಸಭಾ ಚುನಾವಣೆಯ ಬಳಿಕವೇ ಈ ನಿರ್ಧಾರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್‌ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರಾಗಿರುವ ಗೃಹ ಸಚಿವ ಅಮಿತ್‌ ಶಾ ಅವರ ಪುತ್ರರಾಗಿದ್ದಾರೆ.

ಸೌದಿ ಅರೇಬಿಯಾ ಸರ್ಕಾರವು ತನ್ನದೇ ಆದ ಸಾರ್ವಭೌಮ ಸಂಪತ್ತು ನಿಧಿಯನ್ನು ಹೊಂದಿದೆ. ಇದು ಸೌದಿ ಕಿಂಗ್‌ಡಮ್‌ನ ಅನೇಕ ಕ್ರೀಡಾ ಹೂಡಿಕೆಗಳನ್ನು ಹೊಂದಿದೆ. ಹಾಗೇನಾರೂ ಅಂತಿಮವಾದಲ್ಲಿ ಇದೇ ಕಂಪನಿ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಆದರೆ, ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಬಿಸಿಸಿಐ ಮತ್ತು ಸೌದಿ ಸರ್ಕಾರದ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಕಮ್ಯುನಿಕೇಷನ್‌ನ ಪ್ರತಿನಿಧಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಸಾರ್ವಜನಿಕ ಹೂಡಿಕೆ ನಿಧಿಯು ಪ್ರತಿಕ್ರಿಯಿಸಲು ನಿರಾಕರಿಸಿದೆ.

2008ರಲ್ಲಿ ಐಪಿಎಲ್‌ ಆರಂಭವಾದ ಬಳಿಕ ಬಾಲಿವುಡ್‌ನ ಹೊಳಪು ಹಾಗೂ ಕ್ರಿಕೆಟ್‌ ಪ್ರೀತಿಯ ಜನಸಂಖ್ಯೆಯೊಂದಿಗೆ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದೆ. ಇದು ಅಮೆರಿಕನ್‌ ಶೈಲಿಯ ಮಾರ್ಕೆಟಿಂಗ್‌ ಟೆಕ್ನಿಕ್‌ಅನ್ನು ಹೊಂದಿದೆ. ಕ್ರಿಕೆಟ್‌ನ ಸಾಂಪ್ರದಾಯಿಕ ಮಾದರಿಯ ಬದಲು ಮೂರು ಅಥವಾ ನಾಲ್ಕು ಗಂಟೆಯ ಆಟದಲ್ಲಿ ಕ್ರಿಕೆಟ್‌ಅನ್ನು ಇನ್ನಷ್ಟು ಎನರ್ಜಿಟಿಕ್‌ ಆಗಿ ತೋರಿಸುವ ಗುರಿಯನ್ನು ಹೊಂದಿದೆ.

ಗಾಜಾ, ಪ್ಯಾಲೆಸ್ತೇನ್‌ ಜನತೆ ಪರವಾಗಿ ಧ್ವನಿ ಎತ್ತಿದ ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ!

ಅರಾಮ್ಕೊ ಮತ್ತು ಸೌದಿ ಪ್ರವಾಸೋದ್ಯಮ ಪ್ರಾಧಿಕಾರ ಸೇರಿದಂತೆ ಸಾಕಷ್ಟು ಪ್ರಾಯೋಜಕರನ್ನು ಲೀಗ್ ಈಗಾಗಲೇ ಸೆಳೆದಿದೆ. ಪ್ರತಿ ಬೇಸಗೆಯಲ್ಲಿ ಕೇವಲ ಎಂಟು ವಾರಗಳ ಕಾಲ ನಡೆಯುವ ಋತುವಿನ ಹೊರತಾಗಿಯೂ, 2027 ರ ವೇಳೆಗೆ IPL ಆಟಗಳನ್ನು ಪ್ರಸಾರ ಮಾಡುವ ಹಕ್ಕಿಗಾಗಿ ಬಿಡ್ಡರ್‌ಗಳು ಕಳೆದ ವರ್ಷ $6.2 ಶತಕೋಟಿ ಪಾವತಿಸಿದ್ದಾರೆ. ಇದು ಇಂಗ್ಲೀಷ್‌ ಫುಟ್‌ಬಾಲ್‌ ಲೀಗ್‌ಗಿಂತ ಹೆಚ್ಚಾಗಿದೆ.

'ನೀವು ಇಂಡಿಯಾ ಕ್ಯಾಪ್ಟನ್‌ ಆಗಿರ್ಬಹುದು, ಹೆಂಡ್ತಿ ಮುಂದೆ ಅದ್ಯಾವುದು ಲೆಕ್ಕಕ್ಕಿಲ್ಲ..' ಅವಿವಾಹಿತರಿಗೆ ಧೋನಿ ಬಂಪರ್‌ ಟಿಪ್ಸ್‌!

 

Follow Us:
Download App:
  • android
  • ios