ಥಾಯ್ಲೆಂಡ್ ಬೀಚ್‌ನಲ್ಲಿ ಎಂಎಸ್ ಧೋನಿ ಮಸ್ತಿ, ಸಿಎಸ್‌ಕೆ ರಿಟೇನ್ ಬೆನ್ನಲ್ಲೇ ಫ್ಯಾಮಿಲಿ ಜೊತೆ ಟ್ರಿಪ್!

ಧೋನಿ ಸದ್ಯ ಥಾಯ್ಲೆಂಡ್ ಪ್ರವಾಸದಲ್ಲಿದ್ದಾರೆ. ಐಪಿಎಲ್ ರಿಟೇನ್ ಬೆನ್ನಲ್ಲೇ ಧೋನಿ ಕಟುಂಬ ಸಮೇತ ಥಾಯ್ಲೆಂಡ್‌ನಲ್ಲಿ ಮಸ್ತಿ ಮಾಡುತ್ತಿದ್ದಾರೆ. ಧೋನಿ, ಪತ್ನಿ ಸಾಕ್ಷಿ ಹಾಗೂ ಪುತ್ರಿ ಝಿವಾ ಬೀಚ್‌ನಲ್ಲಿ ಮಸ್ತಿ ಮಾಡುತ್ತಿರುವ ವಿಡಿಯೋವನ್ನು ಝಿವಾ ಧೋನಿ ಹಂಚಿಕೊಂಡಿದ್ದಾರೆ.

CSK retained cricketer MS Dhoni enjoying vacation with family in Thailand beach ckm

ಫುಕೆಟ್(ನ.9) ಐಪಿಎಲ್ ತಯಾರಿಗಳು ನಡೆಯುತ್ತಿದೆ. ಧೋನಿ ತಂಡದಲ್ಲಿರುತ್ತಾರೋ, ಇಲ್ಲವೋ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಸಿಎಸ್‌ಕೆ ತಂಡ  ಧೋನಿಯನ್ನು 4 ಕೋಟಿ ರೂಪಾಯಿಗಿ ರಿಟೇನ್ ಮಾಡಿದೆ. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಐಪಿಎಲ್ ಜವಾಬ್ದಾರಿಗಳನ್ನು ಹೆಗಲ ಮೇಲೆ ಹಾಕುವ ಮುನ್ನ ಧೋನಿ ಕುಟುಂಬ ಸಮೇತ ಥಾಯ್ಲೆಂಡ್ ಟ್ರಿಪ್ ಮಾಡಿದ್ದಾರೆ. ಸದ್ಯ ಥಾಯ್ಲೆಂಡ್‌ನ ಸುಂದರ ಬೀಚ್‌ಗಳಲ್ಲಿ ಎಂಎಸ್ ಧೋನಿ ಮಸ್ತಿ ಮಾಡುತ್ತಿದ್ದಾರೆ. ಈ ವಿಡಿಯೋಗಳನ್ನು ಧೋನಿ ಪುತ್ರಿ ಝೀವಾ ಧೋನಿ ಹಂಚಿಕೊಂಡಿದ್ದಾರೆ.  

ಬ್ಲಾಕ್ ವೆಸ್ಟ್ ಹಾಗೂ ಬ್ಲಾಕ್ ಶೇಡ್ ಧರಿಸಿರುವ ಎಂಎಸ್ ಧೋನಿ ಫುಕೆಟ್ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಹಾಗೂ ದಶ್ಯಗಳಿವೆ. ಧೋನಿ ಜೊತೆ ಸಾಕ್ಷಿ ಧೋನಿ, ಝೀವಾ ಧೋನಿ ಕೂಡ ಅಷ್ಟೇ ಎಂಜಾಯ್ ಮಾಡಿದ್ದಾರೆ. ಸಾಕ್ಷಿ ಧೋನಿ ಪಿಂಕ್ ಕಲರ್ ಡ್ರೆಸ್ ಮೂಲಕ ಬೀಚ್ ಸೌಂದರ್ಯ ಎಂಜಾಯ್ ಮಾಡಿದ್ದಾರೆ. ಇತ್ತ ಝೀವಾ ಧೋನಿ ಅದೇ ಬೀಚ್‌ನಲ್ಲಿ ಸೂರ್ಯಾಸ್ತ ಎಂಜಾಯ್ ಮಾಡುತ್ತಿರುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಧೋನಿ ಸೇರಿ 5 ಆಟಗಾರರನ್ನುಉಳಿಸಿಕೊಂಡ ಸಿಎಸ್‌ಕೆ; ಈ ಆಟಗಾರನಿಗೆ ಆರ್‌ಟಿಎಂ ಕಾರ್ಡ್ ಬಳಸಲು ತೀರ್ಮಾನ?

ಐಪಿಎಲ್ ಕ್ಯಾಂಪ್, ತರಬೇತಿ ಆರಂಭಗೊಳ್ಳುವ ಮುನ್ನ ಧೋನಿ ಇದೀಗ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಸುಂದರ ತಾಣಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾಮಾನ್ಯವಾಗಿ ಧೋನಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿಲ್ಲ. ಇಷ್ಟೇ ಅಲ್ಲ ಇತರರ ಸೋಶಿಯಲ್ ಮೀಡಿಯಾದಲೂ ತಾವು ಬರದಂತೆ ನೋಡಿಕೊಳ್ಳುತ್ತಾರೆ. ಆದರೆ ಪುತ್ರಿಯ ಸೋಶಿಯಲ್ ಮೀಡಿಯಾದಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ. ಧೋನಿಯ ಥಾಯ್ಲೆಂಡ್ ಪ್ರವಾಸದ ಹಲವು ಫೋಟೋಗಳನ್ನು ಝೀವಾ ಧೋನಿ ಹಂಚಿಕೊಂಡಿದ್ದಾರೆ.

 

 

ಚೆನ್ನೈ ಸೂಪರ್ ಕಿಂಗ್ಸ್ ತಂಡ ಐವರನ್ನು ರಿಟೇನ್ ಮಾಡಿಕೊಂಡಿದೆ. ಈ ಪೈಕಿ ನಾಯಕ ರುತುರಾಜ್ ಗಾಯಕ್ವಾಡ್‌ಗೆ ಗರಿಷ್ಠ  ಮೊತ್ತ ನೀಡಿದರೆ ಎಂಎಸ್ ಧೋನಿಗೆ ಅತೀ ಕಡಿಮೆ ಮೊತ್ತ ನೀಡಿ ರಿಟೇನ್ ಮಾಡಿಕೊಳ್ಳಲಾಗಿದೆ. ರುತುರಾಜ್ ಗಾಯಕ್ವಾಡ್‍ಗೆ 18 ಕೋಟಿ ರೂಪಾಯಿ ಮೊತ್ತ ನೀಡಿದರೆ ಧೋನಿಗೆ 4 ಕೋಟಿ ರೂಪಾಯಿ ನೀಡಲಾಗಿದೆ. ಧೋನಿ ಅನ್‌ಕ್ಯಾಪ್ ಪ್ಲೇಯರ್ ಅಡಿಯಲ್ಲಿ ರಿಟೇನ್ ಮಾಡಿಕೊಳ್ಳಲಾಗಿದೆ. ನಿಯಮದ ಅನುಸಾರ ದೋನಿಗೆ 4 ಕೋಟಿ ಮೊತ್ತ ನೀಡಲಾಗಿದೆ.

ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಮಹೇಶ ಪತಿರಾನ, ಶಿವಂ ದುಬೆ ಹಾಗೂ ಎಂಸ್ ಧೋನಿ ಈ ಐವರನ್ನು ಚೆನ್ನೈ ತಂಡದಲ್ಲೇ ಉಳಿಸಿಕೊಂಡಿದೆ. ಇದೀಗ ಮಘಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೊಸ ಆಟಗಾರರನ್ನು ಖರೀದಿಸಲು ಸಜ್ದಾಗಿದೆ. ಈ ಆವೃತ್ತಿ ಧೋನಿಗೆ ಕೊನೆಯ ಸರಣಿ ಎಂದೇ ಹೇಳಲಾಗುತ್ತಿದೆ. ಕಳೆದ ಆವೃತ್ತಿಯೇ ಧೋನಿಯ ಕೊನೆಯ ಸರಣಿ ಎಂದು ಹೇಳಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಈ ಬಾರಿ ಕ್ರೀಡಾಂಗಣ ಸಂಪೂರ್ಣ ಧೋನಿಗಾಗಿ ಭರ್ತಿಯಾಗಲಿದೆ. ಧೋನಿಯನ್ನು ಆಟವನ್ನು ಕೊನೆದಾಗಿ ಮೈದಾನದಲ್ಲಿ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. 

ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಕಳೆದ ಆವೃತ್ತಿಯಲ್ಲಿ ಧೋನಿ ಕೆಲ ಪಂದ್ಯದಲ್ಲಿ ಅಬ್ಬರಿಸಿದ್ದರು. ಆದರೆ ಟ್ರೋಫಿ ಗೆಲುವಿಗೆ ಸಾಧ್ಯವಾಗಲಿಲ್ಲ. ಲೀಗ್ ಹಂತದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ನಿರ್ಗಮಿಸಿತ್ತು. 2023ರಲ್ಲಿ ಚೆನ್ನೈ ಟ್ರೋಫಿ ಗೆದ್ದು ಇತಿಹಾಸ ರಚಿಸಿತ್ತು. ಆದರೆ 2024ರಲ್ಲಿ ಸಾಧ್ಯವಾಗಿಲ್ಲ. ಇದೀಗ 2025ರಲ್ಲಿ ಸಿಎಸ್‌ಕೆ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್ ಬಲಿಷ್ಠ ತಂಡ ಕಟ್ಟಿ ಕಣಕ್ಕಿಳಿಯಲು ತಯಾರಿ ನಡೆಸುತ್ತಿದೆ.

ಸಿಎಸ್‌ಕೆ ತಂಡದಲ್ಲಿ ಮುಂದುವರಿದಿದ್ದು ಹೇಗೆ ಧೋನಿ? ಇಷ್ಟು ಕಡಿಮೆಗೆ Retain ಆದ್ರಾ ಥಲಾ?

Latest Videos
Follow Us:
Download App:
  • android
  • ios