Asianet Suvarna News Asianet Suvarna News

ಅಭಿಮಾನಿಗಳಿಗೆ ಸರ್ಪ್ರೈಸ್; ಮತ್ತೆ ಟೀಂ ಇಂಡಿಯಾ ಜರ್ಸಿ ತೊಟ್ಟು ಕಣಕ್ಕಿಳಿದ ಎಂ.ಎಸ್.ಧೋನಿ!

  • ವಿದಾಯದ ಬಳಿ ಐಪಿಎಲ್ ಜರ್ಸಿಯಲ್ಲಿ ನೋಡುತ್ತಿದ್ದ ಧೋನಿ ಫ್ಯಾನ್ಸ್‌ಗೆ ಡಬಲ್ ಸಂತಸ
  • ಮತ್ತೆ ಟೀಂ ಇಂಡಿಯಾದ ನೂತನ ರೆಟ್ರೋ ಜರ್ಸಿ ತೊಟ್ಟು ಅಖಾಡಕ್ಕಿಳಿದ ಧೋನಿ
  • ಅಭಿಮಾನಿಗಳಿಗೆ ಧೋನಿ ಸರ್ಪ್ರೈಸ್
CSK captain MS dhoni wear team india jersey for advertisement shoot before IPL second innings ckm
Author
Bengaluru, First Published Jul 26, 2021, 9:10 PM IST
  • Facebook
  • Twitter
  • Whatsapp

ಮುಂಬೈ(ಜು.26): ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಸದ್ಯ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಮೇಲೆ ಟೀಂ ಇಂಡಿಯಾದ ಪ್ರತಿ ಪಂದ್ಯದಲ್ಲೂ ವಿ ಮಿಸ್ ಯೂ ಧೋನಿ ಅನ್ನೋ ಬ್ಯಾನರ್ ಇದ್ದೆ ಇರುತ್ತೆ. ಧೋನಿಯನ್ನು ಟೀಂ ಇಂಡಿಯಾ ಜರ್ಸಿಯಲ್ಲಿ ನೋಡಲು ಅಭಿಮಾನಿಗಳು ಈಗಲೂ ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ಧೋನಿ ಟೀಂ ಇಂಡಿಯಾದ ನೂತನ ರೆಟ್ರೋ ಜರ್ಸಿ ತೊಟ್ಟು ಕಣಕ್ಕಿಳಿದಿದ್ದಾರೆ.

IPL 2021 ಸೆಕೆಂಡ್ ಇನ್ನಿಂಗ್ಸ್ ವೇಳಾಪಟ್ಟಿ ಪ್ರಕಟ; ಸೆ.19ರಿಂದ ಆರಂಭ, ಅ.15ಕ್ಕೆ ಫೈನಲ್!

ಜರ್ಸಿ ತೊಟ್ಟು ಧೋನಿ ಅಖಾಡಕ್ಕಿಳಿದಿರುವುದು ಜಾಹೀರಾತಿಗಾಗಿ. ಜಾಹೀರಾತು ಚಿತ್ರೀಕರಣಕ್ಕೆ ಧೋನಿ ರೆಟ್ರೋ ಜರ್ಸಿ ತೊಟ್ಟಿದ್ದಾರೆ. ಬಾಲಿವುಡ್ ಖ್ಯಾತ ಕೊರಿಯೋಗ್ರಾಫರ್ ಫರಾ ಖಾನ್ ಈ ಜಾಹೀರಾತಿನಲ್ಲಿ ಧೋನಿಗೆ ಕೊರಿಯೋಗ್ರಾಫ್ ಮಾಡುತ್ತಿದ್ದಾರೆ. ಧೋನಿ ನೂತನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಹೊಸ ಸ್ಟೈಲ್‌ನಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ. ಬಿಳಿ ಗಡ್ಡ ಕಪ್ಪಾಗಿದೆ. ಸ್ಟೈಲಿಶ್ ಬಿಯರ್ಡ್, ಸ್ಪೈಕ್ ಹೇರ್‌ಸ್ಟೈಲ್ ಮೂಲಕ ಧೋನಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಧೋನಿ ಜಾಹೀರಾತು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 

ಲಾಕ್‌ಡೌನ್‌ನಲ್ಲಿ ಧೋನಿ ಫಾರ್ಮ್‌ ಹೌಸ್‌ನಲ್ಲಿ ಏನು ಮಾಡ್ತಿದ್ದಾರೆ ಗೊತ್ತಾ?

ಟೀಂ ಇಂಡಿಯಾ ನೂತನ ಜರ್ಸಿ ರೆಟ್ರೋ ಜರ್ಸಿಯಾಗಿದೆ. ಸದ್ಯ ಶ್ರೀಲಂಕಾ ಪ್ರವಾಸದಲ್ಲಿರುವ ನಿಗದಿತ ಓವರ್ ತಂಡ ಇದೇ ಜರ್ಸಿ ತೊಟ್ಟು ಪಂದ್ಯವಾಡುತ್ತಿದೆ. ಇದೇ ರೆಟ್ರೋ ಜರ್ಸಿಯಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ. 

 

ಸೆಪ್ಟೆಂಬರ್ 19 ರಿಂದ ಐಪಿಎಲ್ 2021ರ ಸೆಕೆಂಡ್ ಇನ್ನಿಂಗ್ಸ್ ಆರಂಭಗೊಳ್ಳಲಿದೆ. ದುಬೈನಲ್ಲಿ ಆರಂಭವಾಗಲಿರುವ ಸೆಕೆಂಡ್ ಇನ್ನಿಂಗ್ಸ್ ಮೊದಲ ಪಂದ್ಯದಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಟ ನಡೆಸಲಿದೆ.


 

Follow Us:
Download App:
  • android
  • ios