ಲಾಕ್‌ಡೌನ್‌ನಲ್ಲಿ ಧೋನಿ ಫಾರ್ಮ್ ಹೌಸ್‌ನಲ್ಲಿ ಏನು ಮಾಡ್ತಿದ್ದಾರೆ ಗೊತ್ತಾ?
ರಾಂಚಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಅನಿರೀಕ್ಷಿತ ಎನ್ನುವಂತೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇದರ ಬೆನ್ನಲ್ಲೇ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಇನ್ನು ಕೆಲವು ಆಟಗಾರರು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಮುಂಬೈನಲ್ಲಿ ಬಯೋ ಬಬಲ್ ಪ್ರವೇಶಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಈ ಲಾಕ್‌ಡೌನ್ ವೇಳೆ ತಮ್ಮ ಫಾರ್ಮ್‌ಹೌಸ್‌ನಲ್ಲಿ ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಧೋನಿ ಗೋಶಾಲೆ ಬಹುತೇಕ ಪೂರ್ತಿ

ಧೋನಿ ಗೋಶಾಲೆ ಬಹುತೇಕ ಪೂರ್ತಿ

ಮಹೇಂದ್ರ ಸಿಂಗ್ ಧೋನಿ ಫಾರ್ಮ್ ಹೌಸ್‌ನಲ್ಲಿ ಗೋಶಾಲೆ ಬಹುತೇಕ ಪೂರ್ಣವಾಗಿದೆ. ಈ ಗೋಶಾಲೆಯಲ್ಲಿ 300ಕ್ಕೂ ಅಧಿಕ ಹಸುಗಳನ್ನು ಸಾಕಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಇದೇ ಫಾರ್ಮ್ ಹೌಸ್‌ನಿಂದ ಔಟ್‌ಲೆಟ್‌ಗಳ ಮೂಲಕ ಹಾಲು ಮಾರಾಟವಾಗುತ್ತಿದೆ ಎನ್ನಲಾಗಿದೆ.

ರಾಂಚಿಯಲ್ಲಿದೆ ಧೋನಿಯ ಅದ್ಧೂರಿ ಫಾರ್ಮ್ ಹೌಸ್

ರಾಂಚಿಯಲ್ಲಿದೆ ಧೋನಿಯ ಅದ್ಧೂರಿ ಫಾರ್ಮ್ ಹೌಸ್

ಮಹೇಂದ್ರ ಸಿಂಗ್ ಧೋನಿಯವರ ಫಾರ್ಮ್ ಹೌಸ್ ರಾಂಚಿಯ ಸೌಬೋ ಎಂಬಲ್ಲಿದೆ. ಬರೋಬ್ಬರಿ 43 ಎಕರೆ ಇರುವ ಈ ಫಾರ್ಮ್ ಹೌಸ್ ಜಮೀನಿನಲ್ಲಿ ಧೋನಿ ತರಕಾರಿಗಳನ್ನು ಹಾಗೂ ಹೂಗಳ ಕೃಷಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಇಲ್ಲೇ ಹಾಲಿನ ಡೇರಿಯನ್ನು ಮಾಡಿದ್ದಾರೆ.

ಧೋನಿ ಫಾರ್ಮ್ ಹೌಸ್‌ನಲ್ಲಿದೆ ಇಂಡೋರ್ ಸ್ಟೇಡಿಯಂ

ಧೋನಿ ಫಾರ್ಮ್ ಹೌಸ್‌ನಲ್ಲಿದೆ ಇಂಡೋರ್ ಸ್ಟೇಡಿಯಂ

ಧೋನಿ ಫಾರ್ಮ್ ಹೌಸ್‌ನಲ್ಲಿ ಇಂಡೋರ್ ಸ್ಟೇಡಿಯಂ ಕೂಡಾ ಇದೆ. ಇದರ ಜತೆಗೆ ಸ್ವಿಮ್ಮಿಂಗ್ ಫೂಲ್, ನೆಟ್ ಪ್ರಾಕ್ಟೀಸ್ ಮೈದಾನ ಹಾಗೂ ಅತ್ಯಾಧುನಿಕ ಜಿಮ್ ಕೂಡಾ ಇಲ್ಲಿದೆ.

ಯಾವ ಐಷಾರಾಮಿ ಬಂಗಲೆಗೂ ಕಮ್ಮಿಯಿಲ್ಲ ಧೋನಿಯ ಫಾರ್ಮ್ ಹೌಸ್

ಧೋನಿ ಫಾರ್ಮ್ ಹೌಸ್‌ನಲ್ಲಿ ಐಷಾರಾಮಿ ವಸ್ತುಗಳನ್ನು ಪೀಠೋಪಕರಣವಾಗಿ ಬಳಸಲಾಗಿದೆ. ಇದರ ಜತೆಗೆ ಫಾರ್ಮ್ ಹೌಸ್‌ನ ಎದುರಿನ ಲಾನ್‌ನಲ್ಲಿ ಮುದ್ದಾದ ನಾಯಿಗಳು ಕಾಣಸಿಗುತ್ತವೆ. ಇದೇ ಫಾರ್ಮ್ ಹೌಸ್‌ನಲ್ಲಿ ಧೋನಿ ತನ್ನ ಮುದ್ದಿನ ನಾಯಿಗಳಿಗೆ ತರಬೇತಿಯನ್ನು ನೀಡುತ್ತಿರುತ್ತಾರೆ.

ಫಾರ್ಮ್ ಹೌಸ್‌ನಲ್ಲಿ ಧೋನಿಗಾಗಿಯೇ ಇದೇ ಪ್ರತ್ಯೇಕ ಗ್ಯಾರೇಜ್

ಧೋನಿಗೆ ವಾಹನಗಳ ಮೇಲಿನ ಪ್ರೀತಿ ಎಲ್ಲರಿಗೂ ಗೊತ್ತೇ ಇದೆ. ಈ ಫಾರ್ಮ್ ಹೌಸ್‌ನಲ್ಲಿ ಧೋನಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ಗ್ಯಾರೇಜ್ ಕೂಡಾ ಇದೆ. ಈ ಗ್ಯಾರೇಜ್‌ನಲ್ಲಿ ಧೋನಿಯ ಬೈಕ್‌ಗಳು ಹಾಗೂ ವಿವಿಧ ಕಾರು, ವಾಹನಗಳು ಇವೆ.