Asianet Suvarna News Asianet Suvarna News

ಹಿಂದಿ ರಿಯಾಲಿಟಿ ಶೋ 'ರೋಡೀಸ್' ಅಣಕು ಮಾಡಿದ ಕ್ರಿಕೆಟಿಗರು: ವಿಡಿಯೋ ವೈರಲ್

ಮೈದಾನದಲ್ಲಿ ಆಟದಿಂದ ಹೇಗೆ ಕ್ರೀಡಾಭಿಮಾನಿಗಳನ್ನು ರಂಜಿಸುತ್ತಾರೆಯೋ ಹಾಗೆ ಮೈದಾನದ ಹೊರಗೆಯೂ ತಮ್ಮ ತುಂಟಾಟಗಳಿಂದ ತರಲೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದಲ್ಲದೇ ಜನರಿಗೆ ಮನೋರಂಜನೆ ನೀಡುತ್ತಾರೆ. 

Cricketers Shubman Gill Ishan Kishan mock Hindi reality show Roadies Video goes viral akb
Author
First Published Feb 3, 2023, 11:53 AM IST

ಮುಂಬೈ: ಸಿನಿಮಾ, ಮನೋರಂಜನೆ ಹಾಗೂ ಕ್ರಿಕೆಟ್‌ಗೆ ಅವಿನಾಭಾವ ಸಂಬಂಧ, ಅನೇಕರ ಕ್ರಿಕೆಟಿಗರು ಬಾಲಿವುಡ್ ತಾರೆಯರನ್ನು ಮದುವೆಯಾಗುವ ಮೂಲಕ ಸಿನಿಮಾ ಹಾಗೂ ಕ್ರಿಕೆಟ್ ನಡುವೆ ಇರುವ ಬಾಂಧವ್ಯವನ್ನು ಹೆಚ್ಚಿಸಿದ್ದಾರೆ. ಕೆಲವು ಕ್ರಿಕೆಟಿಗರಂತು ಸಕಲಕಲಾ ವಲ್ಲಭರು. ಮೈದಾನದಲ್ಲಿ ಆಟದಿಂದ ಹೇಗೆ ಕ್ರೀಡಾಭಿಮಾನಿಗಳನ್ನು ರಂಜಿಸುತ್ತಾರೆಯೋ ಹಾಗೆ ಮೈದಾನದ ಹೊರಗೆಯೂ ತಮ್ಮ ತುಂಟಾಟಗಳಿಂದ ತರಲೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದಲ್ಲದೇ ಜನರಿಗೆ ಮನೋರಂಜನೆ ನೀಡುತ್ತಾರೆ. 

ಹೊರಾಂಗಣದಲ್ಲಿ ಆಡುವ ಮೂಲಕ ಜನರನ್ನು ರಂಜಿಸುತ್ತಿದ್ದ  ಟೀಂ ಇಂಡಿಯಾ ಆಟಗಾರರು (Team India Cricketers) ಈಗ ಒಳಾಂಗಣದಲ್ಲಿ ತರಲೆ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ರಂಜಿಸಲು ಮುಂದಾಗಿದ್ದಾರೆ. ಕ್ರಿಕೆಟಿಗರಾದ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಹಿಂದಿ ವಾಹಿನಿಯೊಂದರ ರಿಯಾಲಿಟಿ ಶೋ ಆದ ರೋಡೀಸ್‌ನಲ್ಲಿ ಸ್ಪರ್ಧಿಗಳ ವರ್ತನೆಯನ್ನು ಅಣಕಿಸಿದ್ದಾರೆ.  ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಹವಾ ಸೃಷ್ಟಿಸಿದೆ. 

ಎಂಎಸ್ ಧೋನಿಯಿಂದ ಸ್ಮೃತಿ ಮಂಧಾನವರೆಗೆ ಐಷಾರಾಮಿ ಕಾರು ಖರೀದಿಸಿದ ಕ್ರಿಕೆಟಿಗರು

ಶುಭ್ಮನ್ ಗಿಲ್ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ (Instagram) ಹಾಕಿಕೊಂಡಿದ್ದು,  ಈ ವಿಡಿಯೋದಲ್ಲಿ ಶುಭ್ಮನ್ ಗಿಲ್ (Shubman Gill) ಜೊತೆ ಇಶಾನ್ ಕಿಶನ್ (Ishan Kishan), ಹಿರಿಯ ಸ್ಪಿನ್ನರ್ ಯಜುವೇಂದ್ರ ಚಹಾಲ್ ಇದ್ದು, ಇವರು ಎಂಟಿವಿಯ ರೋಡೀಶ್ ಶೋವನ್ನು ಮರು ಸೃಷ್ಟಿಸುವ ಮೂಲಕ ಅಣಕಿಸಿದ್ದಾರೆ. ಅದರಲ್ಲೂ ಇಶಾನ್ ಕಿಶನ್ ಗೊರಿಲ್ಲಾದಂತೆ ಬೆಡ್ ಮೇಲೆ ಜಂಪ್ ಮಾಡುವ ಮೂಲಕ ಈ ವಿಡಿಯೋದ ಸ್ಟಾರ್ ಆಗಿದ್ದು,  ಈ ವಿಡಿಯೋ ಪೋಸ್ಟ್ ಆದ ಸ್ವಲ್ಪ ಹೊತ್ತಿನಲ್ಲೇ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಈ ವಿಡಿಯೋವನ್ನು ನೋಡಿ ಸಖತ್ ಆಗಿ ಕಾಮೆಂಟ್ ಮಾಡಿದ್ದಾರೆ. 

ಇತ್ತ ಅಹಮದಾಬಾದ್‌ನಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಶುಭಮನ್ ಗಿಲ್ ಅವರ ಅಜೇಯ 126 ರನ್‌ಗಳ ನೆರವಿನ ಜೊತೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 234 ರನ್ ಗಳಿಸುವ ಮೂಲಕ ಬೃಹತ್ ಮೊತ್ತ ದಾಖಲಿಸಿದ ಭಾರತ ತಂಡ ಆತಿಥೇಯ ಕಿವೀಸ್ ಅನ್ನು 66 ರನ್‌ಗಳಿಗೆ ಕಟ್ಟಿಹಾಕುವ ಮೂಲಕ  168 ರನ್‌ಗಳ ಜಯ ದಾಖಲಿಸಿತ್ತು. ಇದು ಅತಿದೊಡ್ಡ ಅಂತರದ ಗೆಲುವು. ಈ ಗೆಲುವಿನೊಂದಿಗೆ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಮೂರು ಪಂದ್ಯಗಳ ಟಿ20ಐ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ಮೈದಾನದಲ್ಲಿ ಇಂತಹ ಅಸಾಧಾರಣ ಆಟವಾಡಿದ್ದಲ್ಲದೇ  ಟೀಮ್ ಇಂಡಿಯಾ ಆಟಗಾರರು ಮೈದಾನದ ಹೊರಗೆ ಈ ರೀತಿ ತಮ್ಮ ಅಭಿಮಾನಿಗಳಿಗೆ ಬಿಟ್ಟಿ ಮನೋರಂಜನೆ ನೀಡಿದ್ದಾರೆ. 

ಸ್ಟಾರ್ಟ್ ಅಪ್ ಗಳಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿರುವ 7 ಭಾರತೀಯ ಕ್ರಿಕೆಟಿಗರು ಇವರೇ ನೋಡಿ!

2018 ರಲ್ಲಿ ಡಬ್ಲಿನ್‌ನಲ್ಲಿ(Dublin) ಐರ್ಲೆಂಡ್ (Ireland) ವಿರುದ್ಧ 143 ರನ್‌ಗಳ ಗೆಲುವು ಭಾರತದ ಎರಡನೇ ಅತಿ ಹೆಚ್ಚು ಅಂತರದ ಗೆಲುವಾಗಿದೆ. ಗಿಲ್ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದು, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಬೌಲರ್‌ಗಳನ್ನು (New Zealand bowlers) ನರೇಂದ್ರ ಮೋದಿ ಸ್ಟೇಡಿಯಂನ ಉದ್ದಕ್ಕೂ ಅಟ್ಟಾಡಿಸಿದ ಗಿಲ್, ಕೇವಲ 63 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ 126 ರನ್ ಗಳಿಸಿ ಅಜೇಯರಾಗುಳಿದರು. ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ್ದ ಭಾರತ ಈ ಪಂದ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್‌ ಗಳಿಸಿತ್ತು. 


 

Follow Us:
Download App:
  • android
  • ios