ಸ್ವಿಗ್ಗಿ ಕೊಳ್ಳುವಂತೆ ಎಲನ್ ಮಸ್ಕ್‌ಗೆ ಸಲಹೆ ನೀಡಿದ ಶುಭ್‌ಮನ್ ಗಿಲ್‌ಗೆ ನೆಟ್ಟಿಗರ ಕ್ಲಾಸ್
- ಕ್ರಿಕೆಟಿಗ ಶುಭಂ ಗಿಲ್ ಟ್ವಿಟ್ಟರ್ ಪೋಸ್ಟ್ ವೈರಲ್
- ಸ್ವಿಗ್ಗಿ ಕೊಳ್ಳುವಂತೆ ಎಲಾನ್ ಮಸ್ಕ್‌ಗೆ ಸಲಹೆ ನೀಡಿದ ಶುಭ್‌ಮನ್
- ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ ನೋಡಿ
ಆನ್‌ಲೈನ್ ಆಹಾರ ಪೂರೈಕೆ ಸಂಸ್ಥೆ ಸ್ವಿಗ್ಗಿಯನ್ನು ಕೊಳ್ಳುವಂತೆ ಉದ್ಯಮಿ ಟೆಲ್ಸಾ ಸಂಸ್ಥಾಪಕ ಎಲನ್ ಮಸ್ಕ್‌ಗೆ (Elon Musk) ಕ್ರಿಕೆಟಿಗ ಶುಭಮನ್ ಗಿಲ್ (Shubman Gill) ಟ್ವಿಟ್ ಮಾಡಿದ್ದು, ಇದು ಸ್ವಲ್ಪ ಹೊತ್ತಿನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶುಕ್ರವಾರ ರಾತ್ರಿ ಶುಭಮನ್ ಗಿಲ್, ಉದ್ಯಮಿ ಟೆಲ್ಸಾ ಸಂಸ್ಥಾಪಕ ಎಲನ್ ಮಸ್ಕ್‌ಗೆ ಆಹಾರ ಪೂರೈಕೆ ಸಂಸ್ಥೆ ಸ್ವಿಗ್ಗಿಯನ್ನು ಕೊಳ್ಳುವಂತೆ ಟ್ವಿಟ್ಟರ್‌ನಲ್ಲಿ ಟ್ಯಾಗ್ ಮಾಡಿದ್ದರು. ಇದಕ್ಕೆ ಸ್ವಿಗ್ಗಿ ಪ್ರತಿಕ್ರಿಯಿಸಿದೆ.
ಸ್ವಿಗ್ಗಿಯ ಸ್ವಿಗ್ಗಿ ಕೇರ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ಪ್ರತಿಕ್ರಿಯಿಸಿದ ಸ್ವಿಗ್ಗಿ ಸಂಸ್ಥೆ ನೀವು ಏನು ಆರ್ಡರ್ ಮಾಡಿದ್ದೀರಿ ನೇರವಾಗಿ ಮೆಸೇಜ್ ಮಾಡುವ ಮೂಲಕ ನಿಮ್ಮ ಆರ್ಡರ್ ವಿವರವನ್ನು ನೀಡಿ ಎಂದು ಕೇಳಿದೆ. ನಂತರ ಕ್ರಿಕೆಟರ್‌ನಿಂದ ನೇರ ಸಂದೇಶವನ್ನು ಸ್ವೀಕರಿಸಿದ ಸ್ವಿಗ್ಗಿ ಶುಬ್‌ಮನ್ ಗಿಲ್‌ಗ ಧನ್ಯವಾದ ಹೇಳಿದೆ. ಎಲನ್ ಮಸ್ಕ್ ದಯವಿಟ್ಟು ಸ್ವಿಗ್ಗಿಯನ್ನು ಖರೀದಿಸಿ ಹೀಗಾದರೂ ಅವರು ಸರಿಯಾದ ಸಮಯಕ್ಕೆ ಆಹಾರ ಪೂರೈಸಬಹುದು ಎಂದು ಗಿಲ್ ಟ್ವಿಟ್ ಮಾಡಿದ್ದರು.
IPL 2022 ಗಿಲ್ ಸ್ಫೋಟಕ ಬ್ಯಾಟಿಂಗ್, ಡೆಲ್ಲಿ ತಂಡಕ್ಕೆ 172 ರನ್ ಟಾರ್ಗೆಟ್!
ಇದಕ್ಕೆ ಪ್ರತಿಕ್ರಿಯಿಸಿದ ಸ್ವಿಗ್ಗಿ, ನಾವು ನಿಮ್ಮ ಆರ್ಡರ್‌ಗೆ ಸಂಬಂಧಿಸಿದಂತೆ ಎಲ್ಲವೂ ಸರಿ ಇದೆ ಎಂದು ತಿಳಿದುಕೊಳ್ಳಲು ಬಯಸಿದ್ದೇವೆ. ಹೀಗಾಗಿ ನೀವು ಈ ಬಗ್ಗೆ ನಮಗೆ ನೇರವಾಗಿ ಸಂದೇಶ ಕಳುಹಿಸಿ ನಾವು ತ್ವರಿತವಾಗಿ ಪ್ರತಿಕ್ರಿಯಿಸುತ್ತೇವೆ ಎಂದಿದ್ದಾರೆ. ನಂತರ ಅವರಿಂದ ಸಂದೇಶ ಬಂದ ಬಳಿಕ ಸ್ವಿಗ್ಗಿ ಅವರಿಗೆ ಧನ್ಯವಾದ ತಿಳಿಸಿದೆ. ಆದರೆ ಶುಭಮನ್ ಗಿಲ್ ಟ್ವಿಟ್‌ಗೆ ಪ್ರತಿಕ್ರಿಯಿಸಿದ ಸ್ವಿಗ್ಗಿ ಹೆಸರಿನ ಫೇಕ್ ಅಕೌಂಟ್ ಒಂದು, ಟಿ20 ಕ್ರಿಕೆಟ್‌ನಲ್ಲಿ ನಿಮ್ಮ ಬ್ಯಾಟಿಂಗ್‌ಗಿಂತಲೂ ನಮ್ಮ ಡೆಲಿವರಿ ಫಾಸ್ಟ್ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಹಾಗೆಯೇ ಕೆಲ ನೆಟ್ಟಿಗರು ಕೂಡ ಗಿಲ್ ಟ್ವಿಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವೊಮ್ಮೆ ಟ್ರಾಫಿಕ್ ಜಾಮ್ ಉಂಟಾಗಿರುತ್ತದೆ. ಮತ್ತೆ ಕೆಲವೊಮ್ಮೆ ಹೊಟೇಲ್‌ಗಳು ಡೆಲಿವರಿ ನೀಡುವುದು ವಿಳಂಬವಾಗುತ್ತದೆ. ನಾನು ಕೂಡ ಒಬ್ಬ ಡೆಲಿವರಿ ಎಕ್ಸಿಕ್ಯುಟಿವ್, ಹೇಳಿದ ಸಮಯಕ್ಕೆ ಸರಿಯಾಗಿ ಆಹಾರ ಪೂರೈಕೆಯಾಗಿಲ್ಲ ಎಂದು ಹೇಳುವುದು ಸುಲಭ ಆದರೆ ನಮ್ಮ ಪರಿಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಂಡು ಮಾತನಾಡಿ ಎಂದು ಹೇಳಿದ್ದಾರೆ.
Sara Tendulkar ಕೈಯಲ್ಲಿ ವಜ್ರದ ಉಂಗುರ Sachin Tendulkar ಮಗಳ ನಿಶ್ಚಿತಾರ್ಥವಾಯಿತಾ?
ಶುಭಮನ್ ಗಿಲ್ ಅವರೇ ಒಂದು ವಾರದ ಕಾಲ ನಿಮ್ಮ ಕೆಲಸವನ್ನು ಬದಲಾಯಿಸಿ, ಡೆಲಿವರಿ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡಿ. ಆಗ ನಿಮಗೆ ಡೆಲಿವರಿ ಎಕ್ಸಿಕ್ಯುಟಿವ್‌ಗಳ ಕಷ್ಟ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನೀವು ಡ್ರೆಸಿಂಗ್ ರೂಮ್‌ನಲ್ಲಿ ಸುಮ್ಮನೆ ಕುಳಿತು ಗಳಿಸುವುದರ ಶೇ.1ರಷ್ಟನ್ನು ಕೂಡ ಡೆಲಿವರಿ ಎಕ್ಸಿಕ್ಯುಟಿವ್ ಗಳಿಸಲು ಸಾಧ್ಯವಿಲ್ಲ ಎಂದು ಚಂದ್ರ ಮೋಹನ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
ಶುಭಮನ್ ಗಿಲ್ ಪ್ರಸ್ತುತ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ ಟೀಂ (Gujarat Titans) ಅನ್ನು ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್ ಪಾಯಿಂಟ್ ಟೇಬಲ್‌ನಲ್ಲಿ ಗುಜರಾತ್ ಟೈಟಾನ್ ಟೀಂ ಟಾಪ್‌ನಲ್ಲಿದೆ. ಐಪಿಎಲ್ 2022 ರಲ್ಲಿ ತಮ್ಮ ಬಿರುಸಿನ ಆರಂಭದ ನಂತರ, ಗಿಲ್ ಅವರು ತಮ್ಮ ಮೊದಲ ಮೂರು ಪಂದ್ಯಗಳಲ್ಲಿ 180 ರನ್ ಗಳಿಸಿದ್ದರು. ಆದರೆ ನಂತರ ಇತ್ತೀಚಿನ ಐದು ಪಂದ್ಯಗಳಲ್ಲಿ ಗಿಲ್ ಕೇವಲ 49 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ ಐಪಿಎಲ್ 2022ರಲ್ಲಿ ಗಿಲ್ ಇದುವರೆಗೆ 28.63 ಸರಾಸರಿಯಲ್ಲಿ ಮತ್ತು 142.23 ಸ್ಟ್ರೈಕ್ ರೇಟ್‌ನಲ್ಲಿ 229 ರನ್ ಗಳಿಸಿದ್ದಾರೆ.