ಕೊಚ್ಚಿ(ಅ.24): ಟೀಂ ಇಂಡಿಯಾದ ವಿವಾದಿತ ವೇಗಿ ಎಸ್ ಶ್ರೀಶಾಂತ್ ನಿಷೇದದ ಶಿಕ್ಷೆ ಮುಗಿಯುತ್ತಿರುವ ಬೆನ್ನಲ್ಲೇ ಅಭ್ಯಾಸ ಆರಂಭಿಸಿದ್ದಾರೆ. ಐಪಿಎಲ್ ಟೂರ್ನಿ ಹಾಗೂ ವಿದೇಶಿ ಲೀಗ್ ಟೂರ್ನಿ ಮೇಲೆ ಕಣ್ಣಿಟ್ಟಿರುವ ಶ್ರೀಶಾಂತ್ ಒಳಾಂಗಣ ಕ್ರೀಡಾಂಗಣದಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ.

 

ಇದನ್ನೂ ಓದಿ: ಶ್ರೀಶಾಂತ್ ಆರೋಪಕ್ಕೆ ದಿನೇಶ್ ಕಾರ್ತಿಕ್ ತಿರುಗೇಟು!

2013ರ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಶ್ರೀಶಾಂತ್ ಮೇಲೆ ಬಿಸಿಸಿಐ ಅಜೀವ ನಿಷೇಧ ಹೇರಿತ್ತು. ಕಾನೂನು ಹೋರಾಟದಲ್ಲಿ ಶ್ರೀಶಾಂತ್‌ಗೆ ಗೆಲುವು ಸಿಕ್ಕಿದರೂ, ಬಿಸಿಸಿಐ ನಿಷೇದ ತೆರವುಗೊಳಸಲಿಲ್ಲ. ಇತ್ತೀಚೆಗಷ್ಟೇ ಶ್ರೀಶಾಂತ್ ಮೇಲಿನ ಅಜೀವ ನಿಷೇಧವನ್ನು 7 ವರ್ಷಕ್ಕೆ ಕಡಿತಗೊಳಿಸಲಾಯಿತು. ಈಗಾಗಲೇ 6 ವರ್ಷ ಶಿಕ್ಷೆ ಪೂರೈಸಿರುವ ಶ್ರೀ, 2020ರಲ್ಲಿ ನಿಷೇಧದಿಂದ ಮುಕ್ತವಾಗಲಿದ್ದಾರೆ.

ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ 100 ನನ್ನ ವಿಕೆಟ್ ಗುರಿ; ಮತ್ತೆ ಕಣಕ್ಕಳಿಯಲು ರೆಡಿಯಾದ ಶ್ರೀ!

ನಿಷೇಧ ಮುಗಿಯಲು ಒಂದು ವರ್ಷ ಬಾಕಿ ಇರುವಾಗಲೇ ಶ್ರೀಶಾಂತ್ ಕಸರತ್ತು ಆರಂಭಿಸಿದ್ದಾರೆ. ಕೇರಳ ರಣಜಿ ನಾಯಕನಿಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ್ದಾರೆ. ಇಷ್ಟೇ ಅಲ್ಲ ಕ್ಲೀನ್ ಬೋಲ್ಡ್ ಮಾಡಿದ್ದಾರೆ. ಶ್ರೀಶಾಂತ್ ಟೀಂ ಇಂಡಿಯಾ ಕಮ್‌ಬ್ಯಾಕ್ ಬಹುತೇಕ ಮುಚ್ಚಿಹೋಗಿದೆ. ಹೀಗಾಗಿ ಶ್ರೀಶಾಂತ್ ಐಪಿಎಲ್ ಹಾಗೂ ವಿದೇಶಿ ಲೀಗ್ ಟೂರ್ನಿ ಆಡಲು ಪ್ಲಾನ್ ಮಾಡಿದ್ದಾರೆ.

ಇದನ್ನೂ ಓದಿ: ಶ್ರೀಶಾಂತ್‍‌ಗೆ ಬಿಗ್ ರಿಲೀಫ್; ನಿಷೇಧ ಕಡಿತಗೊಳಿಸಿದ BCCI!

ಐಪಿಎಲ್ ಟೂರ್ನಿಯಲ್ಲೇ ಶ್ರೀಶಾಂತ್ ಮೇಲೆ ಫಿಕ್ಸಿಂಗ್ ಆರೋಪ ಕೇಳಿ ಬಂದ ಕಾರಣ, ಯಾವ ಫ್ರಾಂಚೈಸಿ ಕೂಡ ಖರೀದಿಗೆ ಮುಂದೆ ಬರುವ ಸಾಧ್ಯತೆ ಕಡಿಮೆ. ಇದೊಂದೆ ಕಾರಣವಲ್ಲ, ಈಗಾಗಲೇ ಶ್ರೀಶಾಂತ್ ವಯಸ್ಸು 36. ಹೀಗಾಗಿ ಈ ವಯಸ್ಸಿನಲ್ಲಿ ವೇಗಿಗಳು ಯಶಸ್ಸು ಸಾಧಿಸುವುದು ಕಷ್ಟ. ಆದರೆ ಶ್ರೀಶಾಂತ್ ಆತ್ಮವಿಶ್ವಾಸದಲ್ಲಿದ್ದಾರೆ. ಆರಂಭದಲ್ಲಿ ಕೇರಳ ಪರ ರಣಜಿ ಆಡಿ, ಬಳಿಕ ಲೀಗ್ ಟೂರ್ನಿಯತ್ತ ಗಮನಹರಿಸಲು ಚಿಂತಿಸಿದ್ದಾರೆ.