ಮೊಣಕಾಲಿನಲ್ಲಿ ಮೆಟ್ಟಿಲು ಹತ್ತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಕ್ರಿಕೆಟಿಗ ನಿತೀಶ್ ರೆಡ್ಡಿ
ಆಸ್ಟ್ರೇಲಿಯಾ ಪ್ರವಾಸದಲ್ಲಿ ದಿಟ್ಟ ಹೋರಾಟ ನೀಡಿದ ನಿತೀಶ್ ರೆಡ್ಡಿ ತವರಿಗೆ ಮರಳಿದ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ವಿಶೇಷ ಅಂದರೆ ಮೊಣಕಾಲಿನಲ್ಲಿ ಬೆಟ್ಟ ಹತ್ತಿದ ನಿತೀಶ್ ರೆಡ್ಡಿ ಪೂಜೆ ಸಲ್ಲಿಸಿದ್ದಾರೆ.
ತಿರುಪತಿ(ಜ.14) ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಆದರೆ ನಿತೀಶ್ ಕುಮಾರ್ ರೆಡ್ಡಿ ಭಾರತದ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಶತಕ ಸಿಡಿಸಿ ಅಬ್ಬರಿಸಿದ ನಿತೀಶ್ ರೆಡ್ಡಿ ತಂಡವನ್ನು ಅಪಾಯದಿಂದ ಕಾಪಾಡಿದ್ದರು. ಆಸೀಸ್ ಸರಣಿಯಲ್ಲಿ ನಿತೀಶ್ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸರಣಿ ಮುಗಿಸಿ ತವರಿಗೆ ಮರಳಿದ ನಿತೀಶ್ ರೆಡ್ಡಿ ಇದೀಗ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಮೊಣಕಾಲಿನಿಂದ ಮೆಟ್ಟಿಲು ಹತ್ತಿರುವ ನಿತೀಶ್ ಕುಮಾರ್ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವಿಡಿಯೋಗಳು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ತಿರುಪತಿ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ತೆರಳಲು 3550 ಮೆಟ್ಟಿಲು ಹತ್ತಬೇಕು. ಈ ಮೆಟ್ಟಿಲುಗಳನ್ನು ಟೀಂ ಇಂಡಿಯಾ ಕ್ರಿಕೆಟಿಗ ನಿತೀಶ್ ರೆಡ್ಡಿ ಮೊಣಕಾಲಿನ ಮೂಲಕ ಹತ್ತಿದ್ದಾರೆ. ಇದು ಒಟ್ಟು 12 ಕಿಲೋಮೀಟರ್ ಅಂತರವಿದೆ. ನಿತೀಶ್ ಕುಮಾರ್ ರೆಡ್ಡಿ ಮೊಣಕಾಲಿನ ಮೂಲಕ ಬೆಟ್ಟ ಹತ್ತಿ ದರ್ಶನ ಪಡೆದಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿರುವ ನಿತೀಶ್ ಕುಮಾರ್ ರೆಡ್ಡಿ ತಮ್ಮ ಭಕ್ತಿಯನ್ನು ಕೃತಜ್ಞೆಯನ್ನು ಕಠಿಣ ವೃತದ ಮೂಲಕ ಸಲ್ಲಿಸಿದ್ದಾರೆ.
ಸುನಿಲ್ ಗವಾಸ್ಕರ್ ಪಾದಕ್ಕೆರಗಿದ ಸೆಂಚುರಿ ಸ್ಟಾರ್ ನಿತೀಶ್ ರೆಡ್ಡಿ ತಂದೆ, ಭಾವುಕ ಕ್ಷಣದ ವಿಡಿಯೋ!
ನಿತೀಶ್ ಕುಮಾರ್ ಭಕ್ತಿಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಮುಂದಿನ ಸರಣಿಗಳಲ್ಲಿ ನಿತೀಶ್ ಕುಮಾರ್ ಮತ್ತಷ್ಟು ಸೆಂಚುರಿ ದಾಖಲಿಸುವಂತಾಗಲಿ ಎಂದು ಹಾರೈಸಿದ್ದಾರೆ. ನಿತೀಶ್ ಕುಮಾರ್ ಕಠಿಣ ಪರಿಶ್ರಮಕ್ಕೆ ಆಸ್ಟ್ರೇಲಿಯಾದಲ್ಲಿ ಫಲ ಸಿಕ್ಕಿದೆ. ಇದೇ ರೀತಿ ಮುಂದಿನ ಟೂರ್ನಿಗಳಲ್ಲಿ ನಿತೀಶ್ ಕುಮಾರ್‌ಗೆ ತಿರುಪತಿ ತಿಮ್ಮಪ್ಪನ ಆಶೀರ್ವಾದ ಇರಲಿದೆ ಎಂದು ಭಕ್ತರು ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಮೊದಲ ಪ್ರವಾಸವಾಗಿತ್ತು. ಆದರೆ ಮೊದಲ ಟೂರ್ನಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಟೀಂ ಇಂಡಿಯಾದ ಸ್ಥಾನ ಭದ್ರಪಡಿಸಿದ್ದಾರೆ. 5 ಟೆಸ್ಟ್ ಪಂದ್ಯಗಳಲ್ಲಿ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆದಿದ್ದರು. 5 ಪಂದ್ಯಗಳಲ್ಲಿ ಉತ್ತಮ ಹೋರಾಟ ನೀಡಿದ್ದರು. ಈ ಮೂಲಕ 2025ರ ಆಸೀಸ್ ಸರಣಿಯಲ್ಲಿ ಗರಿಷ್ಠ ರನ್ ಸಿಡಿಸಿದ ನಾಲ್ಕನೇ ಬ್ಯಾಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಎಂಸಿಜಿ ಮೈದಾನದಲ್ಲಿ ನಿತೀಶ್ ಕುಮಾರ್ ರೆಡ್ಡಿ ಸೆಂಚುರಿ ಸಿಡಿಸಿ ಮಿಂಚಿದ್ದರು. ಈ ಮೂಲಕ 298 ರನ್ ಸಿಡಿಸಿದ್ದರು.
ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ವಿಶಾಖಪಟ್ಟಣಂಗೆ ಮರಳಿದ ನಿತೀಶ್ ರೆಡ್ಡಿಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಕಿಕ್ಕಿರಿದು ಅಭಿಮಾನಗಳು ತುಂಬಿದ್ದರು. ನಿತೀಶ್ ರೆಡ್ಡಿಗೆ ಅಭಿಮಾನಿಗಳು ಹೂಮಳೆ ಸ್ವಾಗತ ಕೋರಿದ್ದರು. ಇನ್ನು ತೆರೆದ ವಾಹನದಲ್ಲಿ ನಿತೀಶ್ ರೆಡ್ಡಿ ಮೆರವಣಿ ಮಾಡಲಾಗಿತ್ತು. ಅದ್ಭುತ ಪ್ರದರ್ಶನಕ್ಕೆ ಭರ್ಜರಿ ಪ್ರಶಂಸೆ ವ್ಯಕ್ತವಾಗಿತ್ತು.
ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಆಯ್ಕೆ ಮಾಡಿರುವ ತಂಡದಲ್ಲಿ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆದಿಲ್ಲ. ಆದರೆ ನಿತೀಶ್ ಕುಮಾರ್ ರೆಡ್ಡಿ ಭಾರತ ಟೆಸ್ಟ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಬೌಲಿಂಗ್‌ನಲ್ಲೂ ಕಮಾಲ್ ಮಾಡುವ ಸಾಮರ್ಥ್ಯ ಹೊಂದಿರು ನಿತೀಶ್ ಕುಮಾರ್ ರೆಡ್ಡಿ ಭವಿಷ್ಯದ ಸ್ಟಾರ್ ಬ್ಯಾಟರ್ ಎಂದು ಹಲವು ದಿಗ್ಗಜ ಕ್ರಿಕೆಟಿಗರು ಉಲ್ಲೇಖಿಸಿದ್ದಾರೆ.
ಬಾಡಿಗೆ ಮನೆಯಿಂದ ಬಾಕ್ಸಿಂಗ್ ಡೇ ಹೀರೋ: ಅಪ್ಪನ ಪ್ರತಿ ಬೆವರಿನ ಹನಿಗೂ ಚಿನ್ನದ ಬೆಲೆ ತಂದ ನಿತೀಶ್ ರೆಡ್ಡಿ!