Asianet Suvarna News Asianet Suvarna News

ಜೂ.18ಕ್ಕೆ ಕೆಎಲ್ ರಾಹುಲ್‌ಗೆ ಫಿಟ್ನೆಸ್ ಟೆಸ್ಟ್, ಇಂಗ್ಲೆಂಡ್ ಪ್ರವಾಸಕ್ಕೆ ಅನುಮಾನ?

ಭಾರತ ಟೆಸ್ಟ್ ತಂಡದ ಉಪನಾಯಕ ಕೆಎಲ್ ರಾಹುಲ್ ಈ ವಾರದ ಕೊನೆಯಲ್ಲಿ ಫಿಟ್ನೆಸ್ ಪರೀಕ್ಷೆಗ ಒಳಗಾಗಬಹುದು ಎಂದು ವರದಿಯಾಗಿದೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದಲ್ಲಿ ಮಾತ್ರವೇ ಆರಂಭಿಕ ಬ್ಯಾಟ್ಸ್ ಮನ್ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಲಿದ್ದಾರೆ, ಹಾಗೇನಾದರೂ ಫೇಲ್ ಆದಲ್ಲಿ ಜುಲೈ ಮೊದಲ ವಾರದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಹೊರಗುಳಿಯುವ ಸಾಧ್ಯತೆ ಇದೆ.

Cricket Vice captain KL Rahul set to undergo fitness test on Saturday says Report can he be fit for England tour san
Author
Bengaluru, First Published Jun 15, 2022, 6:02 PM IST

ಮುಂಬೈ (ಜೂನ್ 15): ಇಂಗ್ಲೆಂಡ್ (England) ವಿರುದ್ಧದ ಏಕೈಕ ಟೆಸ್ಟ್ (Only Test) ಪಂದ್ಯಕ್ಕೆ ಟೀಮ್ ಇಂಡಿಯಾಗೆ (Team India) ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಸೇವೆ ಸಿಗುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಟಿ20 ಸರಣಿಯ ವೇಳೆ ಕೆಎಲ್ ರಾಹುಲ್, ಭಾರತ ತಂಡದ ಪರವಾಗಿ ನಾಯಕತ್ವದ ಪಾದಾರ್ಪಣೆ ಮಾಡಬೇಕಿತ್ತು. ಆದರೆ, ಗಾಯದ ಗಾರಣದಿಂದಾಗಿ ಇಡೀ ಸರಣಿಯಿಂದ ಹೊರಗುಳಿದಿದ್ದರು.

ವರದಿಗಳ ಪ್ರಕಾರ ಕೆಎಲ್ ರಾಹುಲ್ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಇನ್ನೂ ಕೆಲವು ಮೂಲಗಳ ಪ್ರಕಾರ, ಈ ವಾರದ ಕೊನೆಯಲ್ಲಿ ಕೆಎಲ್ ರಾಹುಲ್‌ಗೆ ಫಿಟ್ನೆಸ್ ಪರೀಕ್ಷೆ ನಡೆಯಲಿದ್ದು ಆ ಬಳಿಕವೇ ಅವರ ಲಭ್ಯತೆಯ ಬಗ್ಗೆ ಖಚಿತವಾಗಲಿದೆ ಎನ್ನಲಾಗಿದೆ.

ಜೂನ್ 18 ರಂದು ಕೆಎಲ್ ರಾಹುಲ್ ಫಿಟ್ನೆಸ್ ಪರೀಕ್ಷೆಗೆ (Fitness Test) ಒಳಗಾಗಲಿದ್ದಾರೆ. ಇದರಲ್ಲಿ ಪಾಸ್ ಆದಲ್ಲಿ ಮಾತ್ರವೇ ಅವರು ಇಂಗ್ಲೆಂಡ್ ಪ್ರವಾಸದ ವಿಮಾನವೇರಲಿದ್ದಾರೆ. "ಇದು ನಿಧಾನಗತಿಯ ಪ್ರಕ್ರಿಯೆ. ಅವರ ಚೇತರಿಕೆ ಬಹಳ ನಿಧಾನಗತಿಯಲ್ಲಿ ಆಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. 2ನೇ ಬ್ಯಾಚ್ ಇಂಗ್ಲೆಂಡ್‌ಗೆ ತೆರಳಲು ಇನ್ನು 3-4 ದಿನ ಮಾತ್ರವೇ ಉಳಿದಿದೆ. ಶನಿವಾರ ಅವರಿಗೆ ಸಣ್ಣ ಪ್ರಮಾಣದ ಫಿಟ್ನೆಸ್ ಟೆಸ್ಟ್ ಕೂಡ ಇರುವ ಸಾಧ್ಯತೆ ಇದೆ. ಹಾಗೇನಾದರೂ ಅದನ್ನು ಕ್ಲಿಯರ್ ಮಾಡಿದಲ್ಲಿ ಮಾತ್ರವೇ ವಿಮಾನವೇರಲಿದ್ದಾರೆ.  ಕ್ಲಿಯರ್ ಮಾಡದೇ ಇದ್ದಲ್ಲಿ ಸಂಪೂರ್ಣ ಚೇತರಿಕೆಗಾಗಿ ಕಾಯುತ್ತೇವೆ. ಆದರೆ, ಪ್ರಸ್ತುತ ಕ್ಷಣದಲ್ಲಿ ಅವರು ಈ ಪಂದ್ಯದಿಂದ ಹೊರಬಿದ್ದಿಲ್ಲ' ಎಂದು ಬಿಸಿಸಿಐ ಅಧಿಕಾರಿಯೊಬ್ಬರು (BCCI Oficial) ತಿಳಿಸಿದ್ದಾರೆ.

ವೈಟ್ ಬಾಲ್ ಸರಣಿಗೆ ಅವರ ಲಭ್ಯತೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ರಾಹುಲ್ ಫಿಟ್ ಆಗಿದ್ದರೆ ಸಂಪೂರ್ಣ ಸರಣಿ ಆಡಲಿದ್ದಾರೆ. ಅವರು ಟೆಸ್ಟ್ ಪಂದ್ಯಕ್ಕೆ ಫಿಟ್ ಆಗದಿದ್ದರೆ, ವೈಟ್-ಬಾಲ್ ಸರಣಿಯ ಆರಂಭದ ಮೊದಲು ಅವರು ತಂಡವನ್ನು ಸೇರಿಕೊಳ್ಳಬಹುದು.

ಬಿಸಿಸಿಐ ಖಜಾನೆಗೆ 48,390 ಕೋಟಿ, ಫ್ರಾಂಚೈಸಿ, ಪ್ಲೇಯರ್ಸ್ ಹಾಗೂ ರಾಜ್ಯ ಸಂಸ್ಥೆಗಳಿಗೆ ಸಿಗೋ ಹಣವೆಷ್ಟು?

ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಜುಲೈ 1 ರಿಂದ 5 ರವರೆಗೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದ್ದು, ಆರು ಪಂದ್ಯಗಳ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿ ಜುಲೈ 7 ರಿಂದ 17 ರವರೆಗೆ ನಡೆಯಲಿವೆ. ಫಿಟ್ ಆಗಿದ್ದರೆ, ರಾಹುಲ್ ಸೀಮಿತ ಓವರ್‌ಗಳ ಸರಣಿಯಲ್ಲೂ ರೋಹಿತ್ ಶರ್ಮಾಗೆ ಉಪನಾಯಕರಾಗಿ ಆಡಲಿದ್ದಾರೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ವಿರುದ್ಧದ ಏಕೈಕ  ಟೆಸ್ಟ್ ಪಂದ್ಯವು ಐದು ಪಂದ್ಯಗಳ ಸರಣಿಯ ಭಾಗವಾಗಿದೆ, ಇದು ಕಳೆದ ವರ್ಷ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದರಿಂದ ಭಾರತ ತಂಡ ಕೊನೆಯ ಟೆಸ್ಟ್ ಪಂದ್ಯವಾಡದೇ ವಾಪಸಾಗಿತ್ತು. ಆ ಸರಣಿಯಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು.

Ind vs SA ಚಾಹಲ್, ಹರ್ಷಲ್ ದಾಳಿಗೆ ದಕ್ಷಿಣ ಆಫ್ರಿಕಾ ಬ್ರೇಕ್ ಫೇಲ್, ಭಾರತಕ್ಕೆ ಜಯದ ಥ್ರಿಲ್!

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ) ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಬ್ ಪಂತ್ (WK), ಕೆಎಸ್ ಭರತ್ (WK), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ

Follow Us:
Download App:
  • android
  • ios