ಮುಂಬೈ(ನ.13): ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವವ ಕೌನ್ ಬನೇಗಾ ಕರೋಡ್ ಪತಿ(KBC) 11ನೇ ಆವೃತ್ತಿಯಲ್ಲಿ ಕ್ರಿಕೆಟ್ ಪ್ರಶ್ನೆಯೊಂದು ಸ್ಪರ್ಧಿಯ ಕನಸಿನ ಗೋಪುರವನ್ನೇ ಬೀಳಿಸಿದೆ. ಎಲ್ಲಾ ಪ್ರಶ್ನೆಗಳಿಗೆ ಸರಿ ಉತ್ತರ ನೀಡುತ್ತಾ ಕೋಟಿ ರೂಪಾಯಿ ಗೆದ್ದ ಸ್ಪರ್ದಿ ಕೊನೆಗೆ ಕ್ರಿಕೆಟ್ ಕುರಿತ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ. ಹೀಗಾಗಿ 7 ಕೋಟಿ ಬಹುಮಾನ ಮಿಸ್ಸಾಗಿದೆ.

ಇದನ್ನೂ ಓದಿ: ರಾಹುಲ್ ದ್ರಾವಿಡ್ ಸ್ವಹಿತಾಸಕ್ತಿ ವಿಚಾರಣೆ ಅಂತ್ಯ; ಶೀಘ್ರದಲ್ಲಿ ತೀರ್ಪು!.

ಬಿಹಾರದ ಅಜೀತ್ ಕುಮಾರ್ ತನ್ನ ಜ್ಞಾನ ಬಳಸಿ, ಲೈಫ್ ಲೈನ್, ಫೋನೋ ಫ್ರೆಂಡ್ ಸೇರಿದಂತೆ ಸಹಾಯಗಳನ್ನು ಬಳಸಿ 1 ಕೋಟಿ ರೂಪಾಯಿ ಗೆದ್ದುಕೊಂಡಿದ್ದರು. ಈ ವೇಳೆ 7 ಕೋಟಿ ರೂಪಾಯಿಯ ಅಂತಿಮ ಪ್ರಶ್ನೆಗೆ ಅಜೀತ್ ಸಜ್ಜಾಗಿದ್ದರು. ಎಲ್ಲರೂ ಅಜೀತ್ 7 ಕೋಟಿ ರೂಪಾಯಿ ಗೆದ್ದು ದಾಖಲೆ ಬರೆಯಲಿದ್ದಾರೆ ಎಂದು ಭಾವಿಸಿದ್ದರು. ಆದರೆ ಕ್ರಿಕೆಟ್ ಕುರಿತ ಪ್ರಶ್ನೆಗೆ ಉತ್ತರ ಸಿಗದೆ ಅಜೀತ್ ಸ್ಪರ್ಧೆಯಿಂದ ಹೊರನಡೆದರು. ಹೀಗಾಗಿ ಅಜೀತ್ 7 ಕೋಟಿ ರೂಪಾಯಿ ಬದಲು 1 ಕೋಟಿ ರೂಪಾಯಿ ಪಡೆದು ಹಿಂತುರುಗಿದರು.

ಇದನ್ನೂ ಓದಿ: ಆಸ್ಟ್ರೇಲಿಯಾ ಕ್ರಿಕೆಟರ್ ಆಸೋಸಿಯೇಶನ್‌ಗೆ ವ್ಯಾಟ್ಸನ್ ಅಧ್ಯಕ್ಷ!

ಅಜೀತ್‌ ಕುಮಾರ್‌ಗೆ KBCಯಲ್ಲಿ ಕೇಳಿದ 7 ಕೋಟಿ ರೂಪಾಯಿ ಪ್ರಶ್ನೆ:
ಪ್ರಶ್ನೆ: ಯಾವ ಕ್ರಿಕೆಟಿಗ ಒಂದೇ ದಿನ, ಬೇರೆ ಬೇರೆ ತಂಡಗಳ ವಿರುದ್ಧ 2 ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿದ್ದಾರೆ?
ಆಯ್ಕೆಗಳು: A)ನವರೋಜ್ ಮಂಗಲ್ B) ಮೊಹಮ್ಮದ್ ಹಫೀಜ್ C) ಮೊಹಮ್ಮದ್ ಶೆಹಝಾದ್ D) ಶಕೀಬ್ ಅಲ್ ಹಸನ್

ಈ ಪ್ರಶ್ನೆಗೆ ಅಜೀತ್ ಕುಮಾರ್‌ಗೆ ಉತ್ತರ ಗೊತ್ತಿರಲಿಲ್ಲ, ಹೀಗಾಗಿ ಸ್ಪರ್ಧೆಯಿಂದ ಕ್ವಿಟ್ ಆದರು. ಈ ಪ್ರಶ್ನೆಯ ಸರಿಯಾದ ಉತ್ತರ  ಅಪ್ಘಾನಿಸ್ತಾನ ಬ್ಯಾಟ್ಸ್‌ಮನ್ ಮೊಹಮ್ಮದ್ ಶೆಹಝಾದ್.

2017ರ ಜನವರಿ 20 ರಂದು ನಡೆದ ಡೆಸರ್ಟ್ ಟಿ20 ಚಾಲೆಂಜ್ ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ಶೆಹಝಾದ್ 2 ತಂಡಗಳ ವಿರುದ್ದ ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು. ಐರ್ಲೆಂಡ್ ವಿರುದ್ದ 52 ರನ್ ಸಿಡಿಸಿದ್ದ ಶೆಹಝಾದ್ ಬಲಿಕ ಒಮಾನ್ ವಿರುದ್ದ 82 ರನ್ ಚಚ್ಚಿದ್ದರು. ಈ ಮೂಲಕ ಒಂದೇ ದಿನ, ಎರಡು ವಿವಿಧ ತಂಡಗಳ ವಿರುದ್ದ 2 ಅರ್ಧಶತಕ ಸಿಡಿಸಿದ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.