ಮುಂಬೈ(ಮಾ.27): ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಕೋವಿಡ್‌ 19 ಸೋಂಕಿಗೆ ತುತ್ತಾಗಿದ್ದು, ಸ್ವತಃ ತೆಂಡುಲ್ಕರ್‌ ಈ ವಿಚಾರವನ್ನು ಟ್ವೀಟ್‌ ಮೂಲಕ ಖಚಿತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೋವಿಡ್ 19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದರ ಬೆನ್ನಲ್ಲೇ ಕ್ರಿಕೆಟ್‌ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡುಲ್ಕರ್‌ಗೂ ಕೊರೋನಾ ಮಹಾಮಾರಿ ವಕ್ಕರಿಸಿರುವುದು ಕ್ರಿಕೆಟ್‌ ಅಭಿಮಾನಿಗಳನ್ನು ಆತಂಕಕ್ಕೆ ಈಡಾಗುವಂತೆ ಮಾಡಿದೆ.  

ನಾನು ಕೋವಿಡ್ ಪರೀಕ್ಷೆಗೆ ಒಳಗಾಗಿ ಕೋವಿಡ್‌ನಿಂದ ಆದಷ್ಟು ದೂರವಿರಲು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೆ. ಹೀಗಿದ್ದೂ, ನಾನಿಂದು ಕೋವಿಡ್‌ 19 ಸೋಂಕಿಗೆ ತುತ್ತಾಗಿರುವುದು ಖಚಿತವಾಗಿದೆ. ನನ್ನ ಸೂಕ್ಷ್ಮವಾಗಿ ಕೋವಿಡ್ 19 ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಬೆನ್ನಲ್ಲೇ ಪರೀಕ್ಷೆಗೊಳಪಟ್ಟಾಗ ಸೋಂಕು ತಗುಲಿರುವುದು ಖಚಿತವಾಗಿದೆ. ಆದರೆ ನನ್ನ ಮನೆಯ ಉಳಿದೆಲ್ಲ ಸದಸ್ಯರ ಕೋವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದಿದೆ.

ಹಾಸ್ಟೆಲ್‌ಗಳೇ ಕೊರೋನಾ ಹಾಟ್‌ಸ್ಪಾಟ್‌: 53 ವಿದ್ಯಾರ್ಥಿಗಳಿಗೆ ಪಾಸಿಟಿವ್‌

ನಾನೀಗ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದು, ನನ್ನ ವೈದ್ಯರು ಸೂಚಿಸಿದ ಎಲ್ಲಾ ರೀತಿಯ ಅಗತ್ಯ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನನಗೆ ಹಾಗೂ ದೇಶದೆಲ್ಲಡೇ ಕೋವಿಡ್ ವಿರುದ್ದ ಹೋರಾಡುತ್ತಿರುವ ನನ್ನೆಲ್ಲಾ ಆರೋಗ್ಯ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ಸಚಿನ್ ತೆಂಡುಲ್ಕರ್‌ ಟ್ವೀಟ್‌ ಮಾಡಿದ್ದಾರೆ.