Big Bash League: ಟೂರ್ನಿ ಮೇಲೆ ಕೊರೋನಾ ವೈರಸ್ ಕೆಂಗಣ್ಣು, ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..!

* ಬಿಗ್‌ಬ್ಯಾಶ್ ಲೀಗ್ ಟೂರ್ನಿಯ ಮೇಲೆ ಕೋವಿಡ್‌ ಕೆಂಗಣ್ಣು

* ಬಿಗ್‌ಬ್ಯಾಶ್ ಟೂರ್ನಿಯ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ

* ಬ್ರಿಸ್ಬೇನ್ ಹೀಟ್‌ ತಂಡದ ಕೆಲ ಆಟಗಾರರಿಗೆ ಕೋವಿಡ್ ಪಾಸಿಟಿವ್

Cricket Australia reschedule BBL Matches after positive COVID cases in Brisbane Heat camp kvn

ಮೆಲ್ಬೊರ್ನ್‌(ಜ.04): ಆಸ್ಟ್ರೇಲಿಯಾದ ಪ್ರತಿಷ್ಠಿತ ಟಿ20 ಕ್ರಿಕೆಟ್‌ ಟೂರ್ನಿಯಾದ ಬಿಗ್‌ಬ್ಯಾಶ್ ಲೀಗ್ (big Bash League) ಟೂರ್ನಿಗೆ ಕೊರೋನಾ ವೈರಸ್ (Coronavirus) ತನ್ನ ವಕ್ರದೃಷ್ಟಿ ಬೀರಿದೆ. ಬ್ರಿಸ್ಬೇನ್‌ ಹೀಟ್‌ (Brisbane Heat) ಪಾಳಯದಲ್ಲಿ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಬಿಗ್‌ಬ್ಯಾಶ್ ಲೀಗ್ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಗಿದೆ.ಇದಷ್ಟೇ ಅಲ್ಲದೇ ಕಠಿಣ ಬಯೋ-ಬಬಲ್‌ನೊಳಗೆ (Bio Bubble) ಟೂರ್ನಿ ಆಯೋಜನೆಗೊಂಡಿದ್ದರೂ ಸಹಾ, ಕೋವಿಡ್ ಸೋಂಕು ಬಬಲ್‌ನೊಳಗೆ ಪ್ರವೇಶಿಸಿದ್ದು ಹೇಗೆ ಎನ್ನುವುದು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯ ತಲೆನೋವು ಹೆಚ್ಚುವಂತೆ ಮಾಡಿದೆ.

ಹೌದು, ಕ್ರಿಕೆಟ್‌ ಆಸ್ಟ್ರೇಲಿಯಾವು ಬಿಗ್‌ಬ್ಯಾಶ್ ಲೀಗ್ ಟೂರ್ನಿಯ ವೇಳಾಪಟ್ಟಿಯನ್ನು ಕೊಂಚ ಬದಲಿಸಿದ್ದು, ಜನವರಿ 06ರಂದು ನಡೆಯಬೇಕಿದ್ದ ಪರ್ತ್ ಸ್ಕಾಚರ್ಸ್‌ (Perth Scorchers) ಹಾಗೂ ಸಿಡ್ನಿ ಸಿಕ್ಸರ್ಸ್‌ (Sydney Sixers) ನಡುವಿನ ಪಂದ್ಯವು  ಜನವರಿ 04ರಂದೇ ನಡೆಯಲಿದೆ. ಇನ್ನು ಬ್ರಿಸ್ಬೇನ್ ಹೀಟ್ ಹಾಗೂ ಸಿಡ್ನಿ ಸಿಕ್ಸರ್ಸ್‌ ನಡುವಿನ ಪಂದ್ಯವು ಜನವರಿ 05ರಂದು ನಡೆಯಲಿದೆ. ಇದರ ಜತೆಗೆ ಸಿಡ್ನಿ ಥಂಡರ್ಸ್‌ ಹಾಗೂ ಪರ್ತ್ ಸ್ಕಾಚರ್ಸ್‌ ನಡುವಿನ ಪಂದ್ಯವು ಜನವರಿ 05ರಂದೇ ನಡೆಯಲಿದೆ.

ಮಾಧ್ಯಮಗಳ ವರದಿಯ ಪ್ರಕಾರ ಮೆಲ್ಬೊರ್ನ್‌ ಸ್ಟಾರ್ಸ್‌(Melbourne Stars) ತಂಡದ 12ಕ್ಕೂ ಹೆಚ್ಚು ಆಟಗಾರರು ಕೋವಿಡ್ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ. ಈಗಾಗಲೇ ಮೆಲ್ಬೊರ್ನ್‌ ಸ್ಟಾರ್ಸ್‌ ತಂಡದ ಮಾರ್ಕಸ್ ಸ್ಟೋನಿಸ್ (Marcus Stoinis), ಆಡಂ ಜಂಪಾ ಹಾಗೂ ನೇಥನ್ ಕೌಲ್ಟರ್‌-ನೈಲ್ ಸೇರಿದಂತೆ ಹಲವು ಆಟಗಾರರು ಈಗಾಗಲೇ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿಡ್ನಿ ಥಂಡರ್ಸ್‌, ಪರ್ತ್‌ ಸ್ಕಾಚರ್ಸ್‌ ಹಾಗೂ ಬ್ರಿಸ್ಬೇನ್ ಹೀಟ್ ತಂಡದ ಕೆಲ ಆಟಗಾರರಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು.

Ban vs NZ: ಕಿವೀಸ್‌ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಗೆಲುವಿನ ಹೊಸ್ತಿಲಲ್ಲಿ ಬಾಂಗ್ಲಾದೇಶ..!

ಬಯೋ ಬಬಲ್‌ನೊಳಗೆ ಇದ್ದು ಕೊಂಡು ಕೊರೋನಾ ಆತಂಕದ ನಡುವೆ ಪಂದ್ಯಕ್ಕೆ ಸಿದ್ದತೆ ನಡೆಸುವುದು ಸಾಕಷ್ಟು ಸವಾಲಿನ ಸಂಗತಿಯಾಗಿದೆ ಎಂದು ಮೆಲ್ಬೊರ್ನ್‌ ಸ್ಟಾರ್ಸ್ ತಂಡದ ಆಲ್ರೌಂಡರ್ ಹಿಲ್ಟನ್‌ ಕಾರ್ಟ್‌ರೈಟ್‌ (Hilton Cartwright) ಅಭಿಪ್ರಾಯಪಟ್ಟಿದ್ದಾರೆ. ಇಂತಹದ್ದೊಂದು ವೈರಸ್‌ ನನ್ನ ಜೀವನದಲ್ಲಿಯೇ ನೋಡಿರಲಿಲ್ಲ. ಈ ವೈರಸ್‌ ನನ್ನ ಮನಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹಿಲ್ಟನ್‌ ಕಾರ್ಟ್‌ರೈಟ್‌ ಹೇಳಿದ್ದಾರೆ.

ನಮ್ಮ ಕಾಳಜಿಯೇನಿದ್ದರೂ ಆಟಗಾರರ ಹಾಗೂ ಸಹಾಯಕ ಸಿಬ್ಬಂದಿಗಳ ಸುರಕ್ಷತೆಯೇ ಆಗಿದೆ. ಯಾರೆಲ್ಲಾ ಸೋಂಕಿತರಾಗಿದ್ದಾರೋ ಅವರೆಲ್ಲರೂ ಆದಷ್ಟು ಬೇಗ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಬಿಗ್‌ಬ್ಯಾಶ್ ಲೀಗ್ ಟೂರ್ನಿಯ ಜನರಲ್ ಮ್ಯಾನೇಜರ್ ಆಲಿಸ್ಟರ್ ಡಾಬ್ಸೆನ್‌ ಹೇಳಿದ್ದಾರೆ. 

Ashes Test: ಸಿಡ್ನಿ ಟೆಸ್ಟ್‌ ಪಂದ್ಯಕ್ಕೆ ಆಸ್ಟ್ರೇಲಿಯಾ-ಇಂಗ್ಲೆಂಡ್ ತಂಡ ಪ್ರಕಟ..!

ಬಿಗ್‌ಬ್ಯಾಶ್‌ ಲೀಗ್ ಟೂರ್ನಿ ಮಾತ್ರವಲ್ಲದೇ ಆಸ್ಟ್ರೇಲಿಯಾ ಮಹಿಳಾ ನ್ಯಾಷನಲ್‌ ಕ್ರಿಕೆಟ್‌ ಲೀಗ್ ಟೂರ್ನಿಯ ಎರಡು ಪಂದ್ಯಗಳು ಕೂಡಾ ಮುಂದೂಡಲ್ಪಟ್ಟಿವೆ. ಜನವರಿ 7 ಹಾಗೂ ಜನವರಿ 09 ರಂದು ವೆಸ್ಟರ್ನ್‌ ಆಸ್ಟ್ರೇಲಿಯಾ ತಂಡವು ಹೋಬರ್ಟ್‌ನಲ್ಲಿ ಟಾಸ್ಮೇನಿಯಾ ವಿರುದ್ದ ಕಣಕ್ಕಿಳಿಯಬೇಕಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯನ್ನು ಮಾರ್ಚ್‌ಗೆ ಮುಂದೂಡಲಾಗಿದೆ. ಬಾರ್ಡರ್‌ಗಳನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಈ ಎರಡು ಪಂದ್ಯಗಳನ್ನು ಮಾರ್ಚ್ 09 ಹಾಗೂ ಮಾರ್ಚ್ 11ರಂದು ನಡೆಸಲು ಆಯೋಜಕರು ತೀರ್ಮಾನಿಸಿದ್ದಾರೆ. 

Latest Videos
Follow Us:
Download App:
  • android
  • ios