Asianet Suvarna News Asianet Suvarna News

BCCI ಬಾಸ್ 'ದಾದಾ' ಕೆಲಸವನ್ನು ಕೊಂಡಾಡಿದ ಆಸೀಸ್ CEO

ಬಿಸಿಸಿಐ ಅಧ್ಯಕ್ಷ ಚುಕ್ಕಾಣಿ ಹಿಡಿದ ಬಳಿಕ ಸೌರವ್ ಗಂಗೂಲಿ ಈಗಾಗಲೇ ಹಲವು ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದೀಗ ಚತುಷ್ಕೋನ ಸರಣಿ ನಡೆಸುವ ಬಗ್ಗೆ ಒಲವು ತೋರಿರುವ ದಾದಾ ಅವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಸಿಇಒ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Cricket Australia CEO Praises BCCI President Sourav Ganguly Innovative Thinking For 4 Nation Tournament
Author
Melbourne VIC, First Published Dec 28, 2019, 2:10 PM IST
  • Facebook
  • Twitter
  • Whatsapp

ಮೆಲ್ಬರ್ನ್‌[ಡಿ.28]: ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಪ್ರಸ್ತಾಪಿಸಿರುವ ‘ಸೂಪರ್‌ ಸೀರೀಸ್‌’ ವಾರ್ಷಿಕ ಚತುಷ್ಕೋನ ಸರಣಿಗೆ ಕ್ರಿಕೆಟ್‌ ಆಸ್ಪ್ರೇಲಿಯಾ ಸಿಇಒ ಕೆವಿನ್‌ ರಾಬರ್ಟ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಣಿ ಆಯೋಜನೆ ಒಂದು ವಿನೂತನ ಐಡಿಯಾ ಎಂದು ಬಣ್ಣಿಸಿದ್ದಾರೆ. ಇದರೊಂದಿಗೆ ಸರಣಿಯಲ್ಲಿ ಪಾಲ್ಗೊಳ್ಳಲು ಪರೋಕ್ಷವಾಗಿ ಒಪ್ಪಿಗೆ ಸೂಚಿಸಿದ್ದಾರೆ.

ಬುಮ್ರಾ ರಣಜಿ ಟೂರ್ನಿ ಆಡದಂತೆ ತಡೆದ ಸೌರವ್ ಗಂಗೂಲಿ..!

2021ರಲ್ಲಿ ಭಾರತ, ಆಸ್ಪ್ರೇಲಿಯಾ, ಇಂಗ್ಲೆಂಡ್‌ ಹಾಗೂ ಮತ್ತೊಂದು ಆಹ್ವಾನಿತ ತಂಡ ಚತುಷ್ಕೋನ ಸರಣಿಯನ್ನು ಆಡಲಿವೆ ಎಂದು ಗಂಗೂಲಿ ಇತ್ತೀಚೆಗಷ್ಟೇ ಹೇಳಿದ್ದರು. ಈ ಸರಣಿ ಆಯೋಜನೆಯಿಂದ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಪ್ರತಿ ವರ್ಷ ವಿಶ್ವಕಪ್‌ ನಡೆಸುವುದನ್ನು ತಪ್ಪಿಸಲು ಬಿಸಿಸಿಐ ಯೋಜನೆ ರೂಪಿಸಿದೆ. 

ಕಿರುಕುಳ ಕೊಟ್ಟರೂ ಹಿಂದು ಧರ್ಮ ತ್ಯಜಿಸಲು ಮನಸ್ಸಾಗಲಿಲ್ಲ: ಪಾಕ್ ಕ್ರಿಕೆಟಿಗ

‘ಬಿಸಿಸಿಐ ಅಧ್ಯಕ್ಷ ಗಂಗೂಲಿ ವಿನೂತನ ಯೋಜನೆಯನ್ನು ರೂಪಿಸಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಭಾರತ ತಂಡ ಹಗಲು-ರಾತ್ರಿ ಟೆಸ್ಟ್‌ ಪಂದ್ಯವನ್ನಾಡುವಂತೆ ಮಾಡಿದರು. ಇದೀಗ ಸೂಪರ್‌ ಸೀರೀಸ್‌ ಆಯೋಜಿಸಲು ಮುಂದಾಗಿರುವುದು ಸ್ವಾಗತಾರ್ಹ’ ಎಂದು ರಾಬರ್ಟ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್‌ ಆಸ್ಪ್ರೇಲಿಯಾದ ಸಿಇಒ ರಾಬರ್ಟ್ಸ್ ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದ್ದು, ಗಂಗೂಲಿ ಜತೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ಚತುಷ್ಕೋನ ಸರಣಿಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಇದೊಂದು ’ಫ್ಲಾಪ್ ಐಡಿಯಾ’ ಟೀಕಿಸಿದ್ದಾರೆ. ಅಲ್ಲದೇ ಈ ಟೂರ್ನಿಯು ನಾಲ್ಕು ತಂಡಗಳನ್ನು ಹೊರತುಪಡಿಸಿ ಉಳಿದ ತಂಡಗಳನ್ನು ಕಡೆಗಣಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

ಡಿಸೆಂಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios