ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ರಣಜಿ ಪಂದ್ಯವಾಡದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಡೆದಿದ್ದಾರೆ. ಅರೇ ಇದೇನಿದು ಕತೆ ಅಂತಿರಾ, ಈ ಸ್ಟೋರಿ ಓದಿ ನಿಮಗೆ ತಿಳಿಯುತ್ತೆ...

ಸೂರತ್‌[ಡಿ.26]: ಶ್ರೀಲಂಕಾ ವಿರುದ್ಧ ಟಿ20 ಸರಣಿಗೂ ಮೊದಲು ರಣಜಿ ಪಂದ್ಯ ಆಡಬೇಕಾದ ಸಂದಿಗ್ಧ ಸ್ಥಿತಿಗೆ ಸಿಲಿಕಿಕೊಂಡಿದ್ದ ವೇಗಿ ಜಸ್‌ಪ್ರೀತ್‌ ಬುಮ್ರಾಗೆ ಕಡೆಗೂ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರ ಅಭಯ ದೊರಕಿದೆ. ಗುಜರಾತ್‌ ಪರ ರಣಜಿ ಪಂದ್ಯದಲ್ಲಿ ಆಡುವ ಮೂಲಕ ಫಿಟ್ನೆಸ್‌ ಸಾಬೀತು ಪಡಿಸಬೇಕಾದ ಅನಿವಾರ್ಯತೆಗೆ ಸೌರವ್‌ ತಡೆಯೊಡ್ಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ; ಬುಮ್ರಾ ವಾಪಾಸ್, ರೋಹಿತ್‌ಗೆ ರೆಸ್ಟ್!

ಸೌರವ್‌ ಅವರ ಮಧ್ಯಪ್ರದೇಶದಿಂದಾಗಿ ಬೂಮ್ರಾ ಈಗ ನೇರವಾಗಿ ಶ್ರೀಲಂಕಾ ವಿರುದ್ಧವೇ ಆಡಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಬುಮ್ರಾ ಫಿಟ್ನೆಸ್‌ ಸಾಬೀತುಪಡಿಸಲು ಕೇರಳ ವಿರುದ್ಧ ರಣಜಿ ಪಂದ್ಯ ಆಡಬೇಕಿತ್ತು. ಆದರೆ, ಇನ್ನೂ ಸ್ವಲ್ಪ ದಿನ ವಿಶ್ರಾಂತಿ ಬಯಸಿದ ಬುಮ್ರಾ, ಸೌರವ್‌ ಗಂಗೂಲಿ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಜತೆ ಮಾತನಾಡಿದರು. ಅವರಿಬ್ಬರೂ ಬುಮ್ರಾಗೆ ಸೀಮಿತ ಓವರ್‌ ಕ್ರಿಕೆಟ್‌ನತ್ತ ಗಮನ ಹರಿಸುವಂತೆ ಸೂಚಿಸಿದರು ಎನ್ನಲಾಗಿದೆ.

ರಣಜಿ ಟ್ರೋಫಿ: ಬ್ಯಾಟಿಂಗ್’ನಿಂದಲೇ ಉತ್ತರ ಕೊಟ್ಟ ಶಿಖರ್ ಧವನ್

‘ಬುಮ್ರಾ ಫಿಟ್‌ ಆಗಿದ್ದಾರೆ ಎಂದು ಖಚಿತಗೊಂಡ ಬಳಿಕವೇ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಯಿತು. ಮತ್ತೊಮ್ಮೆ ಫಿಟ್ನೆಸ್‌ ಸಾಬೀತುಪಡಿಸುವಂತೆ ಸೂಚಿಸುವುದು ಸರಿಯಲ್ಲ. ಬುಮ್ರಾ ಅಂತಹ ಬೌಲರ್‌ ಅನ್ನು ಆ ರೀತಿ ನಡೆಸಿಕೊಳ್ಳುವುದು ತಪ್ಪು. ಹೀಗಾಗಿ ಗಂಗೂಲಿ ರಣಜಿ ಪಂದ್ಯ ಆಡದಂತೆ ತಿಳಿಸಿದರು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಮಾಧ್ಯಮವೊಂದು ತನ್ನ ವರದಿಯಲ್ಲಿ ತಿಳಿಸಿದೆ.