ಮ್ಯಾಂಚೆಸ್ಟರ್(ಮಾ.23)‌: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಇಂಗ್ಲೆಂಡ್‌ನ ಲಂಕಾಷೈರ್‌ ಕೌಂಟಿ ಕ್ಲಬ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ವರ್ಷ ಜುಲೈನಲ್ಲಿ ನಡೆಯಲಿರುವ ರಾಯಲ್‌ ಲಂಡನ್‌ ಕಪ್‌ ಏಕದಿನ ಟೂರ್ನಿಯಲ್ಲಿ ಆಡಲಿದ್ದಾರೆ. ತಂಡದೊಂದಿಗೆ 1 ತಿಂಗಳ ಅವಧಿಗೆ ಶ್ರೇಯಸ್‌ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

'ಲಿಸ್ಟ್‌ ಎ' ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಶ್ರೇಯಸ್‌ ಅಯ್ಯರ್, ಇದುವರೆಗೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 98 ಇನಿಂಗ್ಸ್‌ಗಳನ್ನಾಡಿ 45.11ರ ಬ್ಯಾಟಿಂಗ್‌ ಸರಾಸರಿಯಲ್ಲಿ 3,970 ರನ್‌ ಬಾರಿಸಿದ್ದಾರೆ ಇದರಲ್ಲಿ 25 ಅರ್ಧಶತಕ ಹಾಗೂ 8 ಶತಕಗಳು ಸೇರಿವೆ. ಇನ್ನು ಭಾರತ ಪರ ಶ್ರೇಯಸ್‌ ಅಯ್ಯರ್‌ 19 ಏಕದಿನ ಇನಿಂಗ್ಸ್‌ಗಳನ್ನಾಡಿ 44.83ರ ಸರಾಸರಿಯಲ್ಲಿ 8  ಅರ್ಧಶತಕ ಹಾಗೂ ಒಂದು ಶತಕ ಸಹಿತ 807 ರನ್‌ ಬಾರಿಸಿ ಗಮನ ಸೆಳೆದಿದ್ದಾರೆ.

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಭರ್ಜರಿ ಸಿದ್ದತೆ; ಹಲವು ಪ್ರಯೋಗ ಸಕ್ಸಸ್

ಇಂಗ್ಲಿಷ್‌ ಕ್ರಿಕೆಟ್‌ನಲ್ಲಿ ಲಂಕಾಷೈರ್‌ ತನ್ನದೇ ಆದ ಛಾಪನ್ನು ಮೂಡಿಸಿದೆ. ಭಾರತ ಕ್ರಿಕೆಟ್‌ನೊಂದಿಗೂ ಲಂಕಾಷೈರ್‌ ಉತ್ತಮ ಸಂಬಂಧ ಹೊಂದಿದೆ. ಭಾರತದ ದಿಗ್ಗಜ ಕ್ರಿಕೆಟಿಗರಾದ ಫಾರುಕ್ ಇಂಜಿನಿಯರ್, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ ಅವರಂತಹ ಆಟಗಾರರು ಪ್ರತಿನಿಧಿಸಿದ ತಂಡದೊಂದಿಗೆ ಸೇರಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಎಮಿರೇಟ್ಸ್‌ ಓಲ್ಡ್‌ ಟ್ರ್ಯಾಫೋರ್ಡ್ ಒಂದು ವಿಶ್ವದರ್ಜೆಯ ಕ್ರಿಕೆಟ್‌ ಸ್ಟೇಡಿಯಂ ಆಗಿದ್ದು, ಅಲ್ಲಿ ನಮ್ಮ ಸಹ ಆಟಗಾರರನ್ನು ಸೇರಿಕೊಳ್ಳಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.