Asianet Suvarna News Asianet Suvarna News

ಭಾರತ-ಲಂಕಾ 2ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭ

* ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭ

* ಈಗಾಗಲೇ ಮೊದಲ ಟಿ20 ಪಂದ್ಯ ಗೆದ್ದು ಬೀಗಿರುವ ಶಿಖರ್ ಧವನ್ ಪಡೆ

* ಇನ್ನೊಂದು ಪಂದ್ಯ ಇರುವಾಗಲೇ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ ಧವನ್ ಪಡೆ

Countdown Starts for India vs Sri Lanka 2nd T20I Match at Colombo kvn
Author
Colombo, First Published Jul 27, 2021, 12:17 PM IST
  • Facebook
  • Twitter
  • Whatsapp

ಕೊಲಂಬೊ(ಜು.27): ಮೊದಲ ಟಿ20 ಪಂದ್ಯ ಗೆದ್ದ ಹುಮ್ಮಸ್ಸಿನಲ್ಲಿರುವ ಭಾರತ ತಂಡವು ಮಂಗಳವಾರ ಶ್ರೀಲಂಕಾ ವಿರುದ್ಧ 2ನೇ ಪಂದ್ಯ ಆಡಲಿದ್ದು, ಸರಣಿ ವಶಪಡಿಸಿಕೊಳ್ಳುವ ಗುರಿ ಹೊಂದಿದೆ. ಶಿಖರ್‌ ಧವನ್‌ ನಾಯಕತ್ವದ ಟೀಂ ಇಂಡಿಯಾ ಈಗಾಗಲೇ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.

ಸತತ ಸೋಲಿನಿಂದ ಕಂಗೆಟ್ಟಿರುವ ಅತಿಥೇಯ ಶ್ರೀಲಂಕಾಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದ್ದು, ಸರಣಿ ಸಮಬಲಗೊಳಿಸಲು ಪಣ ತೊಟ್ಟಿದೆ. 2019ರ ಅಕ್ಟೋಬರ್‌ನಿಂದ ಲಂಕಾ 14 ಟಿ20 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇನ್ನು, ಟೆಸ್ಟ್‌ ಸರಣಿಗೆ ಆಯ್ಕೆಯಾಗಿರುವ ಪೃಥ್ವಿ ಶಾ, ಸೂರ್ಯಕುಮಾರ್‌ ಯಾದವ್‌ ಯಾವಾಗ ಇಂಗ್ಲೆಂಡ್‌ಗೆ ತೆರಳಲಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಅವರಿಬ್ಬರೂ ಆಡುವ ನಿರೀಕ್ಷೆ ಇದೆ. ಉಳಿದಂತೆ ಭಾರತವು ಈ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ.

ಅಭಿಮಾನಿಗಳಿಗೆ ಸರ್ಪ್ರೈಸ್; ಮತ್ತೆ ಟೀಂ ಇಂಡಿಯಾ ಜರ್ಸಿ ತೊಟ್ಟು ಕಣಕ್ಕಿಳಿದ ಎಂ.ಎಸ್.ಧೋನಿ!

ಟಿ20 ಸರಣಿಗೂ ಮುನ್ನ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ಇದೀಗ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಈಗಿನಿಂದಲೇ ಸಕಲ ಸಿದ್ದತೆ ನಡೆಸುತ್ತಿದ್ದು, ಲಂಕಾ ವಿರುದ್ದ ಚುಟುಕು ಕ್ರಿಕೆಟ್ ಸರಣಿಯಲ್ಲಿ ಮತ್ತೊಮ್ಮೆ ಮಿಂಚಲು ಎದುರು ನೋಡುತ್ತಿದೆ.

ಪಂದ್ಯ: ರಾತ್ರಿ 8ರಿಂದ
ನೇರ ಪ್ರಸಾರ: ಸೋನಿ ಟೆನ್‌
 

Follow Us:
Download App:
  • android
  • ios