ಮುಂಬೈ(ಜು.06): ಸ್ಥಗಿತಗೊಂಡಿರುವ ಕ್ರಿಕೆಟ್ ಸರಣಿ ಮತ್ತೆ ಆರಂಭಿಸಲು ಕೊರೋನಾ ವೈರಸ್ ಅಡ್ಡಿಯಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೋನಾ ಸೋಂಕಿತರದಲ್ಲಿ ಭಾರತ ಇದೀಗ 3ನೇ ಸ್ಥಾನಕ್ಕೇರಿದೆ. ಹೀಗಾಗಿ ಸದ್ಯ ಭಾರತದಲ್ಲಿ ಐಪಿಎಲ್ ಆಯೋಜನೆ ಕಷ್ಟವಾಗುತ್ತಿದೆ. ಇಷ್ಟೇ ಅಲ್ಲ ಇತರ ದೇಶದಲ್ಲೂ ಐಪಿಎಲ್ ಟೂರ್ನಿ ಆಯೋಜಿಸುವುದು ಕಷ್ಟವಾಗುತ್ತಿದೆ. ಇದರ ನಡುವೆ ನ್ಯೂಜಿಲೆಂಡ್ ಐಪಿಎಲ್ ಟೂರ್ನಿ ಆಯೋಜಿಸಲು ರೆಡಿಯಾಗಿ ನಿಂತಿದೆ.

ಐಪಿ​ಎಲ್‌ ವಿದೇ​ಶಕ್ಕೆ ಶಿಫ್ಟ್‌ ಬಹು​ತೇಕ ಖಚಿತ.

ಕೊರೋನಾ ವೈರಸ್ ಮುಕ್ತ ನ್ಯೂಜಿಲೆಂಡ್ ಐಪಿಎಲ್ ಟೂರ್ನಿಗೆ ಆತಿಥ್ಯ ವಹಿಸಲು ರೆಡಿ ಎಂದಿದೆ. ಈ ಮೂಲಕ ಯುಎಇ ಹಾಗೂ ಶ್ರೀಲಂಕಾ ಬಳಿಕ ಬಿಸಿಸಿಐ ಬಳಿ ಐಪಿಎಲ್ ಆಯೋಜನೆ ಮನವಿ ಮಾಡಿದ 3ನೇ ದೇಶವಾಗಿದೆ. ಭಾರತದಲ್ಲಿ ಐಪಿಎಲ್ ಆಯೋಜನೆ ಕಷ್ಟವಾದರೆ ವಿದೇಶದಲ್ಲಿ ನಡೆಸಲು ಬಿಸಿಸಿಐ ತಯಾರಿ ಮಾಡಿಕೊಳ್ಳಲಿದೆ ಎಂದು ಈ ಹಿಂದೆ ಹೇಳಿದೆ. 

ಮಾಧ್ಯಮದ ಜೊತೆ ಮಾತನಾಡಿದರೆ ಅಮಾನತು; ನೌಕರರಿಗೆ BCCI ಎಚ್ಚರಿಕೆ!

ಐಪಿಎಲ್ ಆಯೋಜನೆಯ ಮೊದಲ ಆಯ್ಕೆ ಭಾರತ. ಆದರೆ ಭಾರತದಲ್ಲಿ ಸಾಧ್ಯವಾಗದಿದ್ದಾಗ, ಇತರ ದೇಶದಲ್ಲಿ ಆಯೋಜನೆ ಕುರಿತು ಚಿಂತಿಸಲಾಗುವುದು ಎಂದಿದೆ. ನ್ಯೂಜಿಲೆಂಡ್ ದೇಶ ಕೊರೋನಾದಿಂದ ಮುಕ್ತವಾಗಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸದ್ಯ ಐಪಿಎಲ್ ಆಯೋಜನೆಗೆ ನ್ಯೂಜಿಲೆಂಡ್ ಹೊರತು ಪಡಿಸಿದರೆ ಜಾಗವಿಲ್ಲ. 

ಶ್ರೀಲಂಕಾದಲ್ಲಿ ಐಪಿಎಲ್ ಆಯೋಜನೆ ಬಿಸಿಸಿಐ ಖಜಾನೆಗೆ ಹೆಚ್ಚಿನ ಹೊರೆ ಬೀಳುವುದಿಲ್ಲಿ. ಆದರೆ ಲಂಕಾದಲ್ಲಿ ಕೊರೋನಾ ವೈರಸ್ ಅಬ್ಬರವಿದೆ. ಇತ್ತ ನ್ಯೂಜಿಲೆಂಡ್‌ನಲ್ಲಿ ಐಪಿಎಲ್ ಆಯೋಜನೆ ದುಬಾರಿಯಾದರೂ ಕೊರೋನಾ ವೈರಸ್‌ನಿಂದ ಮುಕ್ತವಾಗಿದೆ.

ವಿದೇಶದಲ್ಲಿ ಐಪಿಎಲ್ ಆಯೋಜನೆ ಬಿಸಿಸಿಐಗೆ ಕಷ್ಟವವಲ್ಲ. 2009ರಲ್ಲಿ ಸಂಪೂರ್ಣ ಟೂರ್ನಿ ಸೌತ್ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಇನ್ನು  2014ರಲ್ಲಿ ಆರಂಭಿಕ ಹಂತದ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು.