ನವ​ದೆ​ಹ​ಲಿ(ಜು.03): 13ನೇ ಆವೃ​ತ್ತಿಯ ಇಂಡಿ​ಯನ್‌ ಪ್ರೀಮಿ​ಯರ್‌ ಲೀಗ್‌ (ಐ​ಪಿ​ಎಲ್‌) ವಿದೇ​ಶಕ್ಕೆ ಸ್ಥಳಾಂತರಗೊಳ್ಳು​ವುದು ಬಹು​ತೇಕ ಖಚಿತವಾಗಿದೆ ಎಂದು ಬಿಸಿ​ಸಿಐ ಅಧಿ​ಕಾ​ರಿ​ಯೊಬ್ಬರು ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದ​ರ್ಶನದ ವೇಳೆ ಸುಳಿವು ನೀಡಿದ್ದಾರೆ. 

‘ಟಿ20 ವಿಶ್ವ​ಕಪ್‌ನ ಭವಿಷ್ಯದ ಬಗ್ಗೆ ಐಸಿಸಿ ಅಧಿ​ಕೃತ ನಿರ್ಧಾರ ಪ್ರಕ​ಟಿ​ಸು​ವು​ದನ್ನೇ ಬಿಸಿ​ಸಿಐ ಕಾಯುತ್ತಿದೆ. ಯುಎಇ ಇಲ್ಲವೇ ಶ್ರೀಲಂಕಾ​ದಲ್ಲಿ ಟೂರ್ನಿ ನಡೆ​ಸಲು ಚಿಂತನೆ ನಡೆ​ಸ​ಲಾ​ಗಿದೆ. ಎಲ್ಲೇ ನಡೆ​ದರೂ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯ​ಗಳು ನಡೆ​ಯ​ಲಿವೆ. ಮುಂಬೈ​ನಲ್ಲಿ 4 ಕ್ರೀಡಾಂಗಣಗಳಿ​ರುವ ಕಾರಣ, ಅಲ್ಲೇ ನಡೆ​ಸಿ​ದ್ದರೆ ಅನು​ಕೂ​ಲ​ವಾ​ಗು​ತ್ತಿತ್ತು. ಆದರೆ ಸದ್ಯದ ಪರಿಸ್ಥಿ​ತಿ​ಯಲ್ಲಿ ಭಾರ​ತ​ದಲ್ಲಿ ಟೂರ್ನಿ ನಡೆ​ಸುವುದು ಅಸಾ​ಧ್ಯ’ ಎಂದು ಅಧಿ​ಕಾರಿ ತಿಳಿ​ಸಿ​ದ್ದಾರೆ.

ಇನ್ನೊಂದು ವರದಿಯ ಪ್ರಕಾರ ದಕ್ಷಿಣ ಭಾರತದಲ್ಲಿ ಅಂದರೆ ಬೆಂಗಳೂರು ಹಾಗೂ ಚೆನ್ನೈನಲ್ಲಿ ಟೂರ್ನಿ ಆಯೋಜಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಶ್ರೀಲಂಕಾ ಈಗಾಗಲೇ ತಾವು ಟೂರ್ನಿ ಆಯೋಜಿಸಲು ಸಿದ್ಧವೆಂದು ಹೇಳಿಕೆ ನೀಡಿತ್ತು. ಸೋಮವಾರವಷ್ಟೇ ಶ್ರೀಲಂಕಾ ದೇಶಾದ್ಯಂತ ಲಾಕ್‌ಡೌನ್ ತೆರವುಗೊಳಿಸಿದೆ.

ಸಾರ್ವಕಾಲಿಕ ಶ್ರೇಷ್ಠ IPL ತಂಡ ಪ್ರಕಟಿಸಿದ ಎಬಿ ಡಿವಿಲಿಯರ್ಸ್..!

ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಒಂದು ವೇಳೆ ಮುಂದೂಡಲ್ಪಟ್ಟರೆ, ಆ ಸಮಯದಲ್ಲಿ ಐಪಿಎಲ್ ಆಯೋಜಿಸಬಹುದು ಎನ್ನುವುದು ಬಿಸಿಸಿಐ ಲೆಕ್ಕಾಚಾರವಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡಾ ಈ ವರ್ಷ ಶತಾಯಗತಾಯ ಐಪಿಎಲ್ ನಡಿಸಿಯೇ ಸಿದ್ದ ಎನ್ನುವ ಮಾತುಗಳನ್ನಾಡಿದ್ದಾರೆ.