Asianet Suvarna News Asianet Suvarna News

ಪ್ರಥಮ ದರ್ಜೆ ಕ್ರಿಕೆಟಿಗರಿಗೆ ಕಾಂಟ್ರಾಕ್ಟ್ ಸಿಸ್ಟಮ್; ಗಂಗೂಲಿ ದಿಟ್ಟ ನಿರ್ಧಾರ!

ದೇಸಿ ಕ್ರಿಕೆಟಿಗರ ವೇತನ ಹೆಚ್ಚಿಸುವ ಭರವಸೆ ನೀಡಿದ್ದ ಸೌರವ್ ಗಂಗೂಲಿ ಇದೀಗ ಕಾರ್ಯರೂಪಕ್ಕೆ ತರಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಪ್ರಥಮ ದರ್ಜೆ ಕ್ರಿಕೆಟಿಗರಿಗೆ ಒಪ್ಪಂದದ ವ್ಯವಸ್ಥೆ ಜಾರಿಗೆ ಬರಲಿದೆ. 

contract system implemented to first class cricket says sourav ganguly
Author
Bengaluru, First Published Oct 29, 2019, 6:05 PM IST

ಮುಂಬೈ(ಅ.29): ಟೀಂ ಇಂಡಿಯಾ ಪ್ರತಿನಿಧಿಸುವ ಕ್ರಿಕೆಟಿಗರಿಗೆ ವಾರ್ಷಿಕ ಒಪ್ಪಂದದ ಪ್ರಕಾರ ವೇತನ ನೀಡಲಾಗುತ್ತೆ. ಎ, ಬಿ,ಸಿ ವಿಭಾಗದಲ್ಲಿ ಆಟಗಾರರು ವೇತನ ಪಡೆಯುತ್ತಾರೆ. ಆದರೆ ಪ್ರಥಮ ದರ್ಜೆ ಕ್ರಿಕೆಟಿಗರ ವೇತನ, ಪಂದ್ಯದ ಸಂಭಾವನೆ, ಭತ್ಯೆಗಳು ತೀರಾ ಕಡಿಮೆ. ಇದೀಗ ದೇಸಿ ಕ್ರಿಕೆಟಿಗರು ವೇತನದ ಸ್ಥಿತಿಯನ್ನು ಸಂಪೂರ್ಣ ಬದಲಾಯಿಸಲು ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಮುಂದಾಗಿದ್ದಾರೆ.

ಇದನ್ನೂ ಓದಿ: ICC ಖಜಾನೆಗೆ ಕೈ ಹಾಕಿದ ಗಂಗೂಲಿ; ಬೆಚ್ಚಿ ಬಿತ್ತು ಮಂಡಳಿ!

ಪ್ರಥಮ ದರ್ಜೆ ಕ್ರಿಕೆಟಿಗರಿಗೂ ವಾರ್ಷಿಕ ಒಪ್ಪಂದ ವ್ಯವಸ್ಥೆ, ಪಂದ್ಯದ ಭತ್ಯೆ, ಇಂಜುರಿ ಹಾಗೂ ಆರೋಗ್ಯಕ್ಕೆ ವೇತ ಸೇರಿದಂತೆ ಹಲವು ಬದಲಾವಣೆ ತರಲು ಗಂಗೂಲಿ ಮುಂದಾಗಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟಿಗರೂ ಆರ್ಥಿಕ ಭದ್ರತೆ ನೀಡುವ ಸಲುವಾಗಿ ಬಿಸಿಸಿಐ ಹೊಸ ಮಾಡೆಲ್ ಅನುಸರಿಸಲಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: ಗಂಗೂಲಿಗೆ BCCI ಅಧ್ಯಕ್ಷ ಪಟ್ಟ; ಕೊನೆಗೂ ಪ್ರತಿಕ್ರಿಯೆ ನೀಡಿದ ರವಿ ಶಾಸ್ತ್ರಿ!

ಹೊಸ ಮಾದರಿ ಕರುಡು ಸಿದ್ಧಪಡಿಸುವಂತೆ ಬಿಸಿಸಿಐ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಣಕಾಸು ವಿಭಾಗದ ಜೊತೆ ಚರ್ಚೆ ಮಾಡಲಾಗಿದೆ. ಸದ್ಯ ದೀಪಾವಳಿ ರಜೆ ಇರವುದರಿಂದ ಮುಂದಿನ ವಾರ ಹೊಸ ಕಾಂಟ್ರಾಕ್ಟ್ ಸಿಸ್ಟಮ್ ಕುರಿತ ಸ್ಪಷ್ಟ ಮಾಹಿತಿ ಸಿಗಲಿದೆ. 

ಸದ್ಯ ಪ್ರಥಮ ದರ್ಜೆ ಕ್ರಿಕೆಟಿಗ ವಾರ್ಷಿಕವಾಗಿ ಗರಿಷ್ಠ 25 ರಿಂದ 30 ಲಕ್ಷ ರೂಪಾಯಿ( ಆಡಿದ ಪಂದ್ಯಗಳ ಆಧಾರದಲ್ಲಿ) ಪಡೆಯುತ್ತಿದ್ದಾರೆ. ಪ್ರಥಮ ದರ್ಜೆ ಪ್ರತಿ ಪಂದ್ಯದ ಸಂಭಾವನೆ 35,000 ರೂಪಾಯಿ. ಇದೀಗ ಒಪ್ಪಂದದ ವ್ಯವಸ್ಥೆ ಜಾರಿಯಾದಲ್ಲಿ, ಆಟಗಾರರು ಪ್ರದರ್ಶನ ಆಧಾರದಲ್ಲಿ ಎ,ಬಿ,ಸಿ ವಿಭಾಗದಲ್ಲಿ ಸಂಭಾವನೆ ಪಡೆಯಲಿದ್ದಾರೆ. 

Follow Us:
Download App:
  • android
  • ios