ಮುಂಬೈ(ಜು.05): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ವಿರಾಟ್ ಕೊಹ್ಲಿ ಮೇಲೆ ಸ್ವಹಿತಾಸಕ್ತಿ ಸಂಘರ್ಷ ಆರೋಪ ಮಾಡಲಾಗಿದೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಸದಸ್ಯ ಸಂಜೀವ್ ಗುಪ್ತಾ ಬಿಸಿಸಿಐ ಎಥಿಕ್ಸ್ ಆಫೀಸರ್‌ಗೆ ಪತ್ರ ಬರೆದಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ ಲೋಧ ಸಮಿತಿ ಶಿಫಾರಸಿನ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

ವಿಡಿಯೋ ಮೂಲಕ ಸಂಚಲನ ಮೂಡಿಸಿದ ರನ್‌ ಮಷಿನ್‌ ವಿರಾಟ್‌ ಕೊಹ್ಲಿ..!..

ಉದ್ಯಮದಲ್ಲಿ ವಿರಾಟ್ ಕೊಹ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ಕ್ಷೇತ್ರದಲ್ಲಿ ವಿರಾಟ್ ಕೊಹ್ಲಿ ಹಣ ಹೂಡಿಕೆ ಮಾಡಿ ಆದಾಯ ಗಳಿಸುತ್ತಿದ್ದಾರೆ. ಇತ್ತ ಟೀಂ ಇಂಡಿಯಾ ನಾಯಕನಾಗಿ ಬಿಸಿಸಿಐನಿಂದ ಆದಾಯ ಪಡೆಯುತ್ತಿದ್ದಾರೆ. ವಿರಾಟ್ ಕೊಹ್ಲಿ ಬಿಸಿಸಿಐ ನಿಯಮ 38(4)ರ ಉಲ್ಲಂಘನೆ ಮಾಡಿದ್ದಾರೆ. 

ಆಸ್ಟ್ರೇಲಿಯಾ ರಸ್ತೆಗಳಿಗೆ ಕಪಿಲ್ ದೇವ್, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಹೆಸರು..!...

ವಿರಾಟ್ ಕೊಹ್ಲಿ ಸ್ಪೋರ್ಟ್ಸ್ LLP ಕಂಪನಿ, ಕಾರ್ನರ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ವಿರಾಟ್ ಕೊಹ್ಲಿ ಹಣ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗಷ್ಟೇ ರಾಹುಲ್ ದ್ರಾವಿಡ್ ಮೇಲೂ ಸಂಜೀವ್ ಗುಪ್ತ ಸ್ವಹಿತಾಸಕ್ತಿ ಆರೋಪ ಮಾಡಿದ್ದರು. ಬಳಿಕ ವಿಚಾರಣೆ ಎದುರಿಸಿದ ದ್ರಾವಿಡ್‌ಗೆ ಬಿಸಿಸಿಐ ಕ್ಲೀನ್ ಚಿಟ್ ನೀಡಿತ್ತು.