ಕಾಮನ್‌ವೆಲ್ತ್ ಗೇಮ್ಸ್ ಕ್ರಿಕೆಟ್‌ನಲ್ಲಿ ಇಂದು ಬದ್ಧವೈರಿಗಳ ಹೋರಾಟ. ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡ ಇಂದು ಮುಖಾಮುಖಿಯಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಬರ್ಮಿಂಗ್‌ಹ್ಯಾಮ್(ಜು.31): ಕಾಮನ್‌ವೆಲ್ತ್ ಗೇಮ್ಸ್ ಕ್ರಿಕೆಟ್ ಟೂರ್ನಿಯನ್ನು ಸೋಲಿನೊಂದಿಗೆ ಆರಂಭಿಸಿದ ಭಾರತ ಮಹಿಳಾ ತಂಡಕ್ಕೆ ಇಂದು ಮತ್ತೊಂದು ಅಗ್ನಿಪರೀಕ್ಷೆ. ಇಂದು ಗೆಲ್ಲಲೇಬೇಕಾದ ಪಂದ್ಯ. ಪಾಕಿಸ್ತಾನ ವಿರುದ್ದದ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ.
ಭಾರತ ಮಹಿಳಾ ತಂಡ:
ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್(ನಾಯಕಿ), ಜೆಮಿಮಾ ರಾಡ್ರಿಗಸ್, ಸಬ್ಬಿನೇನಿ ಮೇಘನಾ, ದೀಪ್ತಿ ಶರ್ಮಾ, ರಾಧಾ ಯಾದವ್, ಸ್ನೇಹ ರಾಣಾ, ಮೇಘನಾ ಸಿಂಗ್, ರೇಣುಕಾ ಸಿಂಗ್
ಪಾಕಿಸ್ತಾನ ಮಹಿಳಾ ತಂಡ
ಇರಾಮ್ ಜಾವೇದ್, ಮುನೀಬಾ ಅಲಿ(ಡಬ್ಲ್ಯೂ), ಒಮೈಮಾ ಸೊಹೈಲ್, ಬಿಸ್ಮಾ ಮರೂಫ್(ಸಿ), ಅಲಿಯಾ ರಿಯಾಜ್, ಆಯೇಶಾ ನಸೀಮ್, ಕೈನಾತ್ ಇಮ್ತಿಯಾಜ್, ಫಾತಿಮಾ ಸನಾ, ತುಬಾ ಹಸನ್, ಡಯಾನಾ ಬೇಗ್, ಅನಮ್ ಅಮೀನ್
ಜಿಂಜಾಬ್ವೆ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ, ಧವನ್ ನಾಯಕ, ಕೊಹ್ಲಿಗೆ ರೆಸ್ಟ್!
ಮಳೆಯಿಂದ ಪಂದ್ಯ ವಿಳಂಬವಾದ ಕಾರಣ ಪಂದ್ಯದ ಓವರ್ ಕಡಿತಗೊಳಿಸಲಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಪಂದ್ಯವನ್ನು 18 ಓವರ್‌ಗೆ ಸಮೀತಗೊಳಿಸಲಾಗಿದೆ. ಟಾಸ್ ಬಳಿಕ ಮಾತನಾಡಿದ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್, ಟಾಸ್ ಗೆದ್ದರೆ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೇವು. ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಾರಣ ನಮ್ಮ ಪ್ಲಾನ್ ಪ್ರಕಾರ ಯೋಜನೆ ರೂಪಿಸಲು ಸಾಧ್ಯವಾಗಿದೆ. ಪಾಕಿಸ್ತಾನ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿ ರನ್ ಚೇಸ್ ಮಾಡಲಿದ್ದೇವೆ ಎಂದು ಕೌರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ಪಾಕಿಸ್ತಾನ ನಾಯಕಿ ಬಿಸ್ಮಾ ಮಾರೂಫ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಉಳಿಯಬೇಕಾದರೆ ಇಂದಿನ ಪಂದ್ಯದ ಫಲಿತಾಂಶ ಪೂರಕವಾಗಿರಬೇಕು. ಹೀಗಾಗಿ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಲಿದ್ದೇವೆ. ಮೊದಲ ಪಂದ್ಯದಲ್ಲಿ ಬಾರ್ಬಡೋಸ್ ವಿರುದ್ದ ಸೋಲು ಅನುಭವಿಸಿದ್ದೇವೆ. ಈ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಎಂದು ಬಿಸ್ಮಾ ಹೇಳಿದ್ದಾರೆ.
Ind vs WI ಮಾರ್ಟಿನ್ ಗಪ್ಟಿಲ್ ದಾಖಲೆ ಮುರಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ..!
ಭಾನುವಾರ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮಾತ್ರವಲ್ಲ, ಭಾರತೀಯರ ಪಾಲಿಗೆ ರಣರೋಚಕ ದಿನ. ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ ಪ್ರತಿ ಭಾರಿ ಅತ್ಯಂತ ರೋಚಕ ಹಾಗೂ ತೀವ್ರ ಪೈಪೋಟಿಯಿಂದ ಕೂಡಿರುತ್ತದೆ. ಆದರೆ ಪಂದ್ಯಕ್ಕೂ ಮೊದಲು ತುಂತುರು ಮಳೆಯಾಗಿದೆ. ಹೀಗಾಗಿ ಪಂದ್ಯದ ನಡುವೆಯೂ ಮಳೆ ವಕ್ಕರಿಸುವ ಸಾಧ್ಯತೆ ಇದೆ.
