ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ತಲುಪಿವೆ. ದುಬೈನಲ್ಲಿ ನಡೆಯುವ ಕೊನೆಯ ಪಂದ್ಯವು ಗುಂಪಿನಲ್ಲಿ ಯಾರು ಅಗ್ರಸ್ಥಾನ ಪಡೆಯುತ್ತಾರೆಂದು ನಿರ್ಧರಿಸುತ್ತದೆ. ಭಾರತದ ಬ್ಯಾಟ್ಸ್‌ಮನ್‌ಗಳು ಸ್ಪಿನ್ ಬೌಲಿಂಗ್ ಎದುರಿಸಲು ಸಿದ್ಧರಾಗಬೇಕಿದೆ. ವಿರಾಟ್ ಕೊಹ್ಲಿ 300 ಏಕದಿನ ಪಂದ್ಯಗಳನ್ನು ಆಡಿದ ಭಾರತದ ಏಳನೇ ಆಟಗಾರನೆನಿಸಲಿದ್ದಾರೆ. ರೋಹಿತ್ ಮತ್ತು ಶಮಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. (50 ಪದಗಳು)
ದುಬೈ: ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಈಗಾಗಲೇ ಸೆಮಿಫೈನಲ್‌ಗೆ ಅಧಿಕೃತ ಪ್ರವೇಶ ಪಡೆದಿರುವ ಭಾರತ, ನಾಕೌಟ್ ಹಣಾಹಣಿಗೂ ಮುನ್ನ ಭಾನುವಾರ ನ್ಯೂಜಿಲೆಂಡ್‌ನ ಅಗ್ನಿಪರೀಕ್ಷೆ ಎದುರಿಸಲಿದೆ. ಇದು 'ಎ' ಗುಂಪಿನ ಕೊನೆ' ಪಂದ್ಯ. ಈಗಾಗಲೇ 2 ತಂಡಗಳೂ ಸೆಮಿಫೈನಲ್ ಗೇರಿರುವುದರಿಂದ ದುಬೈನಲ್ಲಿ ನಡೆಯಲಿರುವ ಈ ಪಂದ್ಯ ಔಪಚಾರಿಕ ಎನಿಸಿದೆ.
ಆದರೆ ಗುಂಪು ಹಂತದ ಅಗ್ರಸ್ಥಾನಿಯಾನಿ ಯಾರು ಎಂಬುದನ್ನು ಈ ಪಂದ್ಯ ನಿರ್ಧರಿಸಲಿದೆ. ಸದ್ಯ ಎರಡು ತಂಡಗಳು ಆಡಿರುವ 2 ಪಂದ್ಯ ಗಳಲ್ಲಿ ತಲಾ 4 ಅಂಕ ಹೊಂದಿದೆ. ನೆಟ್ ರನ್ ರೇಟ್ ಆಧಾರದಲ್ಲಿ ನ್ಯೂಜಿಲೆಂಡ್ (+0.863) ಅಗ್ರಸ್ಥಾನ, ಭಾರತ(+0.647) 2ನೇ ಸ್ಥಾನದಲ್ಲಿದೆ. ಭಾನುವಾರ ಗೆಲ್ಲುವ ತಂಡ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೇರಲಿದೆ.
ಸ್ಪಿನ್ನರ್ಸ್ ಎದುರಿಸಲು ಕಸರತ್ತು: ಭಾರತ ತಂಡ ಆಡಿರುವ ಎರಡು ಪಂದ್ಯಗಳಲ್ಲೂ ಉತ್ತಮ ಆಟವಾಡಿ ಗೆದ್ದರೂ, ತಂಡದಲ್ಲಿ ಸಮಸ್ಯೆ ಇಲ್ಲ ವೆಂದೇನಲ್ಲ, ಬ್ಯಾಟರ್‌ಗಳು ಅಬ್ಬರಿಸಿದ ಹೊರ ತಾಗಿಯೂ ಸ್ಪಿನ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ ಎಂಬುದು ಸತ್ಯ. ಬಾಂಗ್ಲಾ ಪಾಕಿಸ್ತಾನದ ಸ್ಪಿನ್ನರ್‌ಗಳ ವಿರುದ್ದ ಭಾರತೀಯರು ದೊಡ್ಡ ಮಟ್ಟಿನ ಯಶಸ್ಸು ಪಡೆದಿರಲಿಲ್ಲ. ಮಿಚೆಲ್ ಸ್ಯಾಂಟರ್, ಮೈಕಲ್ ಬ್ರೇಸ್‌ವೆಲ್ ನ್ಯೂಜಿಲೆಂಡ್ ತಂಡದಲ್ಲಿರುವ ಶ್ರೇಷ್ಠ ಸ್ಪಿನ್ನರ್ ಗಳು. ಅಲ್ಲದೆ ಭಾರತಕ್ಕೆ ಸೆಮಿಫೈನಲ್‌ನಲ್ಲಿ ಎದುರಾಗಬಹುದಾಗ ದ.ಆಫ್ರಿಕಾ, ಆಸ್ಟ್ರೇಲಿಯಾ ತಂಡದಲ್ಲೂ ಉತ್ತಮ ಸ್ಪಿನ್ ಬೌಲರ್‌ಗಳಿದ್ದಾರೆ. ಹೀಗಾಗಿ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತ ಸ್ಪಿನ್ನರ್‌ಗಳನ್ನು ಎದುರಿಸಲು ತೀವ್ರ ಕಸರತ್ತು ನಡೆಸಬೇಕಿದೆ.
300 ಏಕದಿನ ಪಂದ್ಯಗಳ ಮೈಲುಗಲ್ಲಿನತ್ತ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿ ದರೆ, ಏಕದಿನದಲ್ಲಿ 300 ಪಂದ್ಯ ಆಡಿದ ವಿಶೇಷ ದಾಖಲೆ ಬರೆಯಲಿದ್ದಾರೆ. ಈ ಸಾಧನೆ ಮಾಡಿದ ಭಾರತದ 7ನೇ, ವಿಶ್ವದ 22ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸಚಿನ್ 463, ಎಂ.ಎಸ್.ಧೋನಿ 347, ದ್ರಾವಿಡ್ 340, ಅಜರುದ್ದೀನ್ 334, ಗಂಗೂಲಿ 308, ಯುವರಾಜ್ 301 ಪಂದ್ಯಗಳನ್ನಾಡಿದ್ದಾರೆ.
ಬದಲಾವಣೆ ನಿರೀಕ್ಷೆ: ಪಂದ್ಯದಲ್ಲಿ ಕೆಲ ಬದಲಾವಣೆ ನಿರೀಕ್ಷಿಸಬಹುದು. ನಾಯಕ ರೋಹಿತ್, ವೇಗಿ ಶಮಿ ಫಿಟ್ ಆಗಿದ್ದರೂ ಅವರಿಗೆ ವಿಶ್ರಾಂತಿ ಸಿಗುವ ಸಾಧ್ಯತೆಯಿದೆ. ಹೀಗಾದರೆ ರಿಷಭ್, ಅರ್ಶ್‌ದೀಪ್ ಸಿಂಗ್‌ಗೆ ಅವಕಾಶ ಸಿಗಬಹುದು. ಶುಭಮನ್ ಗಿಲ್ ತಂಡ ಮುನ್ನಡೆಸಬಹುದು.
