ಮುಂಬೈ(ಜ.14): ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಕಾಲೆಳೆದು ಹಲವು ತಿಂಗಳು ಬಳಿಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಕ್ಕ ಉತ್ತರ ನೀಡಿದ್ದಾರೆ.

2 ಪಿಂಕ್‌ ಬಾಲ್‌ ಟೆಸ್ಟ್‌ಗೆ ಕ್ರಿಕೆಟ್‌ ಆಸ್ಪ್ರೇ​ಲಿ​ಯಾ ಮನ​ವಿ!

 ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಆಸ್ಟ್ರೇಲಿಯಾದಲ್ಲಿ ಎಲ್ಲಿ ಬೇಕಿದ್ದರೂ ಹಗಲು- ರಾತ್ರಿ ಟೆಸ್ಟ್ ಆಡಲು ಸಿದ್ಧ ಎಂದು ತಿಳಿಸಿದರು. ಕೆಲವು ತಿಂಗಳುಗಳ ಹಿಂದೆ ಪೈನ್, ‘ಭಾರತ ತಂಡ ಆಸ್ಟ್ರೇಲಿಯಾ ದಲ್ಲಿ ಹಗಲು-ರಾತ್ರಿ ಟೆಸ್ಟ್ ಆಡಬೇಕಿದ್ದರೆ ಕೊಹ್ಲಿ ಅನು ಮತಿ ನೀಡಬೇಕು. ಪಂದ್ಯದ ಬಗ್ಗೆ ಪ್ರಸ್ತಾಪಿಸುವಾಗ ಕೊಹ್ಲಿ ಯ ಮೂಡ್ ಚೆನ್ನಾಗಿರಬೇಕು’ ಎಂದಿದ್ದರು. ಇದಕ್ಕೆ ಉತ್ತರಿಸಿದ ವಿರಾಟ್, ‘ಸವಾಲಿಗೆ ನಾವು ಸಿದ್ಧರಿದ್ದೇವೆ. ಬ್ರಿಸ್ಬೇನ್, ಪರ್ತ್ ಎಲ್ಲಿಬೇಕಿದ್ದರೂ ಪಂದ್ಯ ನಡೆಸಲಿ. ನಾವು ಆಡುತ್ತೇವೆ’ ಎಂದರು.

ಭಾರತದ ಪ್ರತಿ ಸರ​ಣಿ​ಯಲ್ಲೂ ಹಗ​ಲು-ರಾತ್ರಿ ಟೆಸ್ಟ್‌?

ಕಳೆದ ವರ್ಷ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡಿತ್ತು. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಡೇ ಅಂಡ್ ನೈಟ್ ಪಂದ್ಯವನ್ನಾಡಲು ವಿರಾಟ್ ಕೊಹ್ಲಿಯನ್ನು ಒಪ್ಪಿಸಿದ್ದರು. ಭಾರತ ಆಡಿದ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು.