Asianet Suvarna News Asianet Suvarna News

ಭಾರತದ ಪ್ರತಿ ಸರ​ಣಿ​ಯಲ್ಲೂ ಹಗ​ಲು-ರಾತ್ರಿ ಟೆಸ್ಟ್‌?

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಅಭೂತಪೂರ್ವ ಯಶಸ್ಸು ಗಳಿಸಿದ ಬೆನ್ನಲ್ಲೇ, ಇದೀಗ ಟೀಂ ಇಂಡಿಯಾ ಆಡುವ ಎಲ್ಲಾ ಟೆಸ್ಟ್ ಸರಣಿಯ ಒಂದು ಪಂದ್ಯವನ್ನು ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಚಿಂತನೆ ನಡೆಸುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

BCCI President Sourav Ganguly wants Team India to play pink ball Tests in every Series
Author
New Delhi, First Published Dec 4, 2019, 2:34 PM IST

ನವ​ದೆ​ಹ​ಲಿ[ಡಿ.04]: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಯ ಬೆಂಬ​ಲ​ದೊಂದಿಗೆ ತಂಡ ಆಡುವ ಪ್ರತಿ ಸರ​ಣಿ​ಯ​ಲ್ಲೂ ಹಗ​ಲು-ರಾತ್ರಿ ಟೆಸ್ಟ್‌ ಆಯೋ​ಜಿ​ಸುವ ಇಂಗಿತವನ್ನು ಬಿಸಿ​ಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ವ್ಯಕ್ತ​ಪ​ಡಿ​ಸಿದ್ದಾರೆ. 

ಪಿಂಕ್ ಬಾಲ್‌ ಟೆಸ್ಟ್ ಯಶಸ್ವಿ ಬೆನ್ನಲ್ಲೆ ಅಚ್ಚರಿಯ ಹೇಳಿಕೆ ನೀಡಿದ ದಾದಾ

ಬಾಂಗ್ಲಾ​ದೇಶ ವಿರುದ್ಧ ಇತ್ತೀ​ಚೆ​ಗಷ್ಟೇ ಭಾರತ ತನ್ನ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ​ವನ್ನು ಆಡಿತ್ತು. ಕೋಲ್ಕ​ತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆ​ದಿದ್ದ ಪಂದ್ಯ ಅಭೂತಪೂರ್ವ ಯಶಸ್ಸು ಗಳಿ​ಸಿತ್ತು. ‘ಹ​ಗ​ಲು-ರಾತ್ರಿ ಪಂದ್ಯಕ್ಕೆ ಸಿಕ್ಕ ಪ್ರತಿ​ಕ್ರಿಯೆ ಗಮ​ನಿ​ಸಿದ ಬಳಿಕ ಟೀಂ ಇಂಡಿಯಾ ಆಡು​ವ ಪ್ರತಿ ಸರ​ಣಿ​ಯಲ್ಲೂ ಪಿಂಕ್‌ ಬಾಲ್‌ ಟೆಸ್ಟ್‌ ಇರ​ಬೇಕು. ಪ್ರತಿ ಪಂದ್ಯ​ವನ್ನು ಹಗ​ಲು​-ರಾತ್ರಿ ಮಾದ​ರಿ​ಯಲ್ಲಿ ನಡೆ​ಸು​ವುದು ಕಷ್ಟ. ಆದರೆ ಸರ​ಣಿ​ಯಲ್ಲಿ ಒಂದು ಪಂದ್ಯವನ್ನು ಹಗ​ಲು​-ರಾತ್ರಿ ಮಾದ​ರಿ​ಯಲ್ಲಿ ಆಯೋ​ಜಿ​ಸ​ಬೇ​ಕಿದೆ. ಟೆಸ್ಟ್‌ ಕ್ರಿಕೆಟ್‌ ಜನ​ಪ್ರಿ​ಯ​ಗೊ​ಳಿ​ಸಲು ಅಂತಹ ಪ್ರಯೋ​ಗಗಳ ಅಗ​ತ್ಯ​ವಿದೆ’ ಎಂದು ಗಂಗೂಲಿ ಅಭಿಪ್ರಾಯಿ​ಸಿ​ದ್ದಾರೆ.

ನನಗೇನಾದರೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಂದಿದ್ದರೆ..? ಹೃದಯಗೆದ್ದ ವಿರಾಟ್ ಮಾತು

ಈಡನ್‌ ಗಾರ್ಡನ್ಸ್‌ನಲ್ಲಿ ಪಿಂಕ್‌ ಬಾಲ್‌ ಪಂದ್ಯ ಆಯೋ​ಜಿ​ಸಿದ ಅನು​ಭ​ವವನ್ನು ಭಾರ​ತದ ಇತರ ರಾಜ್ಯಗಳ ಕ್ರಿಕೆಟ್‌ ಸಂಸ್ಥೆಗಳೊಂದಿಗೆ ಹಂಚಿ​ಕೊ​ಳ್ಳು​ವು​ದಾಗಿ ಗಂಗೂಲಿ ಹೇಳಿ​ದ್ದಾರೆ. ‘ಎಲ್ಲಾ ಕ್ರಿಕೆಟ್‌ ಸಂಸ್ಥೆ ಅಧಿ​ಕಾ​ರಿ​ಗ​ಳೊಂದಿಗೆ ನಾನು ಮಾತ​ನಾಡಿ, ಅನು​ಭವ ತಿಳಿ​ಸು​ತ್ತೇನೆ. ಯಾರಿಗೂ ಸಹ ಕೇವಲ 5000 ಪ್ರೇಕ್ಷ​ಕರ ಎದುರು ಟೆಸ್ಟ್‌ ಕ್ರಿಕೆಟ್‌ ಆಡು​ವುದು ಇಷ್ಟವಿಲ್ಲ’ ಎಂದು ಗಂಗೂಲಿ ಹೇಳಿ​ದ್ದಾರೆ.

Follow Us:
Download App:
  • android
  • ios