ನವದೆಹಲಿ(ಫೆ.25): ಮತ್ತೊಮ್ಮೆ ವಿರಾಟ್ ಕೊಹ್ಲಿ ವರ್ಸಸ್ ಫಾಫ್ ಡುಪ್ಲೆಸಿಸ್ ನಡುವಿನ ಕಾದಾಟಕ್ಕೆ ಏಷ್ಯಾ XI ಹಾಗೂ ವಿಶ್ವ XI ನಡುವಿನ ಪಂದ್ಯ ಸಾಕ್ಷಿಯಾಗುವ ಸಾಧ್ಯತೆಯಿದೆ. ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜೀಬ್‌-ಉರ್ ರೆಹಮಾನ್ 100ನೇ ಜನ್ಮದಿನದ ಸ್ಮರಣಾರ್ಥ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯು ಮಾರ್ಚ್ 18 ಹಾಗೂ 21ರಂದು 2 ಪಂದ್ಯವನ್ನು ಆಯೋಜಿಸಿದೆ. ಈ ಸರಣಿಯಲ್ಲಿ ಏಷ್ಯಾ XI ಪರ ಟೀಂ ಇಂಡಿಯಾ 6 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಆದರೆ ಏಷ್ಯಾ XI ತಂಡದಲ್ಲಿ ಪಾಕಿಸ್ತಾನದ ಯಾವೊಬ್ಬ ಆಟಗಾರನಿಗೂ ಅವಕಾಶ ನೀಡಿಲ್ಲ.

ಟೀಂ ಇಂಡಿಯಾ ಹೀನಾಯ ಸೋಲಿಗೆ ಕಾರಣವೇನು..?

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಸೇರಿದಂತೆ ಮೊಹಮ್ಮದ್ ಶಮಿ, ಶಿಖರ್ ಧವನ್, ಕುಲ್ದೀಪ್ ಯಾಧವ್, ಕೆ.ಎಲ್. ರಾಹುಲ್ ಹಾಗೂ ರಿಷಭ್ ಪಂತ್ ಅವರಿಗೆ ಪಾಲ್ಗೊಳ್ಳಲು ಅನುಮತಿ ನೀಡಿದ್ದಾರೆ. ಆದರೆ ಮಾರ್ಚ್18ರಂದು ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನಾಡಲಿದೆ. 

ಏಷ್ಯಾ XI ತಂಡದ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು, ತಂಡದಲ್ಲಿ ಪಾಕಿಸ್ತಾನ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಇನ್ನುಳಿದಂತೆ ಲಂಕಾದ ಲಸಿತ್ ಮಾಲಿಂಗ, ತಿಸಾರ ಪೆರೆರಾ,  ಆಪ್ಘಾನಿಸ್ತಾನದ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಹಾಗೆ ನೇಪಾಳದ ಸಂದೀಪ್ ಲ್ಯಾಮಿಚ್ಚಾನೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಏಷ್ಯಾ-ವಿಶ್ವ ಇಲೆ​ವನ್‌ ಟಿ20 ಸರ​ಣಿಗೆ ಧೋನಿ?

ಬಿಸಿಬಿ ಆಯೋಜಿಸಿರುವ ಟೂರ್ನಿಯಲ್ಲಿ  ಕೊಹ್ಲಿ ಪಾಲ್ಗೊಂಡರು ಕೇವಲ ಒಂದು ಪಂದ್ಯವನ್ನಷ್ಟೇ ಆಡಲಿದ್ದಾರೆ. ರಾಹುಲ್ ಸಹಾ ಒಂದು ಪಂದ್ಯವನ್ನಷ್ಟೇ ಆಡಲಿದ್ದಾರೆ. ಆ ಪಂದ್ಯದಲ್ಲಿ ಕೊಹ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಇನ್ನು ವಿಶ್ವ XI ತಂಡಕ್ಕೆ ಫಾಫ್ ಡುಪ್ಲೆಸಿಸ್ ನಾಯಕರಾಗಿ ನೇಮಕವಾಗಿದ್ದಾರೆ. ಇನ್ನುಳಿದಂತೆ ಕ್ರಿಸ್ ಗೇಲ್, ಅಲೆಕ್ಸ್ ಹೇಲ್ಸ್, ಕಿರನ್ ಪೊಲ್ಲಾರ್ಡ್, ರಾಸ್ ಟೇಲರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ತಂಡಗಳು ಹೀಗಿವೆ:

ಏಷ್ಯಾ XI: ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಶಿಖರ್ ಧವನ್, ತಮೀಮ್ ಇಕ್ಬಾಲ್, ಲಿಟನ್ ದಾಸ್, ಮುಷ್ಪಿಕುರ್ ರಹೀಮ್, ತಿಸಾರ ಪೆರೆರಾ, ರಶೀದ್ ಖಾನ್, ಮುಷ್ತಾಫಿಜುರ್ ರೆಹಮಾನ್, ಸಂದೀಪ್ ಲ್ಯಾಮಿಚ್ಚಾನೆ, ಲಸಿತ್ ಮಾಲಿಂಗ, ಮುಜೀಬ್ ಉರ್ ರೆಹಮಾನ್

ವಿಶ್ವ XI: ಅಲೆಕ್ಸ್ ಹೇಲ್ಸ್, ಕ್ರಿಸ್ ಗೇಲ್, ಫಾಫ್ ಡುಪ್ಲೆಸಿಸ್(ನಾಯಕ), ನಿಕೋಲಸ್ ಪೂರನ್, ರಾಸ್ ಟೇಲರ್, ಜಾನಿ ಬೇರ್‌ಸ್ಟೋವ್, ಕಿರನ್ ಪೊಲ್ಲಾರ್ಡ್, ಆದಿಲ್ ರಶೀದ್, ಶೆಲ್ಡನ್ ಕಾಟ್ರೆಲ್, ಲುಂಗಿ ಎಂಗಿಡಿ, ಆಂಡ್ರ್ಯೂ ಟೈ, ಮಿಚೆಲ್ ಮೆಕ್ಲೆನಾಘನ್
(ಕೋಚ್: ಟಾಮ್ ಮೂಡಿ)