ಏಷ್ಯಾ-ವಿಶ್ವ ಇಲೆ​ವನ್‌ ಟಿ20 ಸರ​ಣಿಗೆ ಧೋನಿ?

ಟೀಂ ಇಂಡಿಯಾದಿಂದ ದೂರ ಉಳಿದಿರುವ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ, ಮತ್ತೆ ಮೈದಾನಕ್ಕಿಳಿಯುವ ಸಾಧ್ಯತೆ ಬಹುತೇಕ ಖಚಿತವಾಗುತ್ತಿದೆ. ಏಷ್ಯಾ ಇಲೆವೆನ್ ಟಿ20 ಪಂದ್ಯದಲ್ಲಿ ಧೋನಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ಬಾಂಗ್ಲಾ ಕ್ರಿಕೆಟ್ ಮಂಡಳಿ, ಬಿಸಿಸಿಐಗೆ ಮನವಿ ಮಾಡಿದೆ.

Bangladesh request bcci to release ms dhoni for asia xi t20 series

ನವ​ದೆ​ಹ​ಲಿ(ನ.27): 2020ರ ಮಾಚ್‌ರ್‍ನಲ್ಲಿ ಬಾಂಗ್ಲಾ​ದೇ​ಶ​ದಲ್ಲಿ ನಡೆ​ಯ​ಲಿ​ರು​ವ ಏಷ್ಯಾ ಇಲೆ​ವೆನ್‌ ಹಾಗೂ ವಿಶ್ವ ಇಲೆ​ವನ್‌ ನಡು​ವಿನ ಅಂತಾ​ರಾ​ಷ್ಟ್ರೀಯ ಟಿ20 ಸರ​ಣಿ​ಯ​ಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎ​ಸ್‌ ಧೋನಿ ಆಡುವ ಸಾಧ್ಯ​ತೆ​ಯಿ​ದೆ. ಧೋನಿ ಸಹಿತ 7 ಭಾರ​ತೀ​ಯ ಆಟ​ಗಾ​ರ​ರನ್ನು ಟೂರ್ನಿಯಲ್ಲಿ ಆಡಲು ಅನು​ಮತಿ ನೀಡಬೇಕು ಎಂದು ಬಾಂಗ್ಲಾ​ ಕ್ರಿಕೆಟ್‌ ಮಂಡಳಿ (ಬಿಸಿ​ಬಿ), ಬಿಸಿಸಿಐಗೆ ಮನವಿ ಮಾಡಿ​ದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: ಮದ್ವೆವರೆಗೆ ಪುರುಷರೆಲ್ಲರೂ ಸಿಂಹ: ಧೋನಿ ಮಾತಿನ ಮೋಡಿಗೆ ಸಲಾಂ!

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಧೋನಿ, ರೋಹಿತ್‌ ಶರ್ಮಾ, ಜಸ್‌​ಪ್ರೀತ್‌ ಬೂಮ್ರಾ, ಹಾರ್ದಿಕ್‌ ಪಾಂಡ್ಯ, ಭುವ​ನೇ​ಶ್ವರ್‌ ಕುಮಾ​ರ್‌ ಹಾಗೂ ರವೀಂದ್ರ ಜಡೇಜಾರನ್ನು ಕಳ​ಹಿ​ಸಬೇಕೆಂದು ಬಿಸಿಬಿ ಮನವಿ ಮಾಡಿ​ದೆ.​ ಮಾ.18ರಿಂದ 21ರ ವರೆಗೆ 3 ದಿನಗಳ ಕಾಲ ಟೂರ್ನಿ ನಡೆ​ಯ​ಲಿದ್ದು, ಏಷ್ಯಾ ಹಾಗೂ ವಿಶ್ವ ಇಲೆ​ವನ್‌ 2 ಟಿ20 ಪಂದ್ಯ​ಗ​ಳಲ್ಲಿ ಎದು​ರಾ​ಗ​ಲಿವೆ. 2007ರಲ್ಲಿ ಏಷ್ಯಾ ಇಲೆ​ವೆನ್‌ ಹಾಗೂ ಆಫ್ರಿಕಾ ಇಲೆ​ವೆನ್‌ ನಡುವಣ ನಡೆ​ದಿದ್ದ ಟೂರ್ನಿಯಲ್ಲಿ ಧೋನಿ ಆಡಿ​ದ್ದ​ರು.​ ಅಂದು ಏಷ್ಯಾ ಇಲೆ​ನೆನ್‌ 3-0 ಅಂತರದಲ್ಲಿ ಜಯಭೇರಿ ಬಾರಿಸಿತ್ತು.

ಇದನ್ನೂ ಓದಿ: ಹೊಸ ಇನಿಂಗ್ಸ್ ಶುರು ಮಾಡಿದ ಧೋನಿ; ರಾಂಚಿಯಲ್ಲಿ ಯುವಕರಿಗೆ ಕೋಚಿಂಗ್!

2019ನೇ ಸಾಲಿನ ಐಸಿಸಿ ಏಕ​ದಿನ ವಿಶ್ವ​ಕಪ್‌ ಸೆಮಿ​ಫೈ​ನ​ಲ್‌ ಸೋಲಿನ ಬಳಿಕ ಭಾರತ ತಂಡ​ದಿಂದ ಧೋನಿ ತಾವಾ​ಗಿಯೇ ಹೊರ​ಗು​ಳಿ​ದಿ​ದ್ದಾರೆ. ಬಳಿಕ ವಿಂಡೀಸ್‌ ಪ್ರವಾ​ಸ​ದಿಂದಲೂ ಹೊರ​ಗು​ಳಿದ ಧೋನಿ, ಸೇನಾ ತರ​ಬೇ​ತಿ​ಯಲ್ಲಿ ಭಾಗ​ವ​ಹಿ​ಸಿ​ದ್ದರು. ನಂತರ ರಜೆ ವಿಸ್ತ​ರಿ​ಸಿದ ಧೋನಿ ದಕ್ಷಿಣ ಆಫ್ರಿಕಾ, ಬಾಂಗ್ಲಾ​ದೇಶ ಸರ​ಣಿ​ಯಿಂದಲೂ ಹೊರ​ಗು​ಳಿ​ದ​ರು. ಧೋನಿ ನವೆಂಬರ್‌ ತನಕ ರಜೆ​ ವಿಸ್ತ​ರಿ​ಸಿದ್ದು, ಕ್ರಿಕೆಟ್‌ ಹೊರತುಪಡಿಸಿ ಇತರೆ ಆಟಗಳನ್ನು ಆಡುವ ಮೂಲಕ ರಜೆಯ ಮಜಾದಲ್ಲಿದ್ದಾರೆ.

Latest Videos
Follow Us:
Download App:
  • android
  • ios