ರಾಹುಲ್‌ ದ್ರಾವಿಡ್‌ರ ಕೋಚಿಂಗ್‌ ಶೈಲಿಗೂ ಗೌತಮ್‌ ಗಂಭೀರ್‌ರ ಕೋಚಿಂಗ್‌ ಶೈಲಿಗೂ ವ್ಯತ್ಯಾಸವಿದೆ.: ರೋಹಿತ್ ಶರ್ಮಾ

ಭಾರತ ಹಾಗೂ ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ

Captain Rohit Sharma rates the Gautam Gambhir led coaching staff of Team India kvn

ಚೆನ್ನೈ: ಹೊಸ ಕೋಚಿಂಗ್‌ ಸಿಬ್ಬಂದಿಯ ದೃಷ್ಟಿಕೋನ ಬೇರೆ ರೀತಿ ಇದೆ. ಆದರೆ ತಂಡಕ್ಕೆ ಅದರಿಂದ ಯಾವುದೇ ತೊಂದರೆಯಿಲ್ಲ ಎಂದು ಭಾರತದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.

ಸೆ.19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ಕಠಿಣ ಅಭ್ಯಾಸ ನಡೆಸುತ್ತಿದ್ದು, ಪ್ರಧಾನ ಕೋಚ್‌ ಗೌತಮ್‌ ಗಂಭೀರ್ ಸೇರಿದಂತೆ ಹೊಸದಾಗಿ ನೇಮಕಗೊಂಡಿರುವ ಕೋಚಿಂಗ್‌ ಸಿಬ್ಬಂದಿಗೆ ಇದು ಮೊದಲ ಸವಾಲು ಎನಿಸಿದೆ.

ಈ ಸಂಬಂಧ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌, ‘ರಾಹುಲ್‌ ದ್ರಾವಿಡ್‌ರ ಕೋಚಿಂಗ್‌ ಶೈಲಿಗೂ ಗೌತಮ್‌ ಗಂಭೀರ್‌ರ ಕೋಚಿಂಗ್‌ ಶೈಲಿಗೂ ವ್ಯತ್ಯಾಸವಿದೆ. ಆದರೆ ಗಂಭೀರ್‌ ಸೇರಿದಂತೆ ಎಲ್ಲಾ ಹೊಸ ಕೋಚ್‌ಗಳು ತಂಡಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಅವರೆಲ್ಲರೂ ತಂಡದ ಅಗತ್ಯತೆಯನ್ನು ಅರಿತಿದ್ದಾರೆ’ ಎಂದರು. 

ಬಾಂಗ್ಲಾ ಟೆಸ್ಟ್‌ಗೆ ಭಾರತ ತಂಡ ಕಠಿಣ ಅಭ್ಯಾಸ; ಚೆನ್ನೈ ಟೆಸ್ಟ್‌ಗೆ ಟೀಂ ಇಂಡಿಯಾದಿಂದ 3 ಸ್ಪಿನ್ನರ್ ಕಣಕ್ಕೆ?

‘ಗಂಭೀರ್‌, ಸಹಾಯಕ ಕೋಚ್‌ ಅಭಿಷೇಕ್‌ ನಾಯರ್‌ ಜೊತೆ ನಾನು ಬಹಳ ವರ್ಷ ಆಡಿದ್ದೇನೆ. ಮಾರ್ಕೆಲ್‌ರನ್ನು ಹಲವು ಸಲ ಎದುರಿಸಿದ್ದೇನೆ. ಎಲ್ಲರೂ ತಾಂತ್ರಿಕವಾಗಿ ಬಹಳ ಅನುಭವ ಇರುವವರು. ಇನ್ನು ರ್‍ಯಾನ್‌ ಟೆನ್‌ ಡೊಶ್ಕಾಟೆ ಸಹ ತಂಡಕ್ಕೆ ಸೂಕ್ತ ನೆರವು ಒದಗಿಸಬಲ್ಲರು ಎನ್ನುವ ವಿಶ್ವಾಸವಿದೆ. ಭಾರತ ತಂಡಕ್ಕೆ ಉತ್ತಮ ಫಲಿತಾಂಶ ದೊರಕಿಸಿಕೊಡಬೇಕು ಎನ್ನುವುದೊಂದೇ ನಮ್ಮೆಲ್ಲರ ಗುರಿ’ ಎಂದು ರೋಹಿತ್‌ ಹೇಳಿದರು.

ರಾಹುಲ್‌ ಬೆಂಬಲಕ್ಕೆ ನಾಯಕ ರೋಹಿತ್‌

ಕಳೆದ ಕೆಲ ವರ್ಷಗಳಿಂದ ಅಸ್ಥಿರ ಪ್ರದರ್ಶನ ತೋರುತ್ತಿರುವ ಕರ್ನಾಟಕದ ಕೆ.ಎಲ್‌.ರಾಹುಲ್‌ರನ್ನು ನಾಯಕ ರೋಹಿತ್‌ ಬೆಂಬಲಿಸಿದ್ದು, ಅವರ ಸಾಮರ್ಥ್ಯವನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. ‘ರಾಹುಲ್‌ ಎಂಥ ಅದ್ಭುತ ಆಟಗಾರ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರನ್ನು ತಂಡದ ಆಡಳಿತ ಬೆಂಬಲಿಸಲಿದೆ. ರಾಹುಲ್‌ ಎಲ್ಲ ಪಂದ್ಯಗಳಲ್ಲೂ ಆಡಬೇಕು ಎನ್ನುವುದು ನಮ್ಮ ಇಚ್ಛೆ. ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ’ ಎಂದ ರೋಹಿತ್‌, ಬಾಂಗ್ಲಾ ವಿರುದ್ಧ 2 ಟೆಸ್ಟ್‌ಗಳಲ್ಲೂ ರಾಹುಲ್‌ ಆಡುವುದು ಖಚಿತ ಎನ್ನುವ ಸುಳಿವು ನೀಡಿದ್ದಾರೆ.

ಮಹಿಳಾ ಟಿ20 ವಿಶ್ವಕಪ್ ವಿಜೇತರಿಗೆ ಬಂಪರ್ ನಗದು ಬಹುಮಾನ ಘೋಷಿಸಿದ ಐಸಿಸಿ! ಕಳೆದ ಆವೃತ್ತಿಗಿಂತ 225% ಹೆಚ್ಚಳ

ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ಗೆ ಭಾರತ ತಂಡ ಹೀಗಿದೆ:  

ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್(ವಿಕೆಟ್ ಕೀಪರ್), ಧೃವ್ ಜುರೆಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್‌ ದಯಾಲ್.
 

Latest Videos
Follow Us:
Download App:
  • android
  • ios