IPL 2023 ಟೂರ್ನಿ ಆರಂಭಕ್ಕೂ ಮುನ್ನ ಮುಂಬೈಗೆ ಶಾಕ್, ಕೆಲ ಪಂದ್ಯಕ್ಕೆ ರೋಹಿತ್ ಅಲಭ್ಯರಾಗುವ ಸಾಧ್ಯತೆ!
ಐಪಿಎಲ್ 2023 ಟೂರ್ನಿ ಆರಂಭಕ್ಕೆ ಇನ್ನೆರಡು ದಿನ ಮಾತ್ರ ಬಾಕಿ. ಇದರ ನಡುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ನಾಯಕ ರೋಹಿತ್ ಶರ್ಮಾ ಕೆಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಮುಂಬೈ(ಮಾ.29): IPL 2023 ಟೂರ್ನಿಗೆ ವೇದಿಕೆ ರೆಡಿಯಾಗಿದೆ. ಮೆಘಾ ಟೂರ್ನಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಮುಂಬೈ ತಂಡಕ್ಕೆ ಟ್ರೋಫಿ ಮೇಲೆ ಟ್ರೋಫಿ ತಂದುಕೊಟ್ಟ ನಾಯಕ ರೋಹಿತ್ ಶರ್ಮಾ ಕೆಲ ಪಂದ್ಯಕ್ಕೆ ಅಲಭ್ಯರಾಗುವು ಸಾಧ್ಯತೆ ಇದೆ. ಈ ಕುರಿತು ಮುಂಬೈ ಇಂಡಿಯನ್ಸ್ ಟೀಂ ಮ್ಯಾನೇಜ್ಮೆಂಟ್ ಸುಳಿವು ನೀಡಿದೆ. ರೋಹಿತ್ ಅಲಭ್ಯರಾಗುವ ವೇಳೆ ಸೂರ್ಯಕುಮಾರ್ ಯಾದವ್‌ಗೆ ನಾಯಕತ್ವ ನೀಡಲು ಮುಂಬೈ ಇಂಡಿಯನ್ಸ್ ಮುಂದಾಗಿದೆ.
ರೋಹಿತ್ ಶರ್ಮಾ ಅಲಭ್ಯತೆ ಹಿಂದಿನ ಮುಖ್ಯ ಕಾರಣ ನಾಯಕನ ಮೇಲಿರುವ ಒತ್ತಡ. ಜೂನ್ 7 ರಂದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿರುವ ರೋಹಿತ್ ಶರ್ಮಾ ತಮ್ಮ ಮೇಲಿನ ಒತ್ತಡ ಹಾಗೂ ಇಂಜುರಿ ಮುಕ್ತವಾಗಿರಲು ಐಪಿಎಲ್ ಟೂರ್ನಿಯ ಕೆಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಈ ಕುರಿತು ನಾಯಕ ರೋಹಿತ್ ಶರ್ಮಾ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಫೋಟೋಗಳು: ಇದು ಚೆನ್ನೈ ಸೂಪರ್ ಕಿಂಗ್ಸ್‌ನ ಮುದ್ದು ರೋಮ್ಯಾಂಟಿಕ್ ಜೋಡಿಗಳು
ರೋಹಿತ್ ಶರ್ಮಾಗೆ ಇಂಜುರಿ ಸಮಸ್ಯೆಗಳು ಹೊಸದೇನಲ್ಲ. ಕಳೆದ ಬಾರಿ ಭಾರತ ತಂಡದ ಇಂಗ್ಲೆಂಡ್ ಪ್ರವಾಸದಿಂದ ರೋಹಿತ್ ಶರ್ಮಾ ಹೊರಗುಳಿದಿದ್ದರು. ಇದಕ್ಕೆ ಮುಖ್ಯ ಕಾರಣ ಇಂಜುರಿ. ರೋಹಿತ್ ಅಲಭ್ಯತೆಯಲ್ಲಿ ಜಸ್ಪ್ರೀತ್ ಬುಮ್ರಾ ತಂಡ ಮುನ್ನಡೆಸಿದ್ದರು. ಬಳಿಕ ಬುಮ್ರಾ ಕೂಡ ಇಂಜುರಿಯಿಂದ ಸುದೀರ್ಘವಾಗಿ ಹೊರಗುಳಿದಿದ್ದಾರೆ. ಫಿಟ್ನೆಸ್ ವಿಚಾರದಲ್ಲಿ ಪದೇ ಪದೇ ಟೀಕೆ ಎದುರಿಸುತ್ತಿರುವ ರೋಹಿತ್ ಶರ್ಮಾ, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಫಿಟ್ ಆಗಿರಲು ಹಾಗೂ ಒತ್ತಡಗಳಿಂದ ಮುಕ್ತವಾಗಿರುವ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ಇದೆ.
ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಬಳಿಕ ಏಕದಿನ ವಿಶ್ವಕಪ್ ಟೂರ್ನಿ ತಯಾರಿ ಆರಂಭಗೊಳ್ಳಲಿದೆ. ಹೀಗಾಗಿ ಫಿಟ್ನೆಸ್ ಹಾಗೂ ಮಾನಸಿಕ ಒತ್ತಡದಿಂದ ಮುಕ್ತವಾಗಿರುವುದು ಅತ್ಯವಶ್ಯಕವಾಗಿದೆ. 2020ರಲ್ಲಿ ರೋಹಿತ್ ಶರ್ಮಾ ಐಪಿಎಲ್ ಟೂರ್ನಿಯ ಕೆಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಈ ವೇಳೆ ಕೀರನ್ ಪೋಲಾರ್ಡ್ ತಂಡ ಮುನ್ನಡೆಸಿದ್ದರು. ಆದರೆ ಈ ಬಾರಿ ಕೀರನ್ ಪೋಲಾರ್ಡ್ ಬ್ಯಾಟಿಂಗ್ ಕೋಚ್ ಆಗಿ ಬಡ್ತಿ ಪಡೆದಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್‌ಗೆ ನಾಯಕತ್ವ ನೀಡಲು ಮುಂಬೈ ಮುಂದಾಗಿದೆ. ರಣಜಿ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ.
IPL 2023: ವಿರಾಟ್ ಕೊಹ್ಲಿ ಕೊಂಚ ಅಹಂಕಾರಿ ಎಂದುಕೊಂಡಿದ್ದೆ..! ಎಬಿಡಿ ಬಿಚ್ಚುಮಾತು ವೈರಲ್
ಐಪಿಎಲ್‌ನಿಂದ ಮೊಹ್ಸಿನ್,ಮುಕೇಶ್ ಚೌಧರಿ ಔಟ್?
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಗಮನ ಸೆಳೆದಿದ್ದ ಯುವ ಎಡಗೈ ವೇಗಿಗಳಾದ ಮುಕೇಶ್ ಚೌಧರಿ ಹಾಗೂ ಮೊಹ್ಸಿನ್ ಖಾನ್ ಮುಂಬರುವ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡುವುದು ಅನುಮಾನವೆನಿಸಿದೆ. ಚೆನ್ನೈ ಸೂಪರ್ ಕಿಂಗ್‌್ಸನ ಮುಕೇಶ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಲಖನೌ ಸೂಪರ್ ಜೈಂಟ್ಸ್‌ನ ಮೊಹ್ಸಿನ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ.