ಫೋಟೋಗಳು: ಇದು ಚೆನ್ನೈ ಸೂಪರ್ ಕಿಂಗ್ಸ್‌ನ ಮುದ್ದು ರೋಮ್ಯಾಂಟಿಕ್ ಜೋಡಿಗಳು
ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) 16ನೇ ಸೀಸನ್ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಮತ್ತೊಮ್ಮೆ 10 ತಂಡಗಳು ಆಕ್ಷನ್ ಮೋಡ್‌ನಲ್ಲಿ ಕಾಣಿಸಿಕೊಳ್ಳಲಿವೆ. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್‌ನ (CSK) 8 ಅತ್ಯಂತ ರೊಮ್ಯಾಂಟಿಕ್ ಜೋಡಿಗಳ ಮಾಹಿತಿ ಇಲ್ಲಿದೆ.
ಮಹೇಂದ್ರ ಸಿಂಗ್ ಧೋನಿ-ಸಾಕ್ಷಿ ಧೋನಿ: ಚೆನ್ನೈ ಸೂಪರ್ ಕಿಂಗ್ಸ್‌ನ ಮುದ್ದಾದ ಮತ್ತು ಅತ್ಯಂತ ರೊಮ್ಯಾಂಟಿಕ್ ಜೋಡಿಗಳಲ್ಲಿ ಒಬ್ಬರು ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಧೋನಿ. ಇವರು 4 ಜುಲೈ 2010 ರಂದು ಪರಸ್ಪರ ವಿವಾಹವಾದರು ಮತ್ತು ಇಬ್ಬರಿಗೂ ಜೀವಾ ಎಂಬ ಮಗಳಿದ್ದಾಳೆ.
ರಾಬಿನ್ ಉತ್ತಪ್ಪ-ಶೀತಲ್ ಗೌತಮ್: ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ತಮ್ಮ ಬಹುಕಾಲದ ಗೆಳತಿ ಶೀತಲ್ ಗೌತಮ್ ಅವರನ್ನು ಒಂದಲ್ಲ ಎರಡು ಬಾರಿ ವಿವಾಹವಾದರು. ವಾಸ್ತವವಾಗಿ, ಇಬ್ಬರೂ ಮೊದಲು ಮಾರ್ಚ್ 3, 2016 ರಂದು ಕ್ರಿಶ್ಚಿಯನ್ ಧರ್ಮದಂತೆ ಮದುವೆಯಾದರು ನಂತರ ಮಾರ್ಚ್ 11, 2016 ರಂದು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದರು. ಈ ಜೋಡಿಗೆ 2 ಮಕ್ಕಳಿವೆ.
ರವೀಂದ್ರ ಜಡೇಜಾ ರಿವಾ ಸೋಲಂಕಿ:ಸಿಎಸ್‌ಕೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾ ಸೋಲಂಕಿ, ಅವರು ಬಿಜೆಪಿ ಶಾಸಕರಾಗಿದ್ದಾರೆ. ಇದರೊಂದಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೂಡ ಮಾಡಿದ್ದಾರೆ. ಇಬ್ಬರೂ 17 ಏಪ್ರಿಲ್ 2016 ರಂದು ವಿವಾಹವಾದರು ಮತ್ತು ಇಬ್ಬರಿಗೂ ಹೆಣ್ಣು ಮಗುವಿದೆ.
ಅಂಬಟಿ ರಾಯುಡು-ಚೆನ್ನಪಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಅಂಬಟಿ ರಾಯುಡು ಅವರು 2009 ರಲ್ಲಿ ಪ್ರೇಮಿಗಳ ದಿನದಂದು ತಮ್ಮ ಕಾಲೇಜು ಗೆಳತಿ ಚೆನ್ನಪಲ್ಲಿ ಅವರನ್ನು ವಿವಾಹವಾದರು ಮತ್ತು 11 ವರ್ಷಗಳ ಮದುವೆಯ ನಂತರ, ಜುಲೈ 2020 ರಲ್ಲಿ ಅವರಿಗೆ ಮಗಳು ಜನಿಸಿದಳು.
ದೀಪಕ್ ಚಹರ್-ಜಯ ಭಾರದ್ವಾಜ್: ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ದೀಪಕ್ ಚಹಾರ್ ಕಳೆದ ವರ್ಷ ದೆಹಲಿ ಮೂಲದ ಜಯ ಭಾರದ್ವಾಜ್ ಅವರೊಂದಿಗೆ ವಿವಾಹವಾದರು, ಅವರು ಪ್ರಸಿದ್ಧ ವಿಜೆ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ.
ಬೆನ್ ಸ್ಟೋಕ್ಸ್-ಕ್ಲೇರ್: ಚೆನ್ನೈ ಸೂಪರ್ ಕಿಂಗ್ಸ್ ಫಾರಿನ್ ಆಟಗಾರ ಬೆನ್ ಸ್ಟೋಕ್ಸ್ ಅವರ ಪತ್ನಿಯ ಹೆಸರು ಕ್ಲೇರ್ ರಾಟ್‌ಕ್ಲಿಫ್, ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ ಮತ್ತು ಈ ಹಾಟ್ ಜೋಡಿಗೆ ಮೂವರು ಮಕ್ಕಳಿವೆ.
ಶಿವಂ ದುಬೆ-ಅಂಜುಮ್ ಖಾನ್: ಶಿವಂ ದುಬೆ ಅವರು ಅಂಜುಮ್ ಖಾನ್ ಎಂಬುವವರನ್ನು 17 ಜುಲೈ 2021 ರಂದು ಹಿಂದೂ-ಮುಸ್ಲಿಂ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಇಬ್ಬರ ಮದುವೆಯ ಫೋಟೋಗಳು ವೈರಲ್ ಆಗಿವೆ.
imran tahir and wife
ಇಮ್ರಾನ್ ತಾಹಿರ್-ಸುಮಯ್ಯ ದಿಲ್ದಾರ್: ಸುಮೈಯಾ ದಿಲ್ದಾರ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಸ್ಪಿನ್ನರ್ ಇಮ್ರಾನ್ ತಾಹಿರ್ ಅವರ ಪತ್ನಿ. 2007ರಲ್ಲಿ ಇಬ್ಬರೂ ಮದುವೆಯಾಗಿದ್ದರು. ಇಬ್ಬರಿಗೂ ಗಿಬ್ರಾನ್ ಎಂಬ ಮಗನಿದ್ದಾನೆ. ಇಮ್ರಾನ್ ಪತ್ನಿ ಕೂಡ ವೃತ್ತಿಪರ ರೂಪದರ್ಶಿ. ಆದರೆ, ಮದುವೆ ನಂತರ ಅವರು ಗೃಹಿಣಿ ಮನೆ ಮತ್ತು ಮಗುವಿನ ಜವಾಬ್ದರಾರಿ ತೆಗೆದುಕೊಂಡಿದ್ದಾರೆ.