ಬಿಜೆಪಿ ಸೇರಿಕೊಳ್ತಾರ ಧೋನಿ? ಅಮಿತ್ ಶಾ ಜೊತೆ ಕಾಣಿಸಿಕೊಂಡ ಕ್ಯಾಪ್ಟನ್ ಕೂಲ್!
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಕಳೆದ ಕೆಲದಿನದಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಇದರ ಬೆನ್ನಲ್ಲೇ ಫೋಟೋ ಒಂದು ಭಾರಿ ಸಂಚಲನ ಸೃಷ್ಟಿಸಿದೆ. ಮಾಜಿ ನಾಯಕ ಎಂ.ಎಸ್.ಧೋನಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಚೆನ್ನೈ(ನ.12): ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಾಣುತ್ತಿದ್ದಂತೆ ಮಾಜಿ ನಾಯಕ ಎಂ.ಎಸ್.ಧೋನಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದರು. ಬಹುತೇಕ ಟೀಂ ಇಂಡಿಯಾ ಅಭಿಮಾನಿಗಳು ಮಿಸ್ ಯು ಧೋನಿ ಎಂದು ಟ್ವೀಟ್ ಮಾಡಿದ್ದರು. ಧೋನಿ ಅನುಪಸ್ಥಿತಿಯಲ್ಲಿ ಐಸಿಸಿ ಟ್ರೋಫಿ ಮರೀಚಿಕೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಧೋನಿ ಮತ್ತೆ ಟ್ರೆಂಡ್ ಆಗಿದ್ದಾರೆ. ಈ ಬಾರಿ ಧೋನಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯ ಫೋಟೋ ಭಾರಿ ಸಂಚನಲ ಸೃಷ್ಟಿಸಿದೆ. ಕೇವಲ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಸಕ್ರಿಯವಾಗಿರುವ ಧೋನಿ, ರಾಜಕೀಯಕ್ಕೆ ಕಾಲಿಡುತ್ತಾರಾ? ಬಿಜೆಪಿ ಸೇರಿಕೊಳ್ಳುತ್ತಾರಾ ಅನ್ನೋ ಚರ್ಚೆಗಳು ಶುರುವಾಗಿದೆ.
ಎಂ.ಎಸ್,ಧೋನಿ, ಗೃಹ ಸಚಿವ ಅಮಿತ್ ಶಾ ಕೈಗುಲುವು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚೆನ್ನೈನಲ್ಲಿ ಧೋನಿ ಹಾಗೂ ಅಮಿತ್ ಶಾ ಭೇಟಿಯಾಗಿದ್ದಾರೆ. ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಮಾಲೀಕತ್ವದ ಇಂಡಿಯಾ ಸಿಮೆಂಟ್ ಸಂಸ್ಥೆ 75ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲಿ ಅಮಿತ್ ಶಾ ಹಾಗೂ ಧೋನಿ ಪಾಲ್ಗೊಂಡಿದ್ದರು.
ಟೀಂ ಇಂಡಿಯಾಗೆ ಚೋಕರ್ಸ್ ಪಟ್ಟ, ಮಿಸ್ ಯು ಧೋನಿ ಎಂದ ಭಾರತ!
ಈ ಕಾರ್ಯಕ್ರಮಕ್ಕೆ ಎನ್ ಶ್ರೀನಿವಾಸನ್ ಅಮಿತ್ ಶಾ, ಧೋನಿ ಜೊತೆಗೆ, ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಇಂಡಿಯಾ ಸಿಮೆಂಟ್ ಸಂಸ್ಥೆ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕತ್ವ ಹೊಂದಿದೆ. ಈ ಚಾಂಪಿಯನ್ ತಂಡಕ್ಕೆ ಧೋನಿ ನಾಯಕರಾಗಿದ್ದಾರೆ.
2023ರಲ್ಲೂ ಸಿಎಸ್‌ಕೆಗೆ ಧೋನಿಯೇ ನಾಯಕ
2023ರ ಐಪಿಎಲ್‌ನಲ್ಲಿ ಎಂ.ಎಸ್.ಧೋನಿ ಆಡಲಿದ್ದಾರೆ ಎನ್ನುವ ವಿಷಯವನ್ನು ಖಚಿತಪಡಿಸಿರುವ ಚೆನ್ನೈ ಸೂಪರ್ ಕಿಂಗ್‌್ಸ ತಂಡದ ಸಿಇಒ ಕಾಶಿ ವಿಶ್ವನಾಥನ್, ಧೋನಿಯೇ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ. 2022ರ ಆವೃತ್ತಿಯ ಆರಂಭದಲ್ಲಿ ನಾಯಕತ್ವದಿಂದ ಹಿಂದೆ ಸರಿದಿದ್ದ ಧೋನಿ, ರವೀಂದ್ರ ಜಡೇಜಾಗೆ ಜವಾಬ್ದಾರಿ ವಹಿಸಿದ್ದರು. ಆದರೆ ಜಡೇಜಾ ಅವರ ನಾಯಕತ್ವದಲ್ಲಿ ತಂಡ ಉತ್ತಮ ಆಟವಾಡದ ಕಾರಣ ಧೋನಿ ಮತ್ತೊಮ್ಮೆ ತಂಡ ಮುನ್ನಡೆಸುವ ಹೊಣೆ ಹೊತ್ತಿದ್ದರು. 2022ರ ಆವೃತ್ತಿ ಬಳಿಕ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆ ಸುದ್ದಿ ಸುಳ್ಳು ಎಂದು ಸಿಎಸ್‌ಕೆ ಸ್ಪಷ್ಟಪಡಿಸಿದೆ.
Biggest Taxpayer of Jharkhand: ಎಂಎಸ್ ಧೋನಿ ಕಟ್ಟಿರುವ ಮುಂಗಡ ತೆರಿಗೆ ಇಷ್ಟೊಂದಾ?
ಐಪಿಎಲ್: ಜಡೇಜಾ ಚೆನ್ನೈ ತಂಡದಲ್ಲೇ ಆಡುವ ಸಾಧ್ಯತೆ
ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ ಮುಂದಿನ ಆವೃತ್ತಿ ಐಪಿಎಲ್‌ನಲ್ಲೂ ಚೆನ್ನೈ ಸೂಪರ್ ಕಿಂಗ್‌್ಸ ಪರ ಆಡುವ ಸಾಧ್ಯತೆ ಇದೆ. ಅವರನ್ನು ಮಿನಿ ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟು ಡೆಲ್ಲಿ ಕ್ಯಾಪಿಟಲ್ಸ್‌ನ ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್‌ರನ್ನು ತಂಡಕ್ಕೆ ಸೇರಿಸಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ ನಾಯಕ ಧೋನಿಯ ಮನವಿ ಬಳಿಕ ಫ್ರಾಂಚೈಸಿಯು ಜಡೇಜಾರನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಕಳೆದ ಆವೃತ್ತಿಯ ಟೂರ್ನಿಯ ಮಧ್ಯದಲ್ಲೇ ನಾಯಕತ್ವದಿಂದ ಕೆಳಗಿಳಿದಿದ್ದ ಜಡೇಜಾ, ಬಳಿಕ ಚೆನ್ನೈ ತಂಡಕ್ಕೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಿಂದ ಅಳಿಸಿ ಹಾಕಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು.