ನವದೆಹಲಿ[ಡಿ.25]: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಹಿರಿಯ ಪತ್ರಕರ್ತ ಹಾಗೂ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಸಹಮತ ವ್ಯಕ್ತಪಡಿಸಿದ್ದಾರೆ. 

ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಪರಿಹಾರ ಇಲ್ಲ! ಆದೇಶ ಹಿಂಪಡೆದ ಸಿಎಂ

ತಮಗೇನು ಬೇಕು ಎನ್ನುವುದನ್ನು ಯುವ ಭಾರತ ಮಾತಾಡುತ್ತಿದೆ. ನಮ್ಮ ಸರ್ಕಾರ, ಶಿಕ್ಷಣ, ಮೂಲ ಸೌಕರ್ಯ, ತಂತ್ರಜ್ಞಾನದ ಬಗ್ಗೆ  ಪುನರ್ ವಿಮರ್ಶಿಸಲು ಇದು ಸೂಕ್ತ ಕಾಲ ಎನಿಸುತ್ತಿದೆ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಉಲ್ಲೇಖಿಸಿರುವ ಅವರು, ಯುವ ಜನತೆ ನಮ್ಮ ಜತೆ ಮಾತಾಡುತ್ತಿದೆ. ಯುವ ಭಾರತ ತಮಗೇನು ಬೇಕೆನ್ನುವುದನ್ನು ಹೇಳುತ್ತಿದೆ. ಇದರ ಜತೆಗೆ ನಾವು ಹೇಳುತ್ತಿರುವುದು ಬೇಡ ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಮುಂದುವರೆದು, ಅಧಿಕಾರದಲ್ಲಿರುವವರು ಯುವ ಪೀಳಿಗೆ ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳು ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ನಾವು ಒಳ್ಳೆಯ ಇನಿಂಗ್ಸ್ ಕಟ್ಟಿದ್ದೇವೆ. ವಾಗ್ಯುದ್ಧ, ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳು ನಮ್ಮ ಮುಂದಿನ ಪೀಳಿಗೆಗೆ ಹೊರೆಯಾಗದಿರಲಿ. ನಮಗಿಂತ ಉತ್ತಮ ಭವಿಷ್ಯ ನಮ್ಮ ಯುವ ಪೀಳಿಗೆಯದ್ದಾಗಲಿ. ಅವರನ್ನು ಅವರ ಪಾಡಿಗೆ ಬಿಡಿ. ಅವರು ಸಂತೋಷವಾಗಿ, ಜಾತ್ಯಾತೀತರಾಗಿ, ಉದಾರವಾದ, ವಿಶಾಲವಾದ ಮನೋಭಾವ ರೂಪಿಸಿಕೊಂಡು ಜಗತ್ತಿನ ಉತ್ತಮ ವ್ಯಕ್ತಿಗಳಾಗಿ ಬೆಳೆಯಲಿ ಎಂದು ಹಾರೈಸಿದ್ದಾರೆ. 

ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನದಲ್ಲಿ 2020ರ IPL ಫೈನಲ್ ಪಂದ್ಯ?

ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶಾದ್ಯಂತ ವ್ಯಾಪಕ ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪೌರತ್ವ ತಿದ್ದುಪಡಿ ಕಾಯ್ದೆಯ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ